twitter
    For Quick Alerts
    ALLOW NOTIFICATIONS  
    For Daily Alerts

    ಸ್ವಲ್ಪ ಅಡ್ಜಸ್ಟ್ ಮಾಡಿ, ನಮ್ಮ ಬೆಂಗ್ಳೂರ್ ಫಟಾಫಟ್ ಅಂತಾ ನೋಡ್ಬಿಡಿ

    By ಜೇಮ್ಸ್ ಮಾರ್ಟಿನ್
    |

    "ಕನ್ನಡ ಬರಲ್ವಾ, ಡಬ್ಬಲ್ ಮೀಟರ್ ಆಗುತ್ತೆ" ಎಂದು ಹೇಳುವ ಆಟೋ ಡ್ರೈವರ್ ಪಾತ್ರದ ಜೊತೆಗೆ ಬೆಂಗಳೂರಿನ ವಿವಿಧ ಭಾಗದ ದೈನಂದಿನ ಬದುಕನ್ನು ನವಿರಾದ ಹಾಸ್ಯದ ಲೇಪದೊಂದಿಗೆ ಉಣಬಡಿಸಿದೆ ಫಟಾಫಟ್ ಲುಂಗಿ ಪ್ರೊಡೆಕ್ಷನ್.

    Shit Bangaloreans Say! ಟೈಟಲ್ ನೊಂದಿಗೆ ಸಾಮಾಜಿಕ ಜಾಲ ತಾಣ ಯೂಟ್ಯೂಬ್ ಸೇರಿರುವ ಈ 6.5 ನಿಮಿಷ ವಿಡಿಯೋ ಒಂದು ದಿನದಲ್ಲೇ 17.747 ವೀಕ್ಷಣೆ (ಈ ಸಮಯಕ್ಕೆ) ಪಡೆದುಕೊಂಡು ಹಿಟ್ ಎನಿಸಿದೆ. ['ಜಯನಗರ 4ನೇ ಬ್ಲಾಕ್' ಒಂದು ವಿಭಿನ್ನ ಕಿರುಚಿತ್ರ]

    ಟೈಟಲ್ ನೋಡಿ ಮುಖ ಗಂಟಿಕ್ಕಿಕೊಳ್ಳಬೇಡಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ಸಮಾಧಾನ ತಗೊಂಡು ಪಿಕ್ಚರ್ ನೋಡಿ! ಎಂಬ ವಿಡಿಯೋ ಹಾಕಿದವರೇ ಹೇಳಿದ್ದಾರೆ.

    A Film Based on Location in Namma Bengaluru

    ಬೆಳ್ಳಂಬೆಳ್ಳಗೆ ಸೊಪ್ಪು ಮಾರಲು ಬರುವ ಮಹಿಳೆ, ಹೋಟೆಲ್ ಮಾಣಿ, ಸರ್ಕಾರಿ ಕಚೇರಿಯಲ್ಲಿ ಕೇಳಿ ಬರುವ 'ನಾಳೆ ಬನ್ನಿ' ಡೈಲಾಗ್, ಬೆಂಗಳೂರಿನ ಕಂಗ್ಲೀಷ್ ಹಾಗೂ ಹೈ ಫೈ ಬಂಗ್ಲೀಷ್(ಬೆಂಗಳೂರಿನ ಇಂಗ್ಲೀಷ್), ಉದ್ಯಾನವನದಲ್ಲಿ ಪ್ರಣಯಪಕ್ಷಿಗಳ ಚಿಲಿಪಿಲಿ, ಬಿಲಹರಿ ರಾಗದಲ್ಲಿ 'ಏ ಗಂಗೂ ಈ ಬೈಕು ಕಲಿಸಿಕೊಡೋ ನಂಗೂ..' ಸಾಂಗ್, ಇಂಗ್ಲೀಷ್ ಡಾಕ್ಟರ್ ಮುಂದೆ ಕಷ್ಟಪಡುವ ಸಾಬಣ್ಣ ಹೀಗೆ ಬೆಂಗಳೂರಿನ ವಿವಿಧ ಮುಖಗಳನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಕೊನೆಯಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ನೊಂದಿಗೆ ಕೊನೆಗೊಳ್ಳುತ್ತದೆ. [ಬದುಕಿನ ಅರ್ಥ ತಿಳಿಸುವ 'ಸೆವೆಂಟೀನ್' ಚಿತ್ರ]

    ಈ ಪುಟ್ಟ ವಿಡಿಯೋದಲ್ಲಿ ವೆಲ್ವೆಟ್ ವಿಭಾ, ಕಲ್ಪನಾ ರಾವ್, ಸೈನಾ ಜಯಪಾಲ್, ಶ್ರೀರಾಮ್ ಎ ಅಭಿನಯವಿದೆ. ಸುಕಾಂತ್ ಆರ್ ಅಭಿನಯದ ಜೊತೆಗೆ ಕೆಮರಾ ಹಾಗೂ ನಿರ್ದೇಶನದ ಹೊಣೆ ಹೊತ್ತು ಸಕತ್ ಆಗಿ ನಿಭಾಯಿಸಿದ್ದಾರೆ. ವಿಡಿಯೋ ನೋಡಿ ಮಚ್ಚಾ ದಿಸ್ ಇಸ್ ಟೂ ಮಚ್ ಡಾ! ಎನ್ನಬೇಡಿ ಮತ್ತೆ. ಇದೆಲ್ಲವೂ ಹಾಸ್ಯಕ್ಕಾಗಿ ನಕ್ಕು ನಲಿಯುವುದಕ್ಕಾಗಿ ಮಾಡಿರುವ ಅಣಕು ವಿಡಿಯೋ...ಇನ್ನೇಕೆ ತಡ ನೀವು ಒಮ್ಮೆ ನೋಡಿ ಆನಂದಿಸಿ...

    English summary
    A Film Based on Location in Namma Bengaluru by Fatafat Lungi Production has become instant hit on social networking site like Facebook and Youtube. This 6.50 minutes video reveals various lingos, culture and behaviour of public and professionals based on different location in Namma Bengaluru.
    Sunday, January 11, 2015, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X