twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಸವಿನೆನಪು ಸಮಾರಂಭ

    By Harshitha
    |

    ಕನ್ನಡ ಚಿತ್ರೋದ್ಯಮದಲ್ಲಿ ನಿರ್ದೇಶಕರಿಗೆ ತಾರಾ ವರ್ಚಸ್ಸು ತಂದುಕೊಟ್ಟ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಕನ್ನಡದ ಅನೇಕ ಕಾದಂಬರಿಗಳನ್ನು ಚಿತ್ರಮಾಧ್ಯಮಕ್ಕೆ ತಂದು ಜನಪ್ರಿಯ ಚಿತ್ರಗಳನ್ನು ತೆರೆಗಿತ್ತ ಪುಟ್ಟಣ್ಣ ಹಲವಾರು ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.

    ನಾಡು ಕಂಡ ಪ್ರತಿಭಾನ್ವಿತ ಚಿತ್ರ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಬಹುಕಾಲ ನೆನಪಲ್ಲಿ ಉಳಿಯುವಂತಹ ಚಿತ್ರಗಳನ್ನು ದಿಗ್ದರ್ಶಿಸಿದವರು. ಇಂತಿಪ್ಪ ಪುಟ್ಟಣ್ಣ ಕಣಗಾಲ್ ಬಾರದ ಲೋಕಕ್ಕೆ ತೆರಳಿ 30 ವರ್ಷಗಳು ಕಳೆದಿವೆ. [ವಿಷ್ಣುವರ್ಧನ್ 'ನಾಗರಹಾವು' ರೋಷಕ್ಕೆ ನಲವತ್ತು ವರ್ಷ]

    A memorable program in the memory of Puttanna Kanagal

    ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುಣ್ಯತಿಥಿಯ ಅಂಗವಾಗಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಹಯೋಗದಲ್ಲಿ ಜೂನ್ 5 ರಂದು ಸಂಜೆ 6 ಗಂಟೆಗೆ, ನಗರದ ಭಗವಾನ್ ಮಹಾವೀರ್ ರಸ್ತೆ, ವಾರ್ತಾ ಸೌಧದಲ್ಲಿರುವ ಸುಲೋಚನಾ ಸಭಾಂಗಣದಲ್ಲಿ ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ 'ಪುಟ್ಟಣ್ಣ ಕಣಗಾಲ್ ಸವಿನೆನಪು' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. [ಪುಟ್ಟಣ್ಣ ಕಣಗಾಲ್ ಅಪರೂಪ ಪುಸ್ತಕ ಲೋಕಾರ್ಪಣೆ]

    A memorable program in the memory of Puttanna Kanagal

    ಸಮಾರಂಭದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ, ಹಾಗೂ ಹಜ್ ಖಾತೆ ಸಚಿವ ಶ್ರೀ ಆರ್.ರೋಷನ್ ಬೇಗ್, ವಸತಿ ಸಚಿವ ಡಾ.ಅಂಬರೀಷ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿ ಸೋಜಾ, ಹಿರಿಯ ಕಲಾವಿದರಾದ ಪದ್ಮವಿಭೂಷಣ ಡಾ ಬಿ. ಸರೋಜಾದೇವಿ, ಶ್ರೀಮತಿ ಲೀಲಾವತಿ, ಡಾ. ಜಯಂತಿ, ಡಾ. ಭಾರತಿ ವಿಷ್ಣುವರ್ಧನ್, ಡಾ. ಶ್ರೀನಾಥ್, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಶ್ರೀ ಎಸ್. ವಿ. ರಾಜೇಂದ್ರಸಿಂಗ್ ಬಾಬು ಭಾಗವಹಿಸಲಿದ್ದಾರೆ.

    English summary
    Legendary Director Puttanna Kanagal's 30th Death Anniversary is on June 5th. On this occasion, Information and Public Relation Department of Karnataka is hosting a memorable program in the memory of Puttanna Kanagal.
    Wednesday, June 3, 2015, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X