twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಡಬ್ಬಿಂಗ್ ಏಕೆ? ಹೋರಾಟ ಕುರಿತ ಈ ಕಿರುಚಿತ್ರ ನೋಡಿ..

    By Suneel
    |

    ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಮತ್ತು ಟಿವಿ ಕಾರ್ಯಕ್ರಮಗಳಿಗೆ ಹಲವು ದಶಕಗಳಿಂದ ಕಾನೂನು ಬಾಹಿರವಾದ ನಿಷೇಧವನ್ನು ಹೇರಲಾಗಿತ್ತು. ಪರಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡುವುದು ಕನ್ನಡ ವಿರೋಧಿ ನಡೆ. ಅಲ್ಲದೇ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಕೆಡಕಾಗುವುದು ಎಂಬ ಅನಿಸಿಕೆ ಹಲವರಲ್ಲಿತ್ತು. ಈಗಲೂ ಕೆಲವರಲ್ಲಿದೆ.

    ಆದರೆ ಈಗಾಗಲೇ ಪರಭಾಷೆ ಚಿತ್ರಗಳ ಡಬ್ಬಿಂಗ್ ಗೆ ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಂಡಳಿ (Competition Appellate Tribunal) ವಜಾಗೊಳಿಸಿದೆ.[ಕೆಎಫ್‌ಸಿಸಿ ಡಬ್ಬಿಂಗ್ ವಿರೋಧಿ ಮೇಲ್ಮನವಿ ವಜಾ]

    ಅಂದಹಾಗೆ ಡಬ್ಬಿಂಗ್ ಕುರಿತ ಈಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ಕನ್ನಡದಲ್ಲಿ ಡಬ್ಬಿಂಗ್ ಕಂಟೆಂಟ್ ತರಲು ನಡೆಸಿದ ಹೋರಾಟದ ಬಗ್ಗೆ ಒಂದು ಕಿರು ಚಿತ್ರ ತಯಾರಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿರಿ..

    ಕಿರುಚಿತ್ರ

    ಕಿರುಚಿತ್ರ

    ಕನ್ನಡ ಗ್ರಾಹಕರ ಕೂಟದ ಅಧ್ಯಕ್ಷರಾದ ಗಣೇಶ್ ಚೇತನ್ ರವರು ಕನ್ನಡದಲ್ಲಿ ಡಬ್ಬಿಂಗ್ ಕಟೆಂಟ್ ತರಲು ಹೋರಾಟ ನಡೆಸಿದ ಬಗ್ಗೆ ತಯಾರಾಗಿರುವ ಕಿರುಚಿತ್ರವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಸಲಿಗೆ ಈ ಕಿರುಚಿತ್ರದಲ್ಲಿ ಇರುವ ವಿಷಯ ಏನು ಗೊತ್ತಾ?..

    ಡಬ್ಬಿಂಗ್ ಕನ್ನಡ ಪರ ಎಂಬ ಅನಿಸಿಕೆ ಮೂಡಿದೆ

    ಡಬ್ಬಿಂಗ್ ಕನ್ನಡ ಪರ ಎಂಬ ಅನಿಸಿಕೆ ಮೂಡಿದೆ

    "ಹಲವು ದಶಕಗಳಿಂದ ಅನ್ಯಭಾಷಾ ಚಿತ್ರಗಳನ್ನು ಮತ್ತು ಟಿವಿ ಕಾರ್ಯಕ್ರಮಗಳನ್ನು ಡಬ್ಬಿಂಗ್ ಮಾಡದೇ ಇರುವುದರಿಂದ ಕನ್ನಡಿಗರಿಗೆ ಆಗಿರುವ ತೊಂದರೆಗಳನ್ನು ಮತ್ತು ಡಬ್ಬಿಂಗ್ ಮಾಡುವುದರಿಂದ ಕನ್ನಡಿಗರಿಗೆ ಆಗುವ ಒಳಿತನ್ನು ತಿಳಿಸಿದ ಮೇಲೆ ಡಬ್ಬಿಂಗ್ ಕನ್ನಡ ಪರ ಎಂಬ ಅನಿಸಿಕೆ ಕನ್ನಡಿಗರಲ್ಲಿ ವ್ಯಾಪಕವಾಗಿ ಮೂಡಿದೆ" ಎಂಬುದನ್ನು ಕಿರುಚಿತ್ರದಲ್ಲಿ ಹೇಳಲಾಗಿದೆ.

    ಹೋರಾಟ ಆರಂಭವಾಗಿದ್ದು ಹೇಗೆ?

    ಹೋರಾಟ ಆರಂಭವಾಗಿದ್ದು ಹೇಗೆ?

    ಡಬ್ಬಿಂಗ್ ಗೆ ಹೇರಲಾದ ಕಾನೂನು ಬಾಹಿರ ನಿಷೇಧದಿಂದ ಜ್ಞಾನ-ವಿಜ್ಞಾನದ ಟಿವಿವಾಹಿನಿಗಳು, ಮಕ್ಕಳ ಕಾರ್ಟೂನ್ ಮನರಂಜನೆ ಯಾವುದು ಕನ್ನಡದಲ್ಲಿ ಸಿಗುತ್ತಿರಲಿಲ್ಲ. ಇದರಿಂದ ಕನ್ನಡ ಮಕ್ಕಳೇ ಕನ್ನಡದಿಂದ ದೂರವಾಗುತ್ತಿದ್ದಾರೆ ಎಂದು ಆಲೋಚಿಸಿ ಕನ್ನಡ ಪರ ಸಂಘಟನೆಯಾದ ಬನವಾಸಿ ಬಳಗ 2010 ರಲ್ಲಿ ಮೊದಲ ಬಾರಿಗೆ ಡಬ್ಬಿಂಗ್ ಪರ ಧ್ವನಿ ಎತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬನವಾಸಿ ಬಳಗ ಡಬ್ಬಿಂಗ್ ಪರ- ವಿರೋಧ ಚರ್ಚೆ ನಡೆಸಿದ ಬಗ್ಗೆ ಮತ್ತು ವಿಚಾರ ಸಂಕಿರಣಗಳನ್ನು ಕೈಗೊಂಡ ಬಗ್ಗೆ ಕಿರುಚಿತ್ರದಲ್ಲಿ ಮಾಹಿತಿ ಇದ್ದು ಹೋರಾಟ ಆರಂಭವಾದ ಹಾದಿಯನ್ನು ವಿವರಿಸಲಾಗಿದೆ.

    ಡಬ್ಬಿಂಗ್ ಹೇಗೆ ಕನ್ನಡ ಪರ?

    ಡಬ್ಬಿಂಗ್ ಹೇಗೆ ಕನ್ನಡ ಪರ?

    ಡಬ್ಬಿಂಗ್ ಚಟುವಟಿಕೆ ಕನ್ನಡ ಪರ ಎಂಬುದನ್ನು ಜಾಗೃತಿ ಮೂಡಿಸಿದ್ದು, ಡಬ್ಬಿಂಗ್ ಪರ ಹೋರಾಟಕ್ಕೆ ಯಾರೆಲ್ಲಾ ಕೈಜೋಡಿಸಿದರು, ಮುಖ್ಯ ಮಂತ್ರಿಗಳಲ್ಲಿ ಡಬ್ಬಿಂಗ್ ನಿಷೇಧವನ್ನು ತೆರವು ಗೊಳಿಸಲು ಮನವಿ ಸಲ್ಲಿಸದ ಬಗ್ಗೆ ಮತ್ತು ಪರಭಾಷಾ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಡಬ್ಬಿಂಗ್ ಅವಕಾಶಕ್ಕಾಗಿ ನಡೆಸಲಾದ ಕಾನೂನಿನಾತ್ಮಕ ಹೋರಾಟದ ಬಗ್ಗೆ ಕಿರುಚಿತ್ರದಲ್ಲಿ ಮಾಹಿತಿ ಇದೆ. ಕಿರುಚಿತ್ರ ನೋಡಲು ಕ್ಲಿಕ್ ಮಾಡಿ.

    English summary
    'Kannada Grahakara Koota' President Ganesh Chetan uploaded a Short film in youtube related to 'campaign to get dubbed content in Kannada'
    Wednesday, May 10, 2017, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X