»   » ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ..

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ..

Posted by:
Subscribe to Filmibeat Kannada

ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ಟಿ ಆರ್ ನರಸಿಂಹರಾಜು ನಮ್ಮನ್ನು ಅಗಲಿ ಇಂದಿಗೆ 35 ವರ್ಷ. ತನ್ನ ಅಸಾಧಾರಣ ಆಂಗಿಕ ಹಾವಭಾವಗಳಿಂದ ಎಲ್ಲರನ್ನೂ ರಂಜಿಸುತ್ತಿದ್ದ ನರಸಿಂಹರಾಜು ಜುಲೈ 11, 1979ರಲ್ಲಿ ನಿಧನರಾದರು.

ಜುಲೈ 24, 1926ರಂದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಜನಿಸಿದ ನರಸಿಂಹರಾಜು ಅವರ ತಂದೆ ರಾಮರಾಜು ಪೋಲೀಸ್‌ ಇಲಾಖೆಯ ನೌಕರರಾಗಿದ್ದರು, ಇವರ ತಾಯಿ ವೆಂಕಟಲಕ್ಷ್ಮಮ್ಮ.

ನಾಲ್ಕನೇ ವಯಸ್ಸಿನಲ್ಲೇ ರಂಗಭೂಮಿಯತ್ತ ಒಲವು ಹೊಂದಿದ್ದ ನರಸಿಂಹರಾಜು ಅವರು ಮಲ್ಲಪ್ಪನವರ ನಾಟಕ ಕಂಪೆನಿಯಲ್ಲಿ ಬಾಲಕಲಾವಿದನಾಗಿ ಸೇರಿಕೊಂಡರು.

ಡಾ. ರಾಜಕುಮಾರ್ ಜೊತೆ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನರಸಿಂಹರಾಜು ಮುಂದಿನ ದಿನಗಳಲ್ಲಿ ಕನ್ನಡದ ಹಾಸ್ಯ ಚಕ್ರವರ್ತಿಯಾಗಿ ಮೆರೆದರು. (ನರಸಿಂಹರಾಜುಗೆ ಯಾಕೀ ಅವಮಾನ)

ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರ ಹೊಂದಿದ್ದ ನರಸಿಂಹರಾಜು ತೆರೆ ಮೇಲೆ ಬರುತ್ತಿದ್ದಂತೆಯೇ ನಗೆಹೊನಲು ಹರಿಸುತ್ತಿದ್ದರು. ರಾಜಣ್ಣ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಜನಪ್ರಿಯ ಜೋಡಿಯಾಗಿ ಹೆಸರು ಮಾಡಿತ್ತು.

ರಾಜ್ ಒಂದು ಮಾತು ಹೇಳುತ್ತಿದ್ದರು, ನಮ್ಮ ಕಾಲದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ಮೊದಲು ತಮ್ಮ ಚಿತ್ರಗಳಿಗೆ ನರಸಿಂಹರಾಜು ಅವರ ಕಾಲ್ಶೀಟ್ ಇದೆಯಾ ಎಂದು ಖಚಿತ ಪಡಿಸಿಕೊಂಡು ನಂತರ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು.

ನರಸಿಂಹರಾಜು ಅವರ 35ನೇ ಪುಣ್ಯಸ್ಮರಣೆಯ ದಿನದಂದು, ಅವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು ಸ್ಲೈಡಿನಲ್ಲಿ..

ಬೇಡರ ಕಣ್ಣಪ್ಪ

ಬೇಡರ ಕಣ್ಣಪ್ಪ

1954ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರಾಜ್, ಪಂಡರೀಬಾಯಿ, ಜಿ ವಿ ಅಯ್ಯರ್, ನರಸಿಂಹರಾಜು ಮುಂತಾದವರಿದ್ದರು. ಚಿತ್ರವನ್ನು ಹೆಚ್ ಎಲ್ ಎನ್ ಸಿಂಹ ನಿರ್ದೇಶಿಸಿದ್ದರು. ಗುಬ್ಬಿ ವೀರಣ್ನ ಚಿತ್ರದ ನಿರ್ಮಾಪಕರು.

ರತ್ನಮಂಜರಿ

ರತ್ನಮಂಜರಿ

ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ್ದ ಈ ಚಿತ್ರ 1962ರಲ್ಲಿ ಬಿಡುಗಡೆಯಾಗಿತ್ತು. ಉದಯ್ ಕುಮಾರ್, ಅಶ್ವಥ್, ಲೀಲಾವತಿ, ನರಸಿಂಹರಾಜು ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ಸಾಕ್ಷಾತ್ಕಾರ

ಸಾಕ್ಷಾತ್ಕಾರ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರ 1971ರಲ್ಲಿ ಬಿಡುಗಡೆಯಾಗಿತ್ತು. ರಾಜಕುಮಾರ್, ಜಮುನಾ, ಬಾಲಕೃಷ್ಣ, ನರಸಿಂಹರಾಜು, ಪೃಥ್ವಿರಾಜ್ ಕಪೂರ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಪ್ರೊಫೆಸರ್ ಹುಚ್ಚುರಾಯ

ಪ್ರೊಫೆಸರ್ ಹುಚ್ಚುರಾಯ

ನರಸಿಂಹರಾಜು ನಿರ್ಮಿಸಿದ್ದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ನರಸಿಂಹರಾಜು, ಮಂಜುಳ, ವಿಷ್ಣುವರ್ಧನ್, ಲೀಲಾವತಿ ಮುಂತಾದವರಿದ್ದರು. ಈ ಚಿತ್ರ 1975ರಲ್ಲಿ ತೆರೆಕಂಡಿತ್ತು.

ಸತ್ಯಹರಿಶ್ಚಂದ್ರ

ಸತ್ಯಹರಿಶ್ಚಂದ್ರ

1965ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ್ದರು. ರಾಜ್, ಉದಯ್ ಕುಮಾರ್, ಪಂಡರೀಬಾಯಿ, ನರಸಿಂಹರಾಜು, ಎಂ ಪಿ ಶಂಕರ್ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ಶ್ರೀಕೃಷ್ಣದೇವರಾಯ

ಶ್ರೀಕೃಷ್ಣದೇವರಾಯ

ಬಿ ಆರ್ ಪಂತಲು ನಿರ್ಮಿಸಿ, ನಿರ್ದೇಶಿಸಿದ್ದ ಈ ಚಿತ್ರ 1970ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ರಾಜ್, ಭಾರತಿ, ಜಯಂತಿ, ನರಸಿಂಹರಾಜು, ಮೈನಾವತಿ ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಗಂಧದಗುಡಿ

ಗಂಧದಗುಡಿ

1973ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರಾಜ್, ವಿಷ್ಣು, ನರಸಿಂಹರಾಜು, ಕಲ್ಪನಾ, ಬಾಲಕೃಷ್ಣ ಮುಂತಾದವರಿದ್ದರು. ಚಿತ್ರವನ್ನಿ ವಿಜಯ್ ನಿರ್ದೇಶಿಸಿದ್ದರು.

English summary
Remembering veteran Kannada comedian Narasimha Raju on his 35th death anniversary.
Please Wait while comments are loading...

Kannada Photos

Go to : More Photos