twitter
    For Quick Alerts
    ALLOW NOTIFICATIONS  
    For Daily Alerts

    ಕಠಾರಿವೀರ ಚಿತ್ರದ ಮೇಲೆ ಕೃತಿಚೌರ್ಯ ಆರೋಪ

    By Rajendra
    |

    ಉಪೇಂದ್ರ ಹಾಗೂ ರಮ್ಯಾ ಅಭಿನಯದ ಅದ್ದೂರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಮೇ 10ಕ್ಕೆ ತೆರೆಕಾಣುತ್ತಿದೆ. ಅಷ್ಟರಲ್ಲಾಗಲೇ ಚಿತ್ರಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ತಮ್ಮ ಕತೆಯನ್ನು ಕದ್ದಿದ್ದಾರೆ ಎಂದು ಯುವ ನಟ ಹಾಗೂ ಲೇಖಕ ನಿರಂಜನ್ ಶೆಟ್ಟಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.

    2006ರಲ್ಲಿ ತಾವು ಬರೆದಿದ್ದ 'ಯಮೇಂದ್ರ Vs ಉಪೇಂದ್ರ' ಕತೆಯನ್ನು ಉಪೇಂದ್ರ ಅವರಿಗೆ ಹೇಳಿದ್ದೆ. ಈಗ ಅದೇ ಕತೆಯನ್ನು ಕದ್ದು ಚಿತ್ರ ಮಾಡಿದ್ದಾರೆ. ತಮ್ಮ ಕತೆಯನ್ನು 2006ರಲ್ಲಿ ಚೆನ್ನೈನಲ್ಲಿ ರಿಜಿಸ್ಟರ್ಡ್ ಮಾಡಿದ್ದೇನೆ ಎಂದು ನಿರಂಜನ್ ಶೆಟ್ಟಿ ಆರೋಪಿಸಿದ್ದಾರೆ.

    ಈ ಸಂಬಂಧ ಅವರು 47ನೇ ಸಿಸಿಎಚ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. 'ಕಠಾರಿವೀರ' ಚಿತ್ರದ ಡಬ್ಬಿಂಗ್, ರಿಪ್ರೊಡಕ್ಷನ್‌ ಹಾಗೂ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ನಿರಂಜನ್ ಶೆಟ್ಟಿ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಈ ಸಂಬಂಧ ಕೋರ್ಟ್ ಉಪೇಂದ್ರ, ಮುನಿರತ್ನ ಅವರಿಗೆ ನೋಟೀಸ್ ಜಾರಿ ಮಾಡಿದೆ. ಈ ಕೇಸಿನ ವಿಚಾರಣೆಯನ್ನು ಕೋರ್ಟ್ ಮೇ 8ಕ್ಕೆ ಮುಂದೂಡಿದೆ. (ಒನ್‌ಇಂಡಿಯಾ ಕನ್ನಡ)

    English summary
    Just a week before the release of Upendra and Ramya lead Katari Veera Surasundarangi, the film has run into a legal hassle. A young hero and writer Niranjan Shetty has filed a case of plagiarism against the Munirathnam claiming that the story of ‘karati Veera’ was apparently stolen from him.
    Saturday, May 5, 2012, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X