»   » 61ನೇ ಫಿಲಂಫೇರ್ ಪ್ರಶಸ್ತಿ ಪ್ರಕಟ, ಮೈನಾ ಅತ್ಯುತ್ತಮ ಚಿತ್ರ

61ನೇ ಫಿಲಂಫೇರ್ ಪ್ರಶಸ್ತಿ ಪ್ರಕಟ, ಮೈನಾ ಅತ್ಯುತ್ತಮ ಚಿತ್ರ

Posted by:
Subscribe to Filmibeat Kannada

2014ರ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ಪ್ರಕಟವಾಗಿದೆ. ಶನಿವಾರ ಚೆನ್ನೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಕ್ಷಿಣ ಭಾರತದ ಫಿಲಂಫೇರ್ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಕನ್ನಡದ ಅತ್ಯುತ್ತಮ ಚಿತ್ರವಾಗಿ ಮೈನಾ ಆಯ್ಕೆಯಾಗಿದ್ದು, ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ ಮತ್ತು ಅಮೂಲ್ಯ ನಟಿಯಾಗಿ ಆಯ್ಕೆಯಾಗಿದ್ದಾರೆ.

61ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಚೆನ್ನೈನ ನೆಹರು ಇನ್ ಡೋರ್ ಸ್ಪೇಡಿಯಂನಲ್ಲಿ ಜುಲೈ 12ರ ಶನಿವಾರ ನಡೆಯಿತು. ತಮಿಳು, ತೆಲಗು, ಕನ್ನಡ, ಮಲಯಾಳಂ ಚಿತ್ರರಂಗದ ಪ್ರಮುಖ ನಟ ನಟಿಯರು ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. [61 ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು]

ಕನ್ನಡದ ಅತ್ಯುತ್ತಮ ಚಿತ್ರವಾಗಿ ಮೈನಾ ಪ್ರಶಸ್ತಿ ಪಡೆದರೆ, ಚಾರ್ ಮಿನಾರ್ ಚಿತ್ರದ ನಟನೆಗಾಗಿ ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಶ್ರಾವಣಿ ಸುಬ್ರಮಣ್ಯ ಚಿತ್ರದ ಅತ್ಯುತ್ತಮ ನಟನೆಗಾಗಿ ಅಮೂಲ್ಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ ಎರಡು ಪ್ರಶಸ್ತಿಗಳನ್ನು ಪಡೆದಿದೆ. ಭಜರಂಗಿ ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಅರ್ಜುನ್ ಜನ್ಯ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಉತ್ತಮ ಪೋಷಕ ಪಾತ್ರಕ್ಕಾಗಿ ನಟ ಅಚ್ಯುತ್‌ ರಾವ್ (ಲೂಸಿಯಾ), ನಟಿ ಕಲ್ಯಾಣಿ (ಜಯಮ್ಮನ ಮಗ) ಪ್ರಶಸ್ತಿ ಮುಡಿಗೇರಿಸಿಕೊಂಡರು.

ಮೈನಾ ಅತ್ಯುತ್ತಮ ಚಿತ್ರ
  

ಮೈನಾ ಅತ್ಯುತ್ತಮ ಚಿತ್ರ

`ಮೈನಾ` ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ಚೇತನ್ ಮತ್ತು ನಿತ್ಯಾಮೆನನ್ ಅಭಿನಯದ ಮೈನಾ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ.

ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ
  

ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ

`ಚಾರ್ ಮಿನಾರ್` ಚಿತ್ರದ ನಟನೆಗಾಗಿ ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತಾಜ್ ಮಹಲ್ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಚಾರ್ ಮಿನಾರ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅಮೂಲ್ಯ ಅತ್ಯುತ್ತಮ ನಟಿ
  

ಅಮೂಲ್ಯ ಅತ್ಯುತ್ತಮ ನಟಿ

ಶ್ರಾವಣಿ ಸುಬ್ರಮಣ್ಯ ಚಿತ್ರದ ನಟನೆಗಾಗಿ ಅಮೂಲ್ಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಚೆಲುವಿನ ಚಿತ್ತಾರ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಮಂಜು ಸ್ವರಾಜ್‌ ಚಿತ್ರದ ನಿರ್ದೇಶಕರು.

ಲೂಸಿಯಾ ಮುಡಿಗೆ ಎರಡು ಪ್ರಶಸ್ತಿ
  

ಲೂಸಿಯಾ ಮುಡಿಗೆ ಎರಡು ಪ್ರಶಸ್ತಿ

ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ ಎರಡು ಪ್ರಶಸ್ತಿಗಳನ್ನು ಪಡೆದಿದೆ. ಉತ್ತಮ ನಿರ್ದೇಶನಕ್ಕಾಗಿ ಪವನ್ ಕುಮಾರ್ ಅವರಿಗೆ ಮತ್ತು ಅತ್ಯುತ್ತಮ ಗಾಯಕ ಪ್ರಶಸ್ತಿ ಪೂರ್ಣಚಂದ್ರ ತೇಜಸ್ವಿ ಅವರ ಪಾಲಾಗಿದೆ.

ಅರ್ಜುನ್ ಜನ್ಯ ಅತ್ಯುತ್ತಮ ಸಂಗೀತ ನಿರ್ದೇಶಕ
  

ಅರ್ಜುನ್ ಜನ್ಯ ಅತ್ಯುತ್ತಮ ಸಂಗೀತ ನಿರ್ದೇಶಕ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅರ್ಜುನ್ ಜನ್ಯ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಸೌಮ್ಯಾ ರಾವ್ ಅತ್ಯುತ್ತಮ ಗಾಯಕಿ
  

ಸೌಮ್ಯಾ ರಾವ್ ಅತ್ಯುತ್ತಮ ಗಾಯಕಿ

ಅತ್ಯುತ್ತಮ ಗಾಯಕಿ ಪ್ರಶಸ್ತಿ ಸೌಮ್ಯಾ ರಾವ್ ಅವರಿಗೆ ದೊರಕಿದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಹಾಡಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಉತ್ತಮ ಪೋಷಕ ನಟ ಅಚ್ಯುತ್ ಕುಮಾರ್
  

ಉತ್ತಮ ಪೋಷಕ ನಟ ಅಚ್ಯುತ್ ಕುಮಾರ್

ಉತ್ತಮ ಪೋಷಕ ಪಾತ್ರಕ್ಕಾಗಿ ನಟ ಅಚ್ಯುತ್‌ ಕುಮಾರ್ (ಲೂಸಿಯಾ), ನಟಿ ಕಲ್ಯಾಣಿ (ಜಯಮ್ಮನ ಮಗ) ಪ್ರಶಸ್ತಿ ಮುಡಿಗೇರಿಸಿಕೊಂಡರು. ಉತ್ತಮ ಗೀತರಚನೆಕಾರರಾಗಿ ಸಿದ್ದು ಕೋಡಿಪುರ (ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ) ಹೊರಹೊಮ್ಮಿದರು.

English summary
The 61st Film fare Awards South (2014) was held at Nehru Stadium in Chennai on Saturday, July12. Kannada film Lucia bags two awards Best singer Poornachandra Tejaswi and Director Pawan Kumar. Best movie award bagged by Maina film.
Please Wait while comments are loading...

Kannada Photos

Go to : More Photos