»   »  ಕೆಸಿಎನ್ ಗೌಡರ ಸತ್ಯ ಹರಿಶ್ಚಂದ್ರ ಹಿಂದಿಗೆ ಡಬ್

ಕೆಸಿಎನ್ ಗೌಡರ ಸತ್ಯ ಹರಿಶ್ಚಂದ್ರ ಹಿಂದಿಗೆ ಡಬ್

Subscribe to Filmibeat Kannada

Satya Harischandra
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಗೌಡ ಅವರು 'ಸತ್ಯ ಹರಿಶ್ಚಂದ್ರ' ಚಿತ್ರವನ್ನು ಹಿಂದಿ ಭಾಷೆಗೆ ಡಬ್ ಮಾಡಲು ನಿರ್ಧರಿಸಿದ್ದಾರೆ. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ ಸತ್ಯ ಹರಿಶ್ಚಂದ್ರದ ಹಿಂದಿ ಅವತರಣಿಕೆ ಏಪ್ರಿಲ್ ನಲ್ಲಿ ಬೆಳ್ಳಿತೆರೆಯನ್ನು ಬೆಳಗಲಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.

''ಸತ್ಯ ಹರಿಶ್ಚಂದ್ರ ಪೌರಾಣಿಕ ಕಥೆಯಿಂದ ಮಹಾತ್ಮ ಗಾಂಧೀಜಿ ಅವರು ಪ್ರಭಾವಿತರಾಗಿದ್ದರು.ಇದು ನಮ್ಮ ತಂದೆಯವರ ಮಹತ್ವಾಕಾಂಕ್ಷೆ ಚಿತ್ರ. ಈ ಚಿತ್ರ ಎಲ್ಲರನ್ನು ತಲುಪಬೇಕು ಎಂಬ ನಿಟ್ಟಿನಲ್ಲಿ ಈ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಕೆಸಿಎನ್ ಚಂದ್ರಶೇಖರ್. ಕಪ್ಪು ಬಿಳುಪಿನಲ್ಲಿದ್ದ ಸತ್ಯಹರಿಶ್ಚಂದ್ರ ಈಗ ಬಣ್ಣದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿ ಹಿಂದಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಕೆಸಿಎನ್ ಚಂದ್ರಶೇಖರ್ ಅವರದು.

1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ. ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. 2008ರಲ್ಲಿ ಕೆಸಿಎನ್ ಗೌಡರ ಕುಟುಂಬ ರು.3 ಕೋಟಿ ವೆಚ್ಚದಲ್ಲಿ ಸಂಪೂರ್ಣ ಬಣ್ಣದಲ್ಲಿ ಬಿಡುಗಡೆ ಮಾಡಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಗೌಡರ ಕಳಕಳಿ ನಿಜಕ್ಕೂ ಸ್ತುತ್ಯರ್ಹ. ತಮ್ಮ ನಿರ್ಮಾಣದಲ್ಲಿ ಬಂದಂತಹ ಅತ್ಯುತ್ತಮ ಕಪ್ಪುಬಿಳುಪು ಚಿತ್ರಗಳನ್ನು ಬಣ್ಣದಲ್ಲಿ ಬಿಡುಗಡೆ ಮಾಡುವ ಯೋಜನೆಯೂ ಕೆಸಿಎನ್ ಗೌಡರು ತಲೆಯಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ಹುಟ್ಟುಹಬ್ಬದಂದು ಥಿಯೇಟರುಗಳಲ್ಲಿ ಸತ್ಯ ಹರಿಶ್ಚಂದ್ರ
ಜಾತಿ,ಮತ ಮೀರಿದ ಈ ಹಾಡಿಗೆ ಹೆಜ್ಜೆ ಹಾಕದವರುಂಟೇ?
ಸಿಡಿ ಮುಖಾಂತರಎಲ್ಲಾ ಶಾಲೆಗಳಲ್ಲಿ 'ಸತ್ಯಹರಿಶ್ಚಂದ್ರ'

Please Wait while comments are loading...

Kannada Photos

Go to : More Photos