»   » ಈ ವಾರ ಕನ್ನಡದಲ್ಲಿ ಯಾವ್ಯಾವ ಚಿತ್ರಗಳು ರಿಲೀಸ್?

ಈ ವಾರ ಕನ್ನಡದಲ್ಲಿ ಯಾವ್ಯಾವ ಚಿತ್ರಗಳು ರಿಲೀಸ್?

Posted by:
Subscribe to Filmibeat Kannada

ಪ್ರತಿವಾರದಂತೆ ಈ ವಾರವೂ ಸ್ಯಾಂಡಲ್ ವುಡ್ ನಲ್ಲಿ ಸಿನಿಮೋತ್ಸವ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಚಿತ್ರಗಳು ಒಟ್ಟಿಗೆ ತೆರೆಗೆ ಬರಲು ಸಿದ್ದವಾಗಿದ್ದವು. ಆದ್ರೆ, ಕೊನೆ ಕ್ಷಣದಲ್ಲಿ ಎರಡು ಚಿತ್ರ ಮುಂದಕ್ಕೆ ಹೋಗಿದೆ.

ಸಸ್ಪೆನ್ಸ್, ಥ್ರಿಲ್ಲಿಂಗ್, ಲವ್, ಸಾಮಾಜಿಕ ಚಿತ್ರಗಳು ಸೇರಿದಂತೆ ಎಲ್ಲ ಬಗೆಯ ಪ್ರೇಕ್ಷಕರನ್ನ ರಂಜಿಸಲು ಸ್ಯಾಂಡಲ್ ವುಡ್ ಸಿದ್ದವಾಗಿದೆ. ಅನೂಪ್ ರೇವಣ್ಣ ಅಭಿನಯದ 'ಪಂಟ' ಜೊತೆ ಬೇರೆ ಯಾವ ಸಿನಿಮಾಗಳು ಬರುತ್ತಿವೆ ಎಂಬ ಮಾಹಿತಿ ಇಲ್ಲಿದೆ.

ಅನೂಪ್ ಅಭಿನಯ 'ಪಂಟ'

ಅನೂಪ್ ಅಭಿನಯ 'ಪಂಟ'

ಅನೂಪ್ ರೇವಣ್ಣ ಅಭಿನಯದ ಎರಡನೇ ಚಿತ್ರ 'ಪಂಟ' ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಹುಟ್ಟಿಹಾಕಿರುವ 'ಪಂಟ', ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ. ಈ ಚಿತ್ರವನ್ನ ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಸುಮ್ರಮಣ್ಯಂ.ಕೆ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ರಿತೀಕ್ಷ ಚಿತ್ರದ ನಾಯಕಿಯಾಗಿದ್ದಾರೆ.

ಹೊಸಬರ 'ಪ್ರೀತಿ ಪ್ರೇಮ'

ಹೊಸಬರ 'ಪ್ರೀತಿ ಪ್ರೇಮ'

ಕೃಷ್ಣ ಚೈತನ್ಯ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಪ್ರೀತಿ-ಪ್ರೇಮ' ಚಿತ್ರವೂ ಈ ವಾರ ಬೆಳ್ಳಿ ತೆರೆಗೆ ಬರುತ್ತಿದೆ. ಕಾಶಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಬಿ.ಜೆ ಭರತ್ ಸಂಗೀತ ನೀಡಿದ್ದಾರೆ. ನಿರ್ಮಾಣದ ಜೊತೆ ಕೃಷ್ಣ ಚೈತನ್ಯ ಈ ಚಿತ್ರದ ನಾಯಕನಾಗಿ ನಟಿಸಿದ್ದು, ನಿಧಿ ಕುಶಾಲಪ್ಪ ನಾಯಕಿಯಾಗಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ಗಿರಿ, ಗಿರೀಶ್ ವೈದ್ಯನಾಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಸುರೇಶ್ ಹೆಬ್ಳಿಕರ್ ಅವರ 'ಮನಮಂಥನ'

ಸುರೇಶ್ ಹೆಬ್ಳಿಕರ್ ಅವರ 'ಮನಮಂಥನ'

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕರಾಗಿರುವ ಸುರೇಶ್ ಹೆಬ್ಳಿಕರ್ ಆಕ್ಷನ್ ಕಟ್ ಹೇಳಿರುವ 'ಮನಮಂಥನ' ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಅತ್ಯುತ್ತಮ ಪೋಷಕ ನಟನೆಗಾಗಿ ರಮೇಶ್ ಭಟ್ ಅವರಿಗೆ 2015-2016ನೇ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಕಥೆಯಾಗಿದ್ದು, ಕಾಲೇಜ್ ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಗುವ ಚಿತ್ರಕಥೆ ಇದಾಗಿದೆ. ಸುರೇಶ್ ಹೆಬ್ಳಿಕರ್, ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಮುಂದಕ್ಕೆ ಹೋದ 2 ಚಿತ್ರಗಳು

ಮುಂದಕ್ಕೆ ಹೋದ 2 ಚಿತ್ರಗಳು

ಸೆನ್ಸಾರ್ ಮಂಡಳಿ ಸಿನಿಮಾ ನೋಡದ ಕಾರಣ ಹರ್ಷ ಅಭಿನಯದ 'ವರ್ಧನ' ಹಾಗೂ 'ಶ್ರೀನಿವಾಸ ಕಲ್ಯಾಣ' ಚಿತ್ರಗಳು ಮುಂದಕ್ಕೆ ಹೋಗಿದೆ. ಈ ಎರಡು ಚಿತ್ರಗಳು ಈ ವಾರ ಬಿಡುಗಡೆಯಾಗಬೇಕಿತ್ತು. ಚಿತ್ರಮಂದಿರಗಳನ್ನ ಕೂಡ ಕಾಯ್ದಿರಿಸಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಪೋಸ್ಟ್ ಪೋನ್ ಮಾಡಿಕೊಂಡಿದೆ.

ನಿಮ್ಮ ಆಯ್ಕೆ ಯಾವುದು?

ನಿಮ್ಮ ಆಯ್ಕೆ ಯಾವುದು?

ಹೀಗಾಗಿ, ಈ ವಾರ ಮೂರು ಸಿನಿಮಾಗಳು ಖಚಿತವಾಗಿದ್ದು, ಮತ್ತೆರೆಡು ಚಿತ್ರಗಳು ರೇಸ್ ನಿಂದ ಹಿಂದೆ ಸರಿದಿವೆ. ಈ ವಾರ ನೀವು ಸಿನಿಮಾ ನೋಡಬೇಕು ಎಂದು ಕೊಂಡಿದ್ದರೇ, ಯಾವ ಚಿತ್ರಕ್ಕೆ ಹೋಗುತ್ತೀರಾ ಎಂದು ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

English summary
Kannada Actor Anup Revanna starrer Kannada Movie 'Panta', and 2 Other' Movies are Releasing on February 17th. here is the detil report....
Please Wait while comments are loading...

Kannada Photos

Go to : More Photos