ಆ ದಿನಗಳು ಚೇತನ್ ಗೆ ಮತ್ತೊಮ್ಮೆ ಶುಭದಿನಗಳು

Posted by:

ಆ ದಿನಗಳು ಚೇತನ್ ಗೆ ಮತ್ತೊಮ್ಮೆ ಶುಭದಿನಗಳು
ಆ ದಿನಗಳು ಚೇತನ್ ದಶಮುಖದಲ್ಲಿ ಅಭಿನಯಿಸುತ್ತಿರುವುದು ಹಳೆ ಸುದ್ದಿ. ಹೊಸ ಸುದ್ದಿಯೆಂದರೆ 'ವಿಧುರ' ಎಂಬ ಹೊಸ ಚಿತ್ರದಲ್ಲಿ ಅವರು ನಟಿಸಲು ಒಪ್ಪೊಕೊಂಡಿರುವುದು. ಕಲಾವಿದರ ಹೊರತಾಗಿ ಬಹುತೇಕ ಹೊಸ ತಂತ್ರಜ್ಞರೇ ಇದರಲ್ಲಿದ್ದಾರೆ. ನಿಶಾಲ್ ಗೌಡ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣ ಆಗಲಿರುವ ಈ ಚಿತ್ರಕ್ಕೆ ಹಣ ಬಾಲರಾಜ್ ಗೌಡ ಅವರದು. ಮುಕುಂದ ಪ್ರಿಯ ನಿರ್ದೇಶಕರು.

ಚೇತನ್ ಗೆ ನಾಯಕಿಯಾಗಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಆಯ್ಕೆ ಬಹುತೇಕ ಖಚಿತವಾಗಿದೆ. ಪ್ರಥಮ ಬಾರಿಗೆ ಪರಸ್ಪರ ಒಟ್ಟಿಗೆ ಅಭಿನಯಿಸಲಿರುವುದು ಇಬ್ಬರ ಅಭಿಮಾನಿಗಳಿಗೂ ಖುಷಿಯ ಸಮಾಚಾರ. ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಖ್ಯಾತ ನಟ ಗಿರೀಶ್ ಕಾರ್ನಾಡ್ ಹಾಗೂ ಅವರೊಂದಿಗೆ ನಟಿ ಮಾಳವಿಕಾ ಕಾಣಿಸಿಕೊಳ್ಳಲಿದ್ದಾರೆ.

ಆ ದಿನಗಳು ಮೂಲಕ ಚೆಲುವ ಚೇತನ್ ಕನ್ನಡದ ಸಿನಿಪ್ರೇಕ್ಷಕರಿಗೆ ಭರವಸೆ ಹುಟ್ಟಿಸಿದ ನಟ. ಒಂದೇ ಚಿತ್ರ ಮೂಲಕ ಸಾಕಷ್ಟು ಎತ್ತರದಲ್ಲಿದ್ದ ನಟ ನಂತರ ಎರಡ್ಮೂರು ಚಿತ್ರಗಳೊಂದಿಗೆ ನೇಪಥ್ಯಕ್ಕೆ ಸರಿದಿದ್ದರು. ಅವರ ಅಭಿಮಾನಿಗಳಿಗೆ ಇದು ಅರಗಿಸಿಕೊಳ್ಳಲಾಗದ ಸಂಗತಿಯಾಗಿತ್ತು. ದಶಮುಖದಲ್ಲಿ ಮುಖತೋರಿಸುವುದು ಖಾತ್ರಿಯಾದ ಮೇಲೆ ಖುಷಿಯಾಗಿದ್ದ ಅಭಿಮಾನಿಗಳಿಗೆ ಈಗ ವಿಧುರನಾಗುತ್ತಿರುವುದು ಇನ್ನೂ ಸಂತೋಷದ ಸಮಾಚಾರ. (ಒನ್ ಇಂಡಿಯಾ ಕನ್ನಡ)

Read more about: ಚೇತನ್, ಬಿರುಗಾಳಿ, ಆ ದಿನಗಳು, ಸೂರ್ಯಕಾಂತಿ, chetan, birugali, suryakanthi, aa dinagalu

English summary
Aa Dinagalu kannada movie fame actor Chetan Kumar Acts in Movie Vidura. Kannada actress Nidhi Subbaya will be the Heroine.

Kannada Photos

Go to : More Photos