»   » ಈ ವಾರ ಬಿಡುಗಡೆಯಾಗಬೇಕಿದ್ದ 3 ಕನ್ನಡ ಚಿತ್ರಗಳು ಮುಂದಕ್ಕೆ!

ಈ ವಾರ ಬಿಡುಗಡೆಯಾಗಬೇಕಿದ್ದ 3 ಕನ್ನಡ ಚಿತ್ರಗಳು ಮುಂದಕ್ಕೆ!

Posted by:
Subscribe to Filmibeat Kannada
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ವಾರ ಒಟ್ಟು 5 ಸಿನಿಮಾಗಳು ಬಿಡುಗಡೆಯಾಗಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಮೂರು ನಿರೀಕ್ಷೆಯ ಚಿತ್ರಗಳು ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಸೆನ್ಸಾರ್ ಮಂಡಳಿ.

ಹೌದು, ಅನೂಪ್ ರೇವಣ್ಣ ಅಭಿನಯದ 'ಪಂಟ', ರಾಜಾಹುಲಿ ಹರ್ಷ ಅಭಿನಯದ 'ವರ್ಧನ' ಹಾಗೂ ಎಂ.ಜಿ ಶ್ರೀನಿವಾಸ ನಟಿಸಿ, ನಿರ್ದೇಶನ ಮಾಡಿದ್ದ 'ಶ್ರೀನಿವಾಸ ಕಲ್ಯಾಣ' ಚಿತ್ರಗಳು ಈ ವಾರ ಬಿಡುಗಡೆಯಾಗಬೇಕಿತ್ತು. ಆದ್ರೆ, ಸೆನ್ಸಾರ್ ಮಂಡಳಿ ಅಧಿಕಾರಿಗಳು ಸರ್ಟಿಫಿಕೇಟ್ ನೀಡದೆ ಇರುವುದರಿಂದ ಸಿನಿಮಾ ಬಿಡುಗಡೆಗೆ ಸಂಕಟ ಎದುರಾಗಿದೆ.

3 Kannada Movies are Postponed

ಸೆನ್ಸಾರ್ ಮಂಡಳಿ ಕಳೆದ ಕೆಲ ದಿನಗಳಿಂದ ಯಾವುದೇ ಚಿತ್ರವನ್ನ ನೋಡಿಲ್ಲ. ಯಾಕಂದ್ರೆ, ಸೆನ್ಸಾರ್ ಅಧಿಕಾರಿಗಳು, ಹಾಗೂ ಮಹಿಳಾ ಅಧಿಕಾರಿಗಳು ಬೇರೆ ಬೇರೆ ಕಾರಣಗಳಿಂದ ಹೊರಗಡೆ ಹೋಗಿದ್ದಾರೆ. ಹೀಗಾಗಿ ಯಾವುದೇ ಸಿನಿಮಾವನ್ನ ವೀಕ್ಷಿಸಲು ಸಾಧ್ಯವಾಗಿಲ್ಲವಂತೆ. ಈ ನಡುವೆಯೂ ಚಿತ್ರದ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿ ಬುಧವಾರದವರೆಗೂ ಕಾದು ಕುಂತಿದ್ದ ಚಿತ್ರಗಳು ಕೊನೆಗೂ ಮುಂದಕ್ಕೆ ಹೋಗಲು ನಿರ್ಧಾರ ಮಾಡಿವೆ.

English summary
Kannada Movie 'Vardhana', 'Srinivasa Kalyana' and 'Panta' which were scheduled to release on February 17th are postponed due to unavoidable reasons.
Please Wait while comments are loading...

Kannada Photos

Go to : More Photos