twitter
    For Quick Alerts
    ALLOW NOTIFICATIONS  
    For Daily Alerts

    ಈ ವರ್ಷ ಬೆಳ್ಳಿತೆರೆಯಲ್ಲಿ ರಾರಾಜಿಸಿದ 'ಸಾರ್ವಕಾಲಿಕ' ಹಿಟ್ ಚಿತ್ರಗಳು!

    By Bharath Kumar
    |

    2016, ಕೇವಲ ಹೊಸ ಸಿನಿಮಾಗಳು ಹಾಗೂ ಹೊಸ ನಟರಿಗೆ ಮಾತ್ರ ಸಾಕ್ಷಿಯಾಗಿರಲಿಲ್ಲ. ಕನ್ನಡದ ಸೂಪರ್ ಸ್ಟಾರ್ ದಿಗ್ಗಜ ನಟರನ್ನ ಬೆಳ್ಳಿತೆರೆಯಲ್ಲಿ ನೋಡುವ ಸಂಭ್ರಮಕ್ಕೂ ಸಾಕ್ಷಿಯಾಗಿತ್ತು.

    ದೈಹಿಕವಾಗಿ ನಮ್ಮನ್ನಗಲಿದ್ದರೂ, ಪ್ರತಿಯೊಬ್ಬ ಅಭಿಮಾನಿಯ ಮನದಲ್ಲಿ 'ಅಣ್ಣಾವ್ರು' ಎನಿಸಿಕೊಂಡಿರುವ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರನ್ನ ಮತ್ತೆ ಈ ವರ್ಷ ಚಿತ್ರಮಂದಿರದಲ್ಲಿ ನೋಡವಂತಾಯಿತು.

    ಕನ್ನಡದ ಚಿತ್ರರಂಗದಲ್ಲಿ ಸಾರ್ವಕಾಲಿಕ ಹಿಟ್ ಸಿನಿಮಾಗಳು ಎನಿಸಿಕೊಂಡಿರುವ ಹಲವು ಚಿತ್ರಗಳು ಈ ವರ್ಷ ಹೊಸ ತಂತ್ರಜ್ಞಾನದಿಂದ ರೀ-ರಿಲಿಸ್ ಆಗಿದೆ. ಒಳ್ಳೆಯ ಸಧುಬಿರುಚಿಯ ಚಿತ್ರಗಳು ಬರುತ್ತಿಲ್ಲ ಎಂದು ಚಿತ್ರಮಂದಿರದಿಂದ ದೂರವಿದ್ದ ಅದೇಷ್ಟೋ ಅಭಿಮಾನಿಗಳನ್ನ ಈ ಸಿನಿಮಾಗಳು ಮತ್ತೆ ಥಿಯೇಟರ್ ಗೆ ಕರೆತಂದವು.[2016ರ 'ಅತ್ಯುತ್ತಮ ಪ್ರಯೋಗಾತ್ಮಕ' ಚಿತ್ರದ ಕಿರೀಟ ಯಾರಿಗೆ? ]

    ಹಾಗಾದ್ರೆ, ಈ ವರ್ಷ ರೀ-ರಿಲೀಸ್ ಆದ ಸೂಪರ್ ಹಿಟ್ ಸಿನಿಮಾಗಳು ಯಾವುದು ಅಂತ ಕೆಳಗಿನ ಸ್ಲೈಡ್ ಗಳಲ್ಲಿ ನೀಡಲಾಗಿದೆ.

    ಡಾ.ರಾಜ್ ಅವರ 'ರಾಜ ನನ್ನ ರಾಜ'

    ಡಾ.ರಾಜ್ ಅವರ 'ರಾಜ ನನ್ನ ರಾಜ'

    1976ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ರಾಜ ನನ್ನ ರಾಜ' ಚಿತ್ರ, 2016 ರಲ್ಲಿ ಮತ್ತೆ ಬಿಡುಗಡೆಯಾಗಿತ್ತು. ಏಪ್ರಿಲ್ 15ರಂದು ಡಿಜಿಟಲ್ ರೂಪ ಪಡೆದು ಮತ್ತೆ ಬೆಳ್ಳಿತೆರೆಯಲ್ಲಿ ರಾರಾಜಿಸಿತ್ತು. ಚಿತ್ರಮಂದಿರಗಳನ್ನೇ ಮರೆತು ಹೋಗಿದ್ದ ಪ್ರೇಕ್ಷಕರನ್ನ ಮತ್ತೆ ಥಿಯೇಟರ್ ನತ್ತ ಸೆಳೆದಿತ್ತು. ಡಾ.ರಾಜ್ ಕುಮಾರ್, ಆರತಿ, ಕೆ.ಎಸ್.ಅಶ್ವಥ್, ಚಂದ್ರಶೇಕರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಎ.ವಿ.ಶೇಷಗಿರಿ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಜಿ.ಕೆ.ವೆಂಕಟೇಶ್ ಅವರ ಸಂಗೀತವಿತ್ತು.[ 2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ? ]

    ಮತ್ತೆ ಅಬ್ಬರಿಸಿದ್ದ 'ಬಬ್ರುವಾಹನ'

    ಮತ್ತೆ ಅಬ್ಬರಿಸಿದ್ದ 'ಬಬ್ರುವಾಹನ'

    1977 ರಲ್ಲಿ ಬಿಡುಗಡೆಯಾಗಿದ್ದ 'ಬಬ್ರುವಾಹನ' ಸಿನಿಮಾ, ಈ ವರ್ಷ ಮತ್ತೆ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು. ಡಿಜಿಟಲ್ ಸೌಂಡ್ ವ್ಯವಸ್ಥೆಯೊಂದಿಗೆ ತೆರೆಗೆ ಬಂದ 'ಬಬ್ರುವಾಹನ' ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಕಾಂಚನಾ, ಜಯಮಾಲ, ರಾಮಕೃಷ್ಣ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದರು. ಹುಣುಸೂರು ಕೃಷ್ಣಮೂರ್ತಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಟಿ.ಜಿ.ಲಿಂಗಪ್ಪ ಅವರು ಸಂಗೀತ ಒದಗಿಸಿದ್ದರು.[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?]

    ಮತ್ತೆ ಘರ್ಜಸಿದ್ದ 'ಸಾಹಸ ಸಿಂಹ'

    ಮತ್ತೆ ಘರ್ಜಸಿದ್ದ 'ಸಾಹಸ ಸಿಂಹ'

    ರಾಜ್ ಕುಮಾರ್ ಸಿನಿಮಾಗಳಂತೆ ಈ ವರ್ಷ ರೀ-ರಿಲೀಸ್ ಆದ ಮತ್ತೊಂದು ಚಿತ್ರ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ 'ಸಾಹಸ ಸಿಂಹ'. 1982 ರಲ್ಲಿ ಬಿಡುಗಡೆಯಾಗಿದ್ದ 'ಸಾಹಸಸಿಂಹ' 2016ರ ಜೂನ್ 24ರಂದು ಡಿಜಿಟಲ್ ಸೌಂಡ್ ಸಿಸ್ಟಮ್ ನಲ್ಲಿ ಮತ್ತೆ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಕಾಜಲ್ ಕಿರಣ್, ರಾಜ್ಯಲಕ್ಷ್ಮಿ, ವಜ್ರಮುನಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಜೋಯ್ ಸೈಮನ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರವನ್ನ ಎಂ.ರಾಮಲಿಂಗಂ ಹಾಗೂ ಎಂ.ಪಾಂಡುರಂಗಂ ಜಂಟಿಯಾಗಿ ನಿರ್ಮಾಣ ಮಾಡಿದ್ದರು.[ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.?]

    'ಅಂಜದ ಗಂಡು'

    'ಅಂಜದ ಗಂಡು'

    ಈ ಮೂರು ಸಿನಿಮಾಗಳ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ಅಂಜದ ಗಂಡು' ಮತ್ತೆ ಮರು ಬಿಡುಗಡೆಯಾಗಿತ್. 1988ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಮೂಲ ಚಿತ್ರವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಬಿ.ಎನ್. ಗಂಗಾಧರ್ ಹೊಸ ತಂತ್ರಜ್ಞಾನದ ಮೂಲಕ ಮತ್ತೆ ಬಿಡುಗಡೆ ಮಾಡಿದರು. ರೇಣುಕ ಶರ್ಮಾ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತವಿದ್ದು, ಹಾಡುಗಳು ಸೂಪರ್ ಹಿಟ್ ಆಗಿತ್ತು.[2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?]

    English summary
    Some of the kannada Evergreen Movies have been Re-released this year. Here is the list of Movies are Re-released in 2016.
    Sunday, December 25, 2016, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X