ಲವ್ ಮಾಡಿದ ಕೃಷ್ಣನಿಗೆ ಅ.17ರಂದು ಮ್ಯಾರೇಜ್!

Posted by:
 

'ಕೃಷ್ಣನ್ ಲವ್ ಸ್ಟೋರಿ' ಶತಕ ಬಾರಿಸುತ್ತಿರುವಂತೆ ಅಜಯ್ ರಾವ್ ಅದೃಷ್ಟ ಖುಲಾಯಿಸಿದೆ. ಅಜಯ್ ರಾವ್ ಈಗ ಮ್ಯಾರೇಜ್‌ಗೆ ಸಿದ್ಧವಾಗಿದ್ದಾರೆ. ಯಾರ ಜೊತೆ ಅಂತೀರಾ? ಸದ್ಯಕ್ಕೆ ಈ ವಿಚಾರ ನಮಗೂ ಗೊತ್ತಿಲ್ಲ. ಆದರೆ ಅದು ನಿಜವಾದ ಮದುವೆಯಲ್ಲ. ತೆರೆಯ ಮೇಲಿನ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'.

ಹೌದು ಅಜಯ್ ರಾವ್ ಅವರ ಮುಂದಿನ ಚಿತ್ರದ ಹೆಸರು 'ಕೃಷ್ಣನ್ ಮ್ಯಾರೇಜ್ ಸ್ಟೋರಿ'. ಈ ಚಿತ್ರ ಅಕ್ಟೋಬರ್ 17ರಂದು ಸೆಟ್ಟೇರಲಿದೆ. ಈ ಚಿತ್ರಕ್ಕೆ ಆರ್ ವಿಜಯ್ ಕುಮಾರ್ ಎಂಬ ಹೊಸಬರು ನಿರ್ಮಾಪಕರು. ನೂತನ್ ಉಮೇಶ್ ಎಂಬ ಹೊಸ ನಿರ್ದೇಶಕರ ಆಕ್ಷನ್, ಕಟ್ ಇರುತ್ತದೆ.

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಕೃಷ್ಣ ಈಸ್ ಎ ಸೂಪರ್ ಸ್ಟಾರ್....ಎಂದು ಕೃಷ್ಣನ ಯಶಸ್ಸನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿರುವ ಹೊತ್ತಲೆ ಕೃಷ್ಣನಿಗೆ ಮ್ಯಾರೇಜ್ ಫಿಕ್ಸ್ ಆಗಿದೆ. ಅಂದಹಾಗೆ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರು ಮೋಹನ್ ಪೂಜಾರಿ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಹಾಗೂ ಶ್ರೀ (ಕ್ರೇಜಿ ಮೈಂಡ್ಸ್) ಸಂಕಲನವಿರುತ್ತದೆ. ಉಳಿತ ತಾಂತ್ರಿಕ ಮತ್ತು ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ.

Read more about: ಕೃಷ್ಣನ್ ಲವ್ ಸ್ಟೋರಿ, ಅಜಯ್ ರಾವ್, ಕೃಷ್ಣನ್ ಮ್ಯಾರೇಜ್ ಸ್ಟೋರಿ, ರಾಧಿಕಾ ಪಂಡಿತ್, krishnan love story, krishnan marriage story, ajay rao, radhika pandit

Please Wait while comments are loading...
Your Fashion Voice

Kannada Photos

Go to : More Photos