ಗಾಂಧಿನಗರದ ಹೈವೇಗೆ ಮತ್ತೆ ಮರಳಿದ ಪ್ರಕಾಶ್ ರೈ

Posted by:
Give your rating:

ನಟ, ನಿರ್ಮಾಪಕ ಮತ್ತು ನಿರ್ದೇಶಕನ ಪ್ರಕಾಶ್ ರೈ ಮತ್ತೆ ಗಾಂಧಿನಗರದ ಹೈವೇಗೆ ಮರಳಿದ್ದಾರೆ. ಅಂದರೆ ಕನ್ನಡ ಚಿತ್ರವೊಂದನ್ನು ಸ್ವತಃ ಪ್ರಕಾಶ್ ರೈ ನಿರ್ಮಿಸಲಿದ್ದಾರೆ. ಚಿತ್ರದ ನಾಯಕ ನಟ ಅವರೇ ಆದರೂ ನಿರ್ದೇಶನದ ಹೊಣೆಯನ್ನು ಬಿ ಸುರೇಶ್ ಹೆಗೆಲಿಗೆ ಹೊರಿಸಿದ್ದಾರೆ.

ಡ್ಯುಯೇಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಬ್ಯಾನರಿನಡಿ ತಯಾರಾಗುತ್ತಿರುವ ಈ ಚಿತ್ರಕ್ಕೆ 'ಪುಟ್ಟಕ್ಕನ ಹೈವೇ' ಎಂದು ಹೆಸರಿಡಲಾಗಿದೆ. ಶೈಲಜಾ ನಾಗ್, ಬಿ ಸುರೇಶ್ ಮತ್ತು ಪ್ರಕಾಶ್ ರೈ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪುಟ್ಟಕ್ಕನ ಮೆಡಿಕಲ್ ಕಾಲೇಜ್' ಎಂಬ ಕಥೆಯನ್ನು ಆಧರಿಸಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಚಿತ್ರದ ನಾಯಕಿ ಶ್ರುತಿ. ಅಚ್ಯುತ್, ರಾಜೇಶ್ ನಟರಂಗ, ವೀಣಾ ಸುಂದರ್, ಸಿಹಿಕಹಿ ಚಂದ್ರು ಸೇರಿದಂತೆ ಬಹುತೇಕ 'ನಾನು ನನ್ನಕನಸು' ತಂಡ ಇರುತ್ತದೆ. ಹಂಸಲೇಖ ಅವರ ಸಂಗೀತ, ಜೋನಿ ಹರ್ಷ ಅವರ ಸಂಕಲನ, ಎಚ್ ಎಂ ರಾಮಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಪುಟ್ಟಕ್ಕನ ಹೈವೇ ಚಿತ್ರಕ್ಕಾಗಿ ಯೋಗರಾಜ್ ಭಟ್ ಮೂರು ಹಾಡುಗಳನ್ನು ರಚಿಸಿದ್ದಾರೆ. ಉಳಿದ ಎರಡು ಹಾಡುಗಳು ಹಂಸಲೇಖ ಅವರ ಲೇಖನಿಯಿಂದ ಹೊರಹೊಮ್ಮಿವೆ. ಅಕ್ಟೋಬರ್ 27ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ರಾಣೇಬೆನ್ನೂರು, ಮೈಸೂರು, ಕೆ ಆರ್ ಪೇಟೆ, ಮೇಲುಕೋಟೆ ಸಮೀಪದ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಜನವರಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ.

Read more about: ಪುಟ್ಟಕ್ಕನ ಹೈವೇ, ಪ್ರಕಾಶ್ ರೈ, ಶ್ರುತಿ, ಬಿ ಸುರೇಶ್, ಅಚ್ಯುತ್, ನಾನು ನನ್ನಕನಸು, ಹಂಸಲೇಖ, ಯೋಗರಾಜ್ ಭಟ್, puttakkana highway, prakash raj, hamsalekha, yogaraj bhat

Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive