ಮೈಲಾರಿಗೆ ಜೊತೆಯಾದ ಮೋಹಿನಿ ಸದಾ

Posted by:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ 'ಮೈಲಾರಿ'ಗೆ ಮೋಹಕ ತಾರೆ ಸದಾ ಜತೆಯಾಗಲಿದ್ದಾರೆ. 'ತಾಜ್ ಮಹಲ್' ಖ್ಯಾತಿಯ ಆರ್ ಚಂದ್ರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು ಕನಕಪುರ ಶ್ರೀನಿವಾಸ್ ಅವರು ಆರ್ ಎಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಹಿಂದೆ ನಟ ಆದಿತ್ಯ ಜೊತೆ ಮೋಹಿನಿ ಮತ್ತು ಧ್ಯಾನ್ ಜೊತೆ ಮೊನಲೀಸಾ ಚಿತ್ರಗಳಲ್ಲಿ ನಟಿ ಸದಾ ನಟಿಸಿದ್ದರು. ಇದೀಗ 'ಮೈಲಾರಿ' ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದಾರೆ. ಈಗಾಗಲೆ ಅಶ್ವಿನಿ ಪ್ರೊಡಕ್ಷನ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಮೈಲಾರಿ' ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಅದೇ ಶೀರ್ಷಿಕೆಯನ್ನ್ನು ಪಡೆಯುವ ಬಗ್ಗೆ ಆರ್ ಚಂದ್ರು ತೀವ್ರ ಪ್ರಯತ್ನದಲ್ಲಿದ್ದಾರೆ.

ಈ ಚಿತ್ರದಲ್ಲಿ ಸ್ವಾತಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಇತ್ತು. ಅವರ ಡೇಟ್ಸ್ ಗಾಗಿ ಪ್ರಯತ್ನಿಸುತ್ತಿರುವುದಾಗಿ ಚಂದ್ರು ತಿಳಿಸಿದ್ದರು.ಆದರೆ ಇದೀಗ ಸದಾ ಬರುತ್ತಿದ್ದಾರೆ. ಕನಕಪುರ ಶ್ರೀನಿವಾಸ್ ಈ ಹಿಂದೆ ಶಿವರಾಜ್ ಕುಮಾರ್ ಜೊತೆ 'ಯುವರಾಜ' ಮತ್ತು 'ಸಂತ' ಚಿತ್ರಗಳನ್ನು ನಿರ್ಮಿಸಿದ್ದರು. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.

Read more about: ಮೈಲಾರಿ, ಶಿವರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ, ಸದಾ, ಮೊನಾಲಿಸಾ, ಆರ್ ಚಂದ್ರು, mylari, shiva rajkumar, hatrick hero, sada, r chandru, srinivas, mohini, monalisa
Please Wait while comments are loading...

Kannada Photos

Go to : More Photos