»   » ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ

ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ

Posted by:
Subscribe to Filmibeat Kannada

ಹಿರಿಯ ನಟ ಕಮ್ ನಿರ್ಮಾಪಕ ಹಾಗೂ ಸ್ಯಾಂಡಲ್ ವುಡ್ ನ ಕುಳ್ಳ ಅಂತಾನೇ ಖ್ಯಾತಿ ಗಳಿಸಿರುವ ನಟ ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುತಾರಾಗಣ ಇರುವ 'ಚೌಕ' ಚಿತ್ರದ ಶೂಟಿಂಗ್ ಬರದಿಂದ ಸಾಗುತ್ತಿದೆ.

ದ್ವಾರಕೀಶ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ವಿಶೇಷ 50ನೇ ಸಿನಿಮಾ ಗಾಂಧಿನಗರದಲ್ಲಿ ಸದ್ಯಕ್ಕೆ ಸಖತ್ ಸದ್ದು ಮಾಡುತ್ತಿದೆ.

ಬಹುತಾರಾಗಣ ಇರುವ ಸಿನಿಮಾ ಎಂಬ ಕಾರಣಕ್ಕೆ 'ಚೌಕ' ಸಿನಿಮಾ ಈ ಮೊದಲು ಸುದ್ದಿಯಾದರೆ, ಇದೀಗ ಹೊಸದಾಗಿ ಬಹು ಛಾಯಾಗ್ರಾಹಕರನ್ನು ಒಳಗೊಂಡಿರುವ ಸಿನಿಮಾ ಎಂದು ಮತ್ತೆ ಸುದ್ದಿಯಲ್ಲಿದೆ.['ಚೌಕ'ದಿಂದ ಚಿರು ಹೋದ್ರು, ಚಿನ್ನಾರಿ ಮುತ್ತಾ ಬಂದ್ರು]

ಒಂದೇ ಚಿತ್ರಕ್ಕೆ ಹಲವು ಛಾಯಾಗ್ರಾಹಕರು ಕೆಲಸ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಇಡೀ ಚಿತ್ರರಂಗದಲ್ಲಿಯೇ ಉತ್ತಮ ಛಾಯಾಗ್ರಾಹಕರು ಎಂಬುದಾಗಿ ಪ್ರಖ್ಯಾತಿ ಗಳಿಸಿರುವವರು ಒಂದೇ ಚಿತ್ರಕ್ಕೆ ಕ್ಯಾಮರಾ ಕೈ ಚಳಕ ತೋರುವುದು ಎಂದರೆ ವಿಶೇಷ ತಾನೆ.

ಹೌದು ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ಛಾಯಾಗ್ರಾಹಕರುಗಳಾದ ಸತ್ಯ ಹೆಗಡೆ, 'ಮುಂಗಾರು ಮಳೆ' ಕೃಷ್ಣ, ಸುಧಾಕರ್ ರಾಜ್, ಸಂತೋಷ್ ರೈ ಪಾತಾಜೆ ಮತ್ತು ಶೇಖರ್ ಚಂದ್ರು ಮುಂತಾದವರು ದ್ವಾರಕೀಶ್ ಅವರ 50ನೇ ಚಿತ್ರಕ್ಕೆ ಕ್ಯಾಮರಾ ಕೈ ಚಳಕ ತೋರುತ್ತಿದ್ದಾರೆ.

ಆದರೆ ಈ ಘಟಾನುಘಟಿಗಳು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುವುದಿಲ್ಲ, ಬದಲಾಗಿ ಈ ಚಿತ್ರದಲ್ಲಿ ಒಂದಿಷ್ಟು ಟ್ರ್ಯಾಕ್ ಗಳಿದ್ದು, ಒಬ್ಬೊಬ್ಬರಿಗೆ ಒಂದೊಂದು ಟ್ರ್ಯಾಕ್ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಾಯಕ ನಟರಾದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ವಿಜಯ ರಾಘವೇಂದ್ರ, ದೂದ್ ಪೇಡಾ ದಿಗಂತ್, ಲವ್ಲಿ ಸ್ಟಾರ್ ಪ್ರೇಮ್ ಒಟ್ಟಾಗಿ ನಟಿಸಲಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಟ್ನಲ್ಲಿ ನಟ ತರುಣ್ ಸುಧೀರ್ ಅವರು ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿರುವ 'ಚೌಕ' ಚಿತ್ರ ಸದ್ಯಕ್ಕೆ ಗಾಂಧಿನಗರದಲ್ಲಿ ಟಾಕ್ ಆಫ್ ದ ಟಾಪಿಕ್ ಆಗಿದೆ.

English summary
The shooting for Dwarkish's 50th production 'Chauka' is on full swing and one of the highlights of the film as per the sources is five well known cinematographers have been roped to shoot for the film. Kannada's leading cinematographers including Satya Hegade, 'Mungaru Male' Krishna, Santhosh Rai Pathaje, Shekhar Chandru and Sudhakar will be handling the camera for this film.
Please Wait while comments are loading...

Kannada Photos

Go to : More Photos