»   » ಶಶಾಂಕ್ ಹೊಸ ಚಿತ್ರದ ನಾಯಕ ದುನಿಯಾ ವಿಜಯ್

ಶಶಾಂಕ್ ಹೊಸ ಚಿತ್ರದ ನಾಯಕ ದುನಿಯಾ ವಿಜಯ್

Posted by:
Subscribe to Filmibeat Kannada
ಭರವಸೆಯ ನಿರ್ದೇಶಕ ಶಶಾಂಕ್ ಹೊಸ ಚಿತ್ರಕ್ಕೆ 'ಬ್ಲ್ಯಾಕ್ ಕೋಬ್ರಾ' ಎಂದೇ ಖ್ಯಾತನಾದ ದುನಿಯಾ ವಿಜಯ್ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸುದೀಪ್ ಜೊತೆ ಚಿತ್ರ ಮಾಡುವುದಾಗಿ ಶಶಾಂಕ್ ಪ್ರಕಟಿಸಿದ್ದರು. ಆ ಚಿತ್ರಕ್ಕೂ ಮುನ್ನ ದುನಿಯಾ ವಿಜಯ್‌ಗೆ ಶಶಾಂಕ್ ಆಕ್ಷನ್, ಕಟ್ ಹೇಳಲಿದ್ದಾರೆ.

ಸದ್ಯಕ್ಕೆ ಕಿಚ್ಚ ಮೂರು ಚಿತ್ರಗಳಲ್ಲಿ ಬಿಜಿ ಬಿಜಿ. ಅವರ ಡೇಟ್ಸ್ ಸಿಗಲು ಏಪ್ರಿಲ್ ವರೆಗೂ ಕಾಯಬೇಕು. ಅಷ್ಟರಲ್ಲಿ ಇನ್ನೊಂದು ಚಿತ್ರ ಮುಗಿಸಿಬಿಡೋಣ ಎಂಬುದು ಶಶಾಂಕ್ ಲೆಕ್ಕಾಚಾರ. ಈ ಚಿತ್ರಕ್ಕೆ 'ಶೌರ್ಯ' ನಿರ್ಮಿಸಿದ್ದ ಗಂಗಾಧರ್ ಮತ್ತು ಬಸವರಾಜ್ ನಿರ್ಮಾಪಕರು. ಡಿಸೆಂಬರ್‌‍ನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಐಂದ್ರಿತಾ ರೆ ನಾಯಕಿಯಾಗುವ ಸಾಧ್ಯತೆಯಿದೆ.

ಇನ್ನೂ ಹೆಸರಿಡದ ಈ ಚಿತ್ರ ಶೇಕಡಾ ನೂರರಷ್ಟು ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಶಶಾಂಕ್. ವಿಜಯ್ ದೇಹದಾರ್ಢ್ಯವನ್ನು ಗಮನದಲ್ಲಿಟ್ಟುಕೊಂಡು ಕತೆ ಹೆಣೆದಿದ್ದಾರೆ. ಚಿತ್ರದ ಮೊದಲರ್ಧ ಒಂದು ಚಿತ್ರದ ಒಂಥರಾ ಅನುಭವ ನೀಡಿದರೆ ದ್ವಿತೀಯಾರ್ಧ ಇನ್ನೊಂದು ಸಿನಿಮಾ ನೋಡಿದಂತಿರುತ್ತದೆ ಎನ್ನುತ್ತಾರೆ ಶಶಾಂಕ್.

Please Wait while comments are loading...

Kannada Photos

Go to : More Photos