twitter
    For Quick Alerts
    ALLOW NOTIFICATIONS  
    For Daily Alerts

    ಅರಿವು ಮೂಡಿಸುವ ಹರಿವು ನಾನು ಕಂಡಂತೆ: ಉಪೇಂದ್ರ

    By ಉಪೇಂದ್ರ ಕಗಲಗೊಂಬ
    |

    ಮಂಸೋರೆ ನಿರ್ದೇಶನದ 'ಹರಿವು' ಚಿತ್ರ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಪಾತ್ರವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೇ ಚಿತ್ರವನ್ನು ಸಂವಾದ.ಕಾಂ ಸಿನಿರಸಿಕರ ಮುಂದಿಟ್ಟು ಚಿತ್ರತಂಡದೊಡನೆ ಚರ್ಚೆ ಏರ್ಪಡಿಸಿತ್ತು.
    ಆಧುನಿಕ ಕಲಾ ಸಂಗ್ರಹಾಲಯ (NGMA)ದಲ್ಲಿ ಪ್ರದರ್ಶನದ ಕಂಡ ಈ ಚಿತ್ರ ಪ್ರದರ್ಶನ ಹಾಗೂ ಸಂವಾದ ಕುರಿತ ಒಂದು ವರದಿ ನಮ್ಮ ಓದುಗ ಉಪೇಂದ್ರ ಕಗಲಗೊಂಬ ಅವರಿಂದ ಇಲ್ಲಿದೆ...

    ಮನೆಯ ಕಡೆಗೆ ಬರುತ್ತಿರುವ ನಾಲ್ಕು ಚಕ್ರದ ಗಾಡಿ; ಗಾಡಿಯನ್ನು ನೋಡಿದಾಕ್ಷಣ ದೇವರ ಮನೆಗೆ ಹೋಗಿ ದೀಪ ಹೊತ್ತಿಸಿ ಹೊರ ಓಡಿ ಬರುವ ತಾಯಿ; ಇನ್ನೂ ಗಾಡಿಯ ಸುತ್ತಲೂ ದಡಬಡಿಸುತ್ತಾ ತನ್ನ ಮಗುವನ್ನ ಹುಡುಕುವ ಆ ತಾಯಿಯ ಹಪಾಹಪಿ...

    ಇದು ಚಿತ್ರವನ್ನು ನೋಡಿದ ಪ್ರೇಕ್ಷಕರ ಕಣ್ಣಿನಂಚಿನಲ್ಲಿ ಒದ್ದೆಯಾಗುವ ಸನ್ನಿವೇಶ. ಒಂದು ಕಡೆ; ನಗರ ಜೀವನಕ್ಕೆ ಒಗ್ಗಿಕೊಂಡಿರುವ ಮಗ, ತನ್ನ ಕೆಲಸ ಜಂಜಾಟದಲ್ಲಿ ತಂದೆ ಅನಾರೋಗ್ಯ ಪೀಡಿತನಾಗಿದ್ದರೂ ಅವರ ಬಗ್ಗೆ ಇರುವ ನಿರುತ್ಸಾಹ ಭಾವನೆಯುಳ್ಳವ. ಇನ್ನೊಂದು ಕಡೆ ಹಳ್ಳಿಯಲ್ಲಿ ಬಡ ರೈತ ತನ್ನ ಮಗನ ಅನಾರೋಗ್ಯವನ್ನು ಸರಿಪಡಿಸಲು ಹರಸಾಹಸಪಡುವವ, ಈ ಎರಡು ಎಳೆಯನ್ನು ಇಟ್ಟುಕೊಂಡು ನಿರ್ದೇಶಕ "ಮಂಸೋರೆ" ಕಥೆಯನ್ನು ಚೆನ್ನಾಗೆ ಹೆಣೆದಿದ್ದಾರೆ.

    ಸಂವಾದ ಡಾಟ್ ಕಾಂ ನಿಂದ 23 ಮೇ ಶನಿವಾರ ದಂದು, ರಾಷ್ಟ್ರ ಪ್ರಶಸ್ತಿ ವಿಜೇತ "ಹರಿವು" ಚಲನಚಿತ್ರದ ಪ್ರದರ್ಶನ ಹಾಗೂ ಚಿತ್ರ ನಿರ್ದೇಶಕ, ನಟರು ಮತ್ತು ತಂತ್ರಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಧುನಿಕ ಕಲಾ ಸಂಗ್ರಹಾಲಯ (ನ್ಯಾಶನಲ್ ಗ್ಯಾಲರೀ ಆಫ್ ಮಾಡರ್ನ್ ಆರ್ಟ್ NGMA)ದಲ್ಲಿ ಆಯೋಜಿಸಿತ್ತು. ಸಭಾಂಗಣದಲ್ಲಿ ಚಿತ್ರ ನೋಡಲು ಬಂದಿದ್ದ ಪ್ರೇಕ್ಷಕರ ಸಂಖ್ಯೆ ಹೆಚ್ಚಾದಾಗ ಕುಳಿತುಕೊಳ್ಳಲು ಜಾಗವಿಲ್ಲದೇ ನಿಂತುಕೊಂಡೆ "ಹರಿವು" ಚಿತ್ರವನ್ನು ಆಸ್ವಾದಿಸಿ, ಚಪ್ಪಾಳೆಯ ಸುರಿಮಳೆಗೈದರು.

    Upendra

    ಹರಿವು
    ಪ್ರಜಾವಾಣಿ ದಿನಪತ್ರಿಕೆಯಲ್ಲಿ ವೈದ್ಯರೊಬ್ಬರು ತಾವು ಎಂದೂ ಕಂಡರಿಯದ ನೈಜ ಘಟನೆಯನ್ನು ಓದುಗರ ಮನಕುಲುಕುವಂತೆ ಬರೆದಿದ್ದರು. ಬಡ ರೈತನೊಬ್ಬ ತನ್ನ ಮಗನಲ್ಲಿ ವಾಸಿಯಾಗದ ರೋಗವನ್ನು ತಾನು ಎಂದೂ ನೋಡದ ಬೆಂಗಳೂರು ನಗರಕ್ಕೆ ಕಾಲಿಡುತ್ತಾನೆ.

    ತನ್ನ ಮಗನ ರೋಗವನ್ನು ವಾಸಿಮಾಡಲು ಆಸ್ಪತ್ರೆಗಳಿಗೆ ಅಳೆಯುತ್ತಾನೆ. ಅಲ್ಲಿ ಅವನ್ನು ಅನುಭವಿಸಿದ ಪಾಡಿನ ಬಗ್ಗೆ ಪತ್ರಿಕೆಯ ಮೂಲಕ ಈ ನೈಜ ಘಟನೆಯ ಸುದ್ದಿಯನ್ನು ತಿಳಿದ ನಿರ್ದೇಶಕ ತಮ್ಮ ಚಿತ್ರಕಥೆಯಲ್ಲಿ ಎಳೆಎಳೆಯಾಗಿ ಬಿಡಿಸಿ, ಯುವ ಕಲಾವಿದರನ್ನು ಬಳಸಿಕೊಂಡು ಅರ್ಥಪೂರ್ಣವಾದ ಪ್ರಾದೇಶಿಕ ಚಿತ್ರವನ್ನು ನೀಡಿದ್ದಾರೆ.

    ಇದರ ಪ್ರತಿಫಲವಾಗಿ ನಿನ್ನೆಗಳಿಲ್ಲದ ನಾಳೆಯೆಡೆಗೆ ಶೀರ್ಷಿಕೆಯಡಿಯಲ್ಲಿ ಮೂಡಿಬಂದ "ಹರಿವು" ಚಿತ್ರಕ್ಕೆ 2014ನೇ ಸಾಲಿನ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ದೊರಕಿದೆ.

    ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಜನಪ್ರಿಯ ಸಿನಿಮಾ ವಿಮರ್ಶಕರು ಎಂ. ಕೆ ರಾಘವೇಂದ್ರ, ಹರೀಶ್ ಜಿ.ಬಿ. ಮತ್ತು ಡೇವಿಡ್ ಬಾಂಡ್ ರವರು ಚಿತ್ರತಂಡದೊಂದಿಗೆ ಭಾಗವಹಿಸಿ ಚಿತ್ರದ ಬಗ್ಗೆ ವಿಮರ್ಶೆ ನೀಡಿದರು.

    Harivu

    ಈ ಕಾರ್ಯಕ್ರಮವನ್ನು ವೀಕ್ಷಿಸಲು ಮೈಸೂರಿನಿಂದ ಬಂದ ವೈದ್ಯರೊಬ್ಬರು ಚಿತ್ರವನ್ನು ನೋಡಿ ಸಂತೋಷಭರಿತರಾಗಿ ಚಿತ್ರದ ನಿರ್ದೇಶಕ "ಮಂಸೋರೆ" ಮತ್ತು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತ "ಸಂಚಾರಿ ವಿಜಯ್" ರವರಿಗೆ ಸನ್ಮಾನಿಸಿದರು. B.F.A ಪದವೀಧರ ಆರ್ಟ್ ಹಿನ್ನೆಲೆಯಿಂದ ಬಂದ ಮಂಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ)ರವರು ಯಾವುದೇ ಸಿನಿಮಾದ ಬಗ್ಗೆ ತರಬೇತಿಯನ್ನು ಪಡೆಯದೇ ತಮ್ಮ ಸ್ವಂತಿಕೆಯಿಂದ ಸಿನಿಮಾರಂಗದಲ್ಲಿ ಬೆಳೆದು ನಿಂತಿದ್ದಾರೆ.

    ತಮ್ಮ ಮೊದಲ ಸಿನಿಮಾದಲ್ಲಿ ಆದ ಕೆಲವು ದೋಷಗಳನ್ನು ಸರಿಪಡಿಸಿಕೊಂಡು ಇಂದು "ಹರಿವು" ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೆಸರುಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಯುವ ನಿರ್ದೇಶಕರು, ಕಲಾವಿದರು ಭಾಗವಹಿಸಿದ್ದರು. "ಹರಿವು" ಚಿತ್ರವನ್ನು ನೋಡಿದ ಪ್ರೇಕ್ಷಕರು ನಿರ್ದೇಶಕ "ಮಂಸೋರೆ" ಹಾಗೂ ಚಿತ್ರ ತಂಡದವರಿಗೆ ಅಭಿನಂದಿಸಿದರು.

    ನೈಜ ಘಟನೆ ಆಧಾರಿತ "ಹರಿವು" ಚಿತ್ರವು ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ತಂದೆ-ಮಗನ ಪ್ರೀತಿಯನ್ನು "ಹರಿವು" ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. All the Best "ಹರಿವು"...

    English summary
    National Award winner best Kannada Movie "Harivu" directed by Mansore had special screening and debate on Saturday at National Gallery of Modern Art (NGMA), Bengaluru. Samvaada.com organised the event and here is a report on the same.
    Monday, May 25, 2015, 14:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X