twitter
    For Quick Alerts
    ALLOW NOTIFICATIONS  
    For Daily Alerts

    ಕ್ಯಾನ್ಸರ್ ಪೀಡಿತ ಮಕ್ಕಳ ಮನಗೆದ್ದ ದರ್ಶನ್

    By Staff
    |

    ಬಹಳಷ್ಟು ಸಿನಿಮಾ ಕಲಾವಿದರು ತಾವು ಮಾಡುವ ಒಳ್ಳೆ ಕೆಲಸಗಳಿಗೆ ಪ್ರಚಾರ ಬಯಸುವುದಿಲ್ಲ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ಧೋರಣೆ ಅವರದು. ಆದಷ್ಟು ತೆರೆಮರೆಯಲ್ಲೇ ಈ ರೀತಿಯ ಉತ್ತಮ ಕೆಲಸಗಳನ್ನು ಮಾಡುತ್ತಿರುತ್ತಾರೆ. ಬೇಡಬೇಡ ಎಂದರೂ ಸಿನಿಮಾ ಪತ್ರಕರ್ತರು ಅವರ ಉತ್ತಮ ಕಾರ್ಯಗಳನ್ನು ಬೆಳಕಿಗೆ ತರುತ್ತಲೇ ಇರುತ್ತಾರೆ. ಅಂತಹದ್ದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ಸುದ್ದಿ.

    ತೆಲುಗಿನಲ್ಲಿ ಭರ್ಜರಿ ದಾಖಲೆ ಕಂಡಿದ್ದ 'ಪೋಕಿರಿ' ಚಿತ್ರ ಕನ್ನಡಕ್ಕೆ 'ಪೊರ್ಕಿ'ಯಾಗಿ ರೀಮೇಕ್ ಆಗುತ್ತಿದೆ. ಪೊರ್ಕಿಯ ನಾಯಕ ನಟನಾಗಿ ದರ್ಶನ್ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕಾಗಿ ಡ್ಯೂಪ್ ಕಲಾವಿದರು ಮಾಡಬೇಕಾದ ಸಾಹಸವನ್ನು ದರ್ಶನ್ ಮಾಡಿದರು. ಅದೊಂದು ಎತ್ತರದಿಂದ ಧುಮುಕು ಸಾಹಸ ಸನ್ನಿವೇಶ. ದರ್ಶನ್ ಇದನ್ನು ಲೀಲಾಜಾಲವಾಗಿ ಮಾಡಿ ಮುಗಿಸಿದರು. ಈ ಒಂದು ಸಾಹಸ ಸನ್ನಿವೇಶಕ್ಕಾಗಿ ರು.15,000 ನಿಗದಿಪಡಿಸಲಾಗಿತ್ತು.

    ಕಾಡಿದ ಕರ್ತವ್ಯ ಪ್ರಜ್ಞೆ
    ದರ್ಶನ್ ರ ಸಾಹಸವನ್ನು ಡ್ಯೂಪ್ ಕಲಾವಿದರು ಸಹ ಚಪ್ಪಾಳೆ ತಟ್ಟಿ ಆನಂದಿಸಿದರು. ಆದರೆ ದರ್ಶನ್ ಗೆ ಏನೋ ಅಸಮಾಧಾನ ಕಾಡುತ್ತಿತ್ತು. ''ಡ್ಯೂಪ್ ಕಲಾವಿದರು ಮಾಡಬೇಕಾದ ಕೆಲಸವನ್ನು ತಾನು ಮಾಡಿದೆನಲ್ಲಾ? ಅವರ ಕೆಲಸಕ್ಕೆ ಕಲ್ಲು ಹಾಕಿದೆನಲ್ಲಾ ಎಂಬ ಪಾಪಪ್ರಜ್ಞೆ ದರ್ಶನ್ ರನ್ನು ಕಾಡಿತು. ಕೂಡಲೆ ಹದಿನೈದು ಸಾವಿರ ರುಪಾಯಿಗಳನ್ನು ಮೂವರು ಸಾಹಸ ಕಲಾವಿದರಿಗೆ ತಲಾ ಐದು ಸಾವಿರಗಳಂತೆ ಹಂಚಿದರು.

    ಗಾಜನ್ನು ಪುಡಿಪುಡಿ ಮಾಡುವ ಮತ್ತೊಂದು ಸನ್ನಿವೇಶದಲ್ಲಿ ಡ್ಯೂಪ್ ಕಲಾವಿದನೊಂದಿಗೆ ದರ್ಶನ್ ಅಭಿನಯಿಸಿದರು. ಈ ಬಾರಿಯೂ ದರ್ಶನ್ ತಮ್ಮ ಜೇಬಿನಿಂದ ಹಣ ತೆಗೆದು ಆ ಸಾಹಸ ಕಲಾವಿದನಿಗೆ ಕೊಟ್ಟರು. ಸಾಹಸ ಕಲಾವಿದರ ಬದುಕು ನಿಜಕ್ಕೂ ಅಂತಂತ್ರದಲ್ಲಿದೆ. ತಮ್ಮ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂಬುದು ಅವರ ಅನ್ನಿಸಿಕೆ.

    ಮನಕಲುಕಿದ ಮಾನವೀಯತೆ
    ಪೊರ್ಕಿ ಚಿತ್ರೀಕರಣದಲ್ಲಿ ನಾಲ್ಕು ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಭೇಟಿಯಾಗುವುದಾಗಿ ದರ್ಶನ್ ಮಾತುಕೊಟ್ಟಿದ್ದರು. ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಒಂದಷ್ಟು ಸಮಯ ಕಳೆದು ಅವರ ಮತ್ತು ಪೋಷಕರ ಮನಸ್ಸಂತೋಷ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಮೊದಲ ದಿನದ ಚಿತ್ರೀಕರಣ ವೇಳೆ ಅದು ಸಾಧ್ಯವಾಗಲಿಲ್ಲ. ದುರ್ದೈವವೆಂದರೆ ಮರು ದಿನ ಅವರನ್ನು ಆಹ್ವಾನಿಸಿದಾಗ ಅದಾಗಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದರು.

    ಉಳಿದ ಇಬ್ಬರು ಮಕ್ಕಳೊಂದಿಗೆ ದರ್ಶನ್ ಆತ್ಮೀಯವಾಗಿ ಕಳೆದರು. ಮಕ್ಕಳು ಸಹ ಬಹಳಷ್ಟು ಖುಷಿಯಾಗಿದ್ದರು. ಕೆಲ ದಿನಗಳ ನಂತರ ಆ ಮಕ್ಕಳು ಮೃತಪಟ್ಟವು. ಆದರೆ ದರ್ಶನ್ ಗೆ ಆ ಮಕ್ಕಳ ನೆನಪು ಮಾತ್ರ ಕಾಡುತ್ತಲೇ ಇತ್ತು. ಸೀದಾ ಅವರ ಮನೆಗೆ ಭೇಟಿ ಕೊಟ್ಟರು. ಆ ಮಕ್ಕಳ ನೆನಪಿಗಾಗಿ ಅವರ ಪುಟ್ಟ ಸ್ವೆಟರ್ ಮತ್ತು ಕುಲಾವಿಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಈ ಘಟನೆಯನ್ನು ನೆನೆದರೆ ದರ್ಶನ್ ರ ಕಣ್ಣುಗಳು ಈಗಲೂ ಒದ್ದೆಯಾಗುತ್ತವೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, August 31, 2009, 13:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X