»   »  ವಿದ್ಯಾರ್ಥಿಗಳಿಗೆ 'ಸತ್ಯ ಹರಿಶ್ಚಂದ್ರ' 175ನೇ ಪಾಠ

ವಿದ್ಯಾರ್ಥಿಗಳಿಗೆ 'ಸತ್ಯ ಹರಿಶ್ಚಂದ್ರ' 175ನೇ ಪಾಠ

Subscribe to Filmibeat Kannada
ವರನಟ ಡಾ.ರಾಜ್ ಕುಮಾರ್ ಅವರ ಅಮೋಘ ನಟನೆಯ 'ಸತ್ಯ ಹರಿಶ್ಚಂದ್ರ' ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಸುತ್ತೋಲೆ ಹೊರಡಿಸಿತ್ತು.

ಈ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕಳೆದ ಒಂದು ವರ್ಷದಲ್ಲಿ ಸತ್ಯ ಹರಿಶ್ಚಂದ್ರ 174 ಪ್ರದರ್ಶನಗಳನ್ನು ಖಂಡಿದೆ. ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇದೇ ಶುಕ್ರವಾರ(ಜೂನ್19) 175ನೇ ಪ್ರದರ್ಶವನ್ನು ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಬೆಳಗ್ಗೆ ಏರ್ಪಡಿಸಲಾಗಿದೆ.

1960ರಲ್ಲಿ ಸತ್ಯ ಹರಿಶ್ಚಂದ್ರ ಚಿತ್ರ ಕಪ್ಪು ಬಿಳುಪಿನಲ್ಲಿ ತೆರೆಕಂಡಿತ್ತು. ಕಳೆದ ವರ್ಷ ಈ ಚಿತ್ರವನ್ನು ಬಣ್ಣದ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು. ಬಣ್ಣದ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಎಂಬ ಖ್ಯಾತಿಗೆ ಸತ್ಯ ಹರಿಶ್ಚಂದ್ರ ಪಾತ್ರವಾಗಿದೆ. 'ಮುಗಲ್ ಇ ಅಜಂ' ಮತ್ತು 'ನಯಾ ದೌರ್' ಬಣ್ಣದಲ್ಲಿ ಬಂದ ಇನ್ನೆರಡು ಚಿತ್ರಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

Kannada Photos

Go to : More Photos