»   » ಅಭಿಮಾನದ ಪರಾಕಾಷ್ಟೆ ಮೆರೆದು 'ಡಿ' ಬಾಸ್ ಭಕ್ತ ಬರೆದಿರುವ ಪತ್ರ ಇದು

ಅಭಿಮಾನದ ಪರಾಕಾಷ್ಟೆ ಮೆರೆದು 'ಡಿ' ಬಾಸ್ ಭಕ್ತ ಬರೆದಿರುವ ಪತ್ರ ಇದು

Posted by:
Subscribe to Filmibeat Kannada

ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ 'ಡಿ' ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರದ್ದೇ ಸದ್ದು-ಸುದ್ದಿ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಬಾಂಬ್ ಸಿಡಿಸಿದ ನಂತರ ಎಲ್ಲರ ಬಾಯಲ್ಲೂ ದಚ್ಚು-ಕಿಚ್ಚ ಸ್ನೇಹ ಸಮರವೇ ನುಲಿದಾಡುತ್ತಿದೆ.

ಯಾರು ಏನೇ ಮಾತನಾಡಿಕೊಂಡರೂ, 'ಡಿ' ಬಾಸ್ ಅಭಿಮಾನಿಗಳಿಗೆ ದಚ್ಚು ಮೇಲಿರುವ ಅಭಿಮಾನ ಕೊಂಚ ಕೂಡ ಕಡಿಮೆ ಅಗಿಲ್ಲ. ಅದಕ್ಕೆ ಸಾಕ್ಷಿ ದರ್ಶನ್ ಭಕ್ತರೊಬ್ಬರು ಬರೆದಿರುವ ಈ ಪತ್ರ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಈ ಪತ್ರದಲ್ಲಿ ದರ್ಶನ್ ಮೇಲಿರುವ ಅಭಿಮಾನದ ಪರಾಕಾಷ್ಟೆ ಮರೆಯಲು ಹೋಗಿ ಇತರೆ ನಟರಿಗೆ ಟಾಂಟ್ ನೀಡಲಾಗಿದೆ. ಅಷ್ಟಕ್ಕೂ, ದರ್ಶನ್ ಅಭಿಮಾನಿ ಬರೆದಿರುವ ಪತ್ರದಲ್ಲಿ ಏನಿದೆ ಅಂತ ನೀವೇ ಓದಿರಿ... (ಪತ್ರದ ಯಥಾವತ್ ಸಾಲುಗಳು ಇಲ್ಲಿವೆ)

'ಡಿ' ಬಾಸ್ ಇಷ್ಟ ಪಡಲು ಕಾರಣಗಳೇನು.?

'ಡಿ' ಬಾಸ್ ಇಷ್ಟ ಪಡಲು ಕಾರಣಗಳೇನು.?

''ಬಾಸ್ ಇಷ್ಟಪಡಲು ಕಾರಣಗಳು - ನಮ್ಮ ಬಾಸ್ ಸ್ವಾಭಿಮಾನಿ. ಕಷ್ಟ ಪಟ್ಟು ಮೇಲೆ ಬಂದವರು. 5-100 ರೂಪಾಯಿ ವರೆಗೆ ಕೂಲಿ ಕೆಲಸ ಮಾಡಿ ಜೀವನ ನಡೆಸಿದವರು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ, ಯಾರ ಮುಂದೆ ತಲೆ ತಗ್ಗಿಸದೇ ನೇರವಾಗಿ ಇರೋ ಅವರ ಸ್ವಭಾವ, ಇದ್ದದ್ದನ್ನ ಇದ್ದ ಹಾಗೆ ಹೇಳೋ ನೇರ ವ್ಯಕ್ತಿತ್ವ ಅವರದ್ದು'' - 'ಡಿ' ಬಾಸ್ ಅಭಿಮಾನಿ ['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ನಮ್ಮ ಬಾಸ್ ಅಷ್ಟು ಜೀವನದಲ್ಲಿ ಯಾರೂ ಕಷ್ಟ ಪಟ್ಟಿಲ್ಲ

ನಮ್ಮ ಬಾಸ್ ಅಷ್ಟು ಜೀವನದಲ್ಲಿ ಯಾರೂ ಕಷ್ಟ ಪಟ್ಟಿಲ್ಲ

''ಎಲ್ಲ ನಟರು ಕಷ್ಟ ಪಟ್ಟು ಮೇಲೆ ಬಂದಿರಬಹುದು. ಆದ್ರೆ ನಮ್ಮ ಬಾಸ್ ಅಷ್ಟು ಜೀವನದಲ್ಲಿ ಯಾರೂ ಕಷ್ಟಪಟ್ಟಿಲ್ಲ. ಯಾಕಂದ್ರೆ, ಆ ಎಲ್ಲ ನಟರಿಗೆ ತಿನ್ನೋ ಅನ್ನಕ್ಕೆ ಏನೂ ಕಷ್ಟ ಇರಲಿಲ್ಲ. ಅವರ ತಂದೆಯವರು ಶ್ರೀಮಂತರಿದ್ದರು. ಅವರಿಗೆ ಸಿನಿಮಾದಲ್ಲಿ ಮೇಲೆ ಬರಲು ಕಷ್ಟ ಪಟ್ಟಿರಬಹುದು. ಆದ್ರೆ ಜೀವನದಲ್ಲಿ ಮೇಲೆ ಬರಲು ಅಲ್ಲ'' - 'ಡಿ' ಬಾಸ್ ಅಭಿಮಾನಿ [ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಅಭಿಮಾನಿಗಳನ್ನು ಸಂಪಾದನೆ ಮಾಡಲು...

ಅಭಿಮಾನಿಗಳನ್ನು ಸಂಪಾದನೆ ಮಾಡಲು...

''ನಮ್ಮ ಬಾಸ್ ಅಭಿಮಾನಿಗಳನ್ನು ಸಂಪಾದನೆ ಮಾಡೋಕೆ, ಎಲ್ಲಾ ನಟರ ಸ್ನೇಹ ಮಾಡಲ್ಲ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲ್ಲ. ಸಿಕ್ಕ ಸಿಕ್ಕ ಆಫರ್ಸ್ ಗೆಲ್ಲ ಬ್ರ್ಯಾಂಡ್ ಅಂಬಾಸಿಡರ್ ಆಗಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಿ, ಅಭಿಮಾನಿಗಳನ್ನು ಸಂಪಾದಿಸಲ್ಲ. ತಾನು ಮಾಡಿದ ಸಹಾಯವನ್ನು ಹೇಳಿ ಹೆಸರು ಗಳಿಸುವುದಿಲ್ಲ'' - 'ಡಿ' ಬಾಸ್ ಅಭಿಮಾನಿ [ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ಒಳಗೊಂದು ಹೊರಗೊಂದು ಇಲ್ಲ

ಒಳಗೊಂದು ಹೊರಗೊಂದು ಇಲ್ಲ

''ಒಳಗೊಂದು ಹೊರಗೊಂದು ವ್ಯಕ್ತಿತ್ವದವರಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಬಿಜಿ ಇರಲ್ಲ. ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಲು ಸ್ಟೇಜ್ ನಲ್ಲಿ ಡೈಲಾಗ್ ಹೊಡೆಯಲ್ಲ. ಡ್ಯಾನ್ಸ್ ಮಾಡಲ್ಲ'' - 'ಡಿ' ಬಾಸ್ ಅಭಿಮಾನಿ [ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!]

ಗೋವಿನ ಬೆಲೆ ಗೊತ್ತು

ಗೋವಿನ ಬೆಲೆ ಗೊತ್ತು

''ಬೇರೆ ನಟರ ಫಿಲ್ಮ್ ಗಳಿಗೆ ಹಾಡು ಹಾಡಲ್ಲ. ಗೋವಿನ ಹಾಲು ಕರೆದು ಜೀವನ ಮಾಡಿದ ನಮ್ಮ ಬಾಸ್ ಗೆ ಗೋವಿನ ಬೆಲೆ ಗೊತ್ತು. ಬೆನ್ನು ಹಿಂದೆ ಚೂರಿ ಹಾಕಿದೋರಿಗೆ ವಿಷ ಕಾರೋದೂ ಗೊತ್ತು. ಬಾಸ್ ನ ಯಾರು ಕೈ ಬಿಟ್ಟರೂ, ಅಭಿಮಾನಿಗಳು ತಲೆ ಮೇಲೆ ಹೊತ್ತು ಮೆರೆಸ್ತಾರ'' - 'ಡಿ' ಬಾಸ್ ಅಭಿಮಾನಿ [ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ಚಾಲೆಂಜ್ ಅಂದ್ರೆ ಇದು ಅಲ್ವಾ.?

ಚಾಲೆಂಜ್ ಅಂದ್ರೆ ಇದು ಅಲ್ವಾ.?

''ನಮ್ಮ ಬಾಸ್ ತಾಕತ್ತು ಏನು ಅಂತ ಯಾವುದೋ ನ್ಯೂಸ್ ಚಾನೆಲ್ ನಲ್ಲಿ ಹೇಳ್ತಾ ಇದ್ದರು ಕೇಳಿ.. ದರ್ಶನ್ ಫಿಲ್ಮ್ ಆವ್ರೇಜ್ ಹಿಟ್ ಆದರೂ ಯಾವುದೋ ಹೀರೋಯಿನ್, ಸೆಂಟಿಮೆಂಟ್, ಸಾಂಗ್ಸ್ ಇಲ್ಲದೇ ಇದ್ದರೂ ಕೇವಲ 'ದರ್ಶನ್' ಅನ್ನೋ ಒಂದು ಹೆಸರಿನಿಂದ ಫಿಲ್ಮ್ ನೋಡೋಕೆ ಜನ ಬರ್ತಾರೆ. ಆ ಒಂದು ಹೆಸರಿನಿಂದ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್ ಬಂದು ಲಾಭ ತಂದುಕೊಡುತ್ತೆ. ಇದು ಚಾಲೆಂಜ್ ಅಂದ್ರೆ ಅಲ್ವಾ.?'' - 'ಡಿ' ಬಾಸ್ ಅಭಿಮಾನಿ [ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

English summary
Hard-core Fan of Challenging Star Darshan has written a letter.
Please Wait while comments are loading...

Kannada Photos

Go to : More Photos