ಕನ್ನಡ ಚಿತ್ರರಂಗಕ್ಕೆ ಟೂ ಬಿಟ್ಟಿದ್ದ ಸದಾ ಆಗಮನ

Give your rating:

ಮೋಹಿನಿ ಚಿತ್ರದ ನಂತರ ದೂರ ಸರಿದಿದ್ದ ಮೋಹಕ ಚೆಲುವೆ ಸದಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಆಕೆ ನಟಿಸಿದ್ದ ಮೋಹಿನಿ ಚಿತ್ರ ವ್ಯವಹಾರಿಕವಾಗಿ ಗೆದ್ದಿತ್ತು. ಆದರೆ ಚಿತ್ರೀಕರಣದಲ್ಲಿ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ಕಾರಣ ಕೊಟ್ಟು ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು.

'ಮೊಗ್ಗಿನ ಮನಸು' ಖ್ಯಾತಿಯ ಶಶಾಂಕ್ ರ ಹೆಸರಿಡದ ಚಿತ್ರಕ್ಕೆ ಸದಾ ಈಗಾಗಲೇ ಸಹಿ ಹಾಕಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಮೊನಾಲಿಸಾ' ಚಿತ್ರ ಸದಾ ಅಭಿನಯಿಸಿದ ಮೊದಲ ಕನ್ನಡ ಚಿತ್ರ. ಆ ಚಿತ್ರ ತೆಲುಗು ಭಾಷೆಗೂ ಡಬ್ ಆಗಿತ್ತು. ಮೋಹಿನಿ ಆಕೆ ನಟಿಸಿದ ಎರಡನೆಯ ಕನ್ನಡ ಚಿತ್ರ. ಇದಾದ ಬಳಿಕ ಆಕೆ ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡಲು ಸಾಧ್ಯವಾಗಲೇ ಇಲ್ಲ.

ಸದಾ ತೆಲುಗಿನಲ್ಲಿ ನಟಿಸಿದ್ದ ಮೊದಲ ಚಿತ್ರ 'ಜಯಂ' ಭರ್ಜರಿ ಯಶಸ್ಸನ್ನು ದಾಖಲಿಸಿತ್ತು. ಇದೇ ಚಿತ್ರ ತಮಿಳಿಗೂ ರೀಮೇಕ್ ಆಯಿತು. ಅಲ್ಲೂ ಯಶಸ್ಸಿನ ದಾಖಲೆ ಸೃಷ್ಟಿಸಿತು. ನಂತರ ಆಕೆಗೆ ಸಾಲು ಸಾಲು ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತಾದರೂ, ಆರಕ್ಕೇರದ ಮೂರಕ್ಕ್ಕಿಳಿಯದ ಪರಿಸ್ಥಿತಿ. ಹಾಗಾಗಿ ಹಳೆ ಗಂಡನ ಪಾದವೇ ಗತಿ ಎಂಬಂತೆ ಮತ್ತೆ ಕನ್ನಡಕ್ಕೆ ಆಗಮಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

&13;

ಸದಾಗೆ 'ಅಪ್ಪ"ನೆಂಬ ಮಗ್ಗುಲ ಮುಳ್ಳು?

Read more about: ಕನ್ನಡ ನಟಿ, ಕನ್ನಡ ಸಿನಿಮಾ, kannada movies, ಮೊಗ್ಗಿನ ಮನಸು, ಶಶಾಂಕ್, moggina manasu, shashank, ಇಂದ್ರಜಿತ್ ಲಂಕೇಶ್, ಸದಾ, ಮೊನಾಲಿಸಾ, ಮೋಹಿನಿ, sada, monalisa, mohini, jayam, kannada actresses

Please Wait while comments are loading...

Kannada Photos

Go to : More Photos