»   » ಆರತಿ: ಪ್ರೇಮ ವೈಫಲ್ಯ, ಆತ್ಮಹತ್ಯೆ ಯತ್ನ, ವಿಚ್ಛೇದನ, ಸಾವು

ಆರತಿ: ಪ್ರೇಮ ವೈಫಲ್ಯ, ಆತ್ಮಹತ್ಯೆ ಯತ್ನ, ವಿಚ್ಛೇದನ, ಸಾವು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಗ್ಲಾಮರ್ ಜಗತ್ತಿನ ರಂಗು ರಂಗಿನ ಭಾಗದ ಜೊತೆಗೆ ನೆರಳಿನಂತೆ ದುರಂತ ಛಾಯೆಯೂ ಆವರಿಸಿರುತ್ತದೆ ಎಂಬುದಕ್ಕೆ ಆರತಿ ಅಗರವಾಲ್ ಬದುಕು ಹಾಗೂ ಸಾವು ಸಾಕ್ಷಿಯಾಗಿದೆ. ಸಿನಿಮಾ ಜಗತ್ತಿನ ದುರಂತ ಅಂತ್ಯ ಕಂಡ ನಾಯಕಿಯರ ಸಾಲಿಗೆ ಆರತಿ ಕೂಡಾ ಸೇರ್ಪಡೆಯಾಗಿದ್ದಾರೆ.

31 ವರ್ಷ ವಯಸ್ಸಿನ ಆರತಿ ಅವರು ಸ್ಥೂಲ ಸುಂದರಿಯಾಗೇ ತೆಲುಗು ಚಿತ್ರರಂಗದಲ್ಲಿ ಹೆಸರಾಗಿದ್ದರು. ಅಕ್ಕಿನೇನಿ ನಾಗಾರ್ಜುನ ಅವರು ಪ್ರೀತಿಯಿಂದ 'ಸಿಲಿಂಡರ್' ಎಂದು ರೇಗಿಸುತ್ತಿದ್ದರಂತೆ. 17 ವರ್ಷಕ್ಕೆ ನೇಮ್ ಫೇಮ್ ಗಳಿಸಿದ ಆರತಿ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ ಎನಿಸಿದರು.

ವೆಂಕಟೇಶ್, ಚಿರಂಜೀವಿ, ನಾಗಾರ್ಜುನ, ರವಿ ತೇಜ, ಮಹೇಶ್ ಬಾಬು, ಜ್ಯೂ ಎನ್ಟಿಆರ್ ಸೇರಿದಂತೆ ಎಲಾ ನಟರ ಸಮಕ್ಕೆ ಹಾಡಿ ಕುಣಿದು ಜನಮನ್ನಣೆ ಗಳಿಸಿದ್ದರು. ತರುಣ್ ಜೊತೆ ಆರತಿ ಲಿಂಕ್ ಅಪ್ ಆಗಿದ್ದೇ ತಡ ಬದುಕಿನಲ್ಲಿ ಬಿರುಗಾಳಿ ಬೀಸತೊಡಗಿತು.

ಲವ್ ಬ್ರೇಕ್ ಅಪ್ ನಂತರ ಆತ್ಮಹತ್ಯೆ ಪ್ರಯತ್ನಿಸಿದ್ದು, ಹಲವು ದಿನ ಕೋಮಾಕ್ಕೆ ಜಾರಿದ್ದು, ಮದುವೆ ವಿದೇಶದಲ್ಲಿ ನೆಲೆಗೊಂಡಿದ್ದು, ವಿವಾಹ ವಿಚ್ಛೇದನ, ಸ್ಥೂಲಕಾಯ ತೊರೆದು ಸಪೂರ ಸುಂದರಿಯಾಗಲು ಯತ್ನಿಸಿದ್ದು, ಕೈಕೊಟ್ಟ ಚಿಕಿತ್ಸಾವಿಧಾನ ಎಲ್ಲವೂ ಆಕೆಯ ಜೀವನದ ದುರಂತ ಪುಟಗಳಾಗಿವೆ. ಆರತಿ ಬದುಕಿನ ಕೆಲ ಪುಟಗಳನ್ನು ಇಲ್ಲಿ ಇಡಲಾಗಿದೆ ಓದಿ...

2005ರಲ್ಲಿ ಒಮ್ಮೆ ಆತ್ಮಹತ್ಯೆಗೆ ಯತ್ನ

2005ರಲ್ಲಿ ಒಮ್ಮೆ ಆತ್ಮಹತ್ಯೆಗೆ ಯತ್ನ

ನಟ ತರುಣ್ ಅವರೊಂದಿಗಿನ ಸಂಬಂಧ ಹಳಸಿದಾಗ ಮಾಧ್ಯಮಗಳಲ್ಲಿ ಬಂದ ವರದಿಗಳಿಂದ ಬೇಸತ್ತು ಪ್ರೇಮ ವೈಫಲ್ಯ ಅನುಭವಿಸಿ 2005ರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಅಂದಾಲ ರಾಮುಡು ಚಿತ್ರದ ಬಳಿಕ

ಅಂದಾಲ ರಾಮುಡು ಚಿತ್ರದ ಬಳಿಕ

ಅಂದಾಲ ರಾಮುಡು ಚಿತ್ರದ ಬಳಿಕ ಅವಕಾಶಗಳ ಬರ ಕೂಡಾ ಆರತಿ ಅವರನ್ನು ಕಾಡತೊಡಗಿತು. ವಿಷ ಸೇವಿಸಿದರೂ ಬಚವಾದ ಆರತಿ ಸಿನಿಮಾ ರಂಗದಿಂದ ದೂರವುಳಿಯಲು ಅನಾರೋಗ್ಯ ಕೂಡಾ ಕಾರಣವಾಯಿತು. ಆತ್ಮಹತ್ಯೆ ಯತ್ನದ ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತರುಣ್ ಜೊತೆ ಉತ್ತಮ ಗೆಳೆತನ ಹೊಂದಿದ್ದರು.ಅದರೆ, ಅವರ ನೋವಿಗೆ ಇದೇ ಕಾರಣ ಎಂದು ಹೇಳಲಾಗುವುದಿಲ್ಲ.

2007ರಲ್ಲಿ ಉದ್ಯಮಿ ಕೈ ಹಿಡಿದ ಆರತಿ

2007ರಲ್ಲಿ ಉದ್ಯಮಿ ಕೈ ಹಿಡಿದ ಆರತಿ

2007ರಲ್ಲಿ ಉಜ್ವಲ್ ಕುಮಾರ್ ಎಂಬ ಉದ್ಯಮಿ ಕೈ ಹಿಡಿದ ಆರತಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಹೊಸ ಬಾಳು ಕಂಡು ಕೊದ್ಮರು. ಆದರೆ, 2009ರಲ್ಲಿ ವಿವಾಹ ವಿಚ್ಛೇದನ ನೀಡಿದರು.

ಕೋಮಾಕ್ಕೆ ಜಾರಿದ್ದ ನಟಿ ಆರತಿ

ಕೋಮಾಕ್ಕೆ ಜಾರಿದ್ದ ನಟಿ ಆರತಿ

ಮನೆಯಿಂದ ಕೆಳಕ್ಕೆ ಜಾರಿದ ಆರತಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಕಾಲ ಕೋಮಾಕ್ಕೆ ಜಾರಿದ್ದರು.

ಅಂದಾಲ ರಾಮುಡು ಚಿತ್ರದಲ್ಲಿ ವಿಗ್

ಅಂದಾಲ ರಾಮುಡು ಚಿತ್ರದಲ್ಲಿ ವಿಗ್

ಅಂದಾಲ ರಾಮುಡು ಚಿತ್ರದಲ್ಲಿ ವಿಗ್ ಬಳಸಿ ನಟಿಸಿದ್ದ ಆರತಿ. ಕೋಮಾಕ್ಕೆ ಜಾರಿದಾಗ ಆಕೆ ತಲೆ ಕೂದಲು ಉದುರಿ ಹೋಗಿತ್ತು.

ಜಂಕ್ಷನ್ ಲೋ ಜಯಮಾಲಾ ಚಿತ್ರದ ದ್ವಿಪಾತ್ರಕ್ಕಾಗಿ

ಜಂಕ್ಷನ್ ಲೋ ಜಯಮಾಲಾ ಚಿತ್ರದ ದ್ವಿಪಾತ್ರಕ್ಕಾಗಿ

ಜಂಕ್ಷನ್ ಲೋ ಜಯಮಾಲಾ ಚಿತ್ರದ ದ್ವಿಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದ ಆರತಿ, ದೇಹದ ತೂಕವನ್ನು 63 ಕೆಜಿಗೆ ಇಳಿಸಿಕೊಂಡಿದ್ದರು. ಅದರೆ, ಇನ್ನೂ 3 ಕೆಜಿ ಇಳಿಸಿಕೊಳ್ಳಲು ಲಿಪೋಸಕ್ಷನ್‌ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ದೇಹದ ಕೊಬ್ಬನ್ನು ತೆಗೆಯುವ ಈ ಚಿಕಿತ್ಸೆ ಆಕೆಗೆ ಮಾರಕವಾಗಿ ಪರಿಣಮಿಸಿತು. ಜೂ. 20ಕ್ಕೆ ಭಾರತಕ್ಕೆ ಬಂದು ಶೂಟಿಂಗ್ ನಲ್ಲಿ ತೊಡಗಬೇಕಿದ್ದ ಅರತಿ ಇಹಲೋಕ ಯಾತ್ರೆ ಮುಗಿಸಿದರು.

ಕಾಸ್ಮೆಟಿಕ್ ಸರ್ಜರಿ ಮುಳುವಾಯಿತೇ?

ಕಾಸ್ಮೆಟಿಕ್ ಸರ್ಜರಿ ಮುಳುವಾಯಿತೇ?

ಲಿಪೋಸಕ್ಷನ್ ಕಾಸ್ಮೆಟಿಕ್ ಸರ್ಜರಿ ಮಾತ್ರ ಆಕೆ ಸಾವಿಗೆ ಕಾರಣ ಎನ್ನಲಾಗುವುದಿಲ್ಲ. ಆಕೆ ದೇಹದ ಕೊಬ್ಬು ತೆಗೆದಿದ್ದಕ್ಕೆ ಆಕೆ ಸತ್ತಿದ್ದು ಎನ್ನುವುದಾದರೆ ಅದು ಸೋಂಕು ಹರಡಿ ಒಂದು ವಾರದ ನಂತರ ದೇಹದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅದರೆ, ಆಕೆ ಹೃದಯಾಘಾತದಿಂದ ಸಾವನ್ನಪ್ಪಲು ಆಕೆಗಿದ್ದ ಆಸ್ತಮಾ ಸಮಸ್ಯೆ ಕಾರಣ. ಉಸಿರಾಟದ ತೊಂದರೆ ಆಕೆಗೆ ಮುಳುವಾಯಿತು ಎಂಬ ಅಂಶವೂ ಬೆಳಕಿಗೆ ಬಂದಿದೆ.

English summary
The dark side of fame and glam is once again in discussion with the unfortunate demise of actress Aarti Agarwal, who died due to the side effects of liposuction. The 31-year-old actress seems to have got everything a little early in her life.
Please Wait while comments are loading...

Kannada Photos

Go to : More Photos