twitter
    For Quick Alerts
    ALLOW NOTIFICATIONS  
    For Daily Alerts

    ನೆಟ್ ಸಂಪರ್ಕ ಇಲ್ಲದೆ ರಜನಿ ವೆಬ್ ಸೈಟ್ ನೋಡಿ!

    By Mahesh
    |

    ಇಂಟರ್ನೆಟ್‌ ಇಲ್ಲದೇ ವೆಬ್‌ತಾಣಗಳನ್ನು ನೋಡಲು ಸಾಧ್ಯ. ಆದರೆ ಅದು ಸೂಪರ್ ಸ್ಟಾರ್ ರಜನಿ ವೆಬ್ ಸೈಟ್ ಆಗಿದ್ದರೆ ಮಾತ್ರ. ಹೌದು, ರಜನಿಕಾಂತ್ ಅಭಿಮಾನಿಗಳು ನಿರ್ಮಿಸಿರುವ ಮೈಕ್ರೋಸೈಟ್ ಇಂಟರ್ನೆಟ್ ಇಲ್ಲದಿದ್ದರೆ ಮಾತ್ರ ವರ್ಕ್ ಆಗುತ್ತೆ.

    ಫ್ಲಾಶ್‌ ಆಧಾರಿತ ಈ ವೆಬ್‌ಸೈಟ್‌ನ ಮುಖಪುಟ ಆರಂಭದ ಪುಟಕ್ಕೆ ಹೋದ ನಂತರ ನೀವು ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದರೆ ಮಾತ್ರ ಮುಂದಿನ ಪುಟ ನೋಡಲು ಸಾಧ್ಯ.

    ಗುರು ಭಕ್ತ್ ಸಿಂಗ್ ಎಂಬ ರಜನಿ ಬಾಬಾ ಭಕ್ತ ಈ ರೀತಿಯ ವಿಶಿಷ್ಟವಾದ ವೆಬ್ ತಾಣವನ್ನು ವಿನ್ಯಾಸಗೊಳಿಸಿದ್ದಾರೆ.

    ಈ ವೆಬ್‌ಸೈಟ್‌: http://www.desimartini.com/allaboutrajni.htm ಗೆ ಭೇಟಿ ಕೋಡಿ.
    'ಈತ ಸಾಮಾನ್ಯನಲ್ಲ, ಈ ವೆಬ್‌ಸೈಟ್‌ ಸಾಮಾನ್ಯವಾದುದಲ್ಲ. ಇದು ರಜನಿ ಶಕ್ತಿಯಿಂದ ನಡೆಯುತ್ತದೆ' ಎಂಬ ಸಂದೇಶ ಕಾಣಿಸುತ್ತದೆ. ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಿ ಎಂಬ ಸಂದೇಶವೂ ಕಾಣಿಸಿಕೊಳ್ಳುತ್ತದೆ.

    ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಿದರೆ ಮಾತ್ರ ರಜನಿ ವೆಬ್‌ಸೈಟ್‌ನ ಇತರೆ ಪುಟಗಳು ತೆರೆದುಕೊಳ್ಳುತ್ತದೆ.

    ಆದರೆ, ಈ ಮಧ್ಯೆ ಇಂಟರ್ನೆಟ್ ಸಂಪರ್ಕ ಪುನಃ ಸ್ಥಾಪಿಸಿದರೆ 'ayyo... ದಟ್‌ ವಾಸ್‌ ಅನ್‌ ಎಕ್ಸ್‌ಪೆಕ್ಟೆಡ್‌' ಎಂದು ಮೆಸೇಜ್‌ ತೆರೆ ಮೇಲೆ ಅಪ್ಪಳಿಸುತ್ತದೆ.

    ಈ ವೆಬ್ ತಾಣ ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕಿಚ್ಚು ಹಬ್ಬಿಸುತ್ತಿದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

    English summary
    Rajinikanth fans have created a microsite dedicated to superstar Rajinikanth. The website runs only without the internet. Users have to is disable your internet connection to get access to the website.
    Saturday, January 21, 2012, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X