twitter
    For Quick Alerts
    ALLOW NOTIFICATIONS  
    For Daily Alerts

    ರಾಜಕುಮಾರ್ ಅಪಹರಣ ಕೇಸ್, ಪಾರ್ವತಮ್ಮ ಗೆ ಸಮನ್ಸ್

    |

    Dr.Rajkumar with Veerappan
    ವರನಟ ಡಾ. ರಾಜಕುಮಾರ್ ಅಪಹರಣಕ್ಕೆ ಸಂಬಂಧಿಸಿದಂತೆ ಪಾರ್ವತಮ್ಮ ರಾಜಕುಮಾರ್ ಅವರಿಗೆ ಗೋಪಿಚೆಟ್ಟಿಪಾಲ್ಯಂ ಫಾಸ್ಟ್ ಟ್ರ್ಯಾಕ್ ಕೋರ್ಟ್ ನಾಳೆ (ಗುರುವಾರ ಅ 20 ) ಖುದ್ದು ಹಾಜರಾಗುವಂತೆ ಆದೇಶ ಹೊರಡಿಸಿದೆ. ಪಾರ್ವತಮ್ಮ ಅವರು ಈ ಕೇಸಿನ ಪ್ರಮುಖ ಸಾಕ್ಷಿಯಾಗಿರುವುದರಿಂದ ತಪ್ಪದೆ ಹಾಜಾರಗಬೇಕೆಂದು ಕೋರ್ಟ್ ಆದೇಶಿಸಿದೆ.

    ದಂತಚೋರ ವೀರಪ್ಪನ್ ರಾಜಕುಮಾರ್ ಅವರನ್ನು 2000 ಇಸವಿಯಲ್ಲಿ ಅಪಹರಿಸಿ 108 ದಿನಗಳ ಕಾಲ ತನ್ನ ಬಂಧನದಲ್ಲಿ ಇರಿಸಿ ಕೊಂಡಿದ್ದ. ಇದಕ್ಕೆ ಸಂಬಂಧಪಟ್ಟ ಕೇಸ್ ಗೋಪಿಚೆಟ್ಟಿಪಾಲ್ಯಂ ಫಾಸ್ಟ್ ಟ್ರ್ಯಾಕ್ ಕೋರ್ಟ್ ನಲ್ಲಿ ಬಗೆಹರಿಯದೆ ಉಳಿದಿರುವುದರಿಂದ ಪಾರ್ವತಮ್ಮ ಈಗ ಕೋರ್ಟ್ ಕಟಕಟೆಯಲ್ಲಿ ನಿಲ್ಲ ಬೇಕಾಗಿದೆ.

    ಇದಲ್ಲದೆ ತಮಿಳುನಾಡಿನ ಈರೋಡ್ ಜಿಲ್ಲೆಯ ಮಾಜಿ ಕಲೆಕ್ಟರ್ ಬಾಲಚಂದ್ರನ್ ಮತ್ತು ಮಹೇಶನ್ ಕಾಸಿರಾಜನ್ ಅವರನ್ನೂ ಕೂಡ ಸರಕಾರೀ ಸಾಕ್ಷಿ ಎಂದು ಕೋರ್ಟ್ ಪರಿಗಣಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪಾರ್ವತಮ್ಮ ನಾಳೆ ಕೋರ್ಟ್ ಗೆ ಹಾಜರಾಗುವುದು ಬಹುತೇಕ ಖಚಿತವಾಗಿದೆ. ಹೆಚ್ಚಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

    English summary
    Gopichetti Palyam fast track court has summoned late Kannada Super Star Dr. Rajakumar's wife Parvathamma to appear before the court tomorrow in Dr.Rajkumar kidnap case.
 Dr. Raj was kidnapped by sandalwood smuggler Veerappan in the year 2000 and released after 108 days. This case is pending before Gobi fast track court. Former Erode Collectors Balachandran and Maheshan Kasirajan have been included as govt witnesses.
    Wednesday, October 19, 2011, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X