ಬೆಂಗಳೂರಿನಲ್ಲಿ ಗೋಲ್ಡನ್ ಸ್ಟಾರ್, ಭಾವನಾ ಡಾನ್ಸ್

Posted by:

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಲವರ್ ಬಾಯ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರ ರೋಮಿಯೋ. ಇಬ್ಬರು ಪ್ರೇಮಿಗಳ ಮಧುರ ಕಾವ್ಯವೆ 'ರೋಮಿಯೋ. ಇತ್ತೀಚೆಗೆ ಈ ಚಿತ್ರದ ಹಾಡಿನ ಚಿತ್ರೀಕರಣ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯಿತು.

ಕವಿರಾಜ್ ಬರೆದಿರುವ ಆಲೋಚನೆ ಆರಾಧನೆ ಎಲ್ಲಾ ನಿನ್ನಿಂದಲೇ ಎಂಬ ಹಾಡಿಗೆ ಗಣೇಶ್ ಹಾಗೂ ಭಾವನಾ ವಿದೇಶಿ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ಈ ಹಾಡಿಗೆ ಶ್ರೀಲಕ್ಷ್ಮೀ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕಿ ಶ್ರೇಯಾಘೋಶಾಲ್ ಈ ಹಾಡನ್ನು ಹಾಡಿದ್ದಾರೆ.

ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ. ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್‌ಕುಮಾರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. (ಒನ್‌ಇಂಡಿಯಾ ಕನ್ನಡ)

Read more about: ಗಣೇಶ್, ಗೋಲ್ಡನ್ ಸ್ಟಾರ್, ಭಾವನಾ, ರೋಮಿಯೋ, ganesh, golden star, bhavana, romeo

English summary
Golden Star Ganesh's latest release Shailoo was running successfully in theaters and the star is caught busy in the shooting of his next film Romeo. Recently the song sequence between Ganesh and actress Bhavana held at Abbai naidu studio.
Please Wait while comments are loading...

Kannada Photos

Go to : More Photos