»   » ಗೋವಾದಲ್ಲಿ ಠಿಕಾಣಿ ಹೂಡಿದ ದರ್ಶನ್ ಮತ್ತು ಬಳಗ

ಗೋವಾದಲ್ಲಿ ಠಿಕಾಣಿ ಹೂಡಿದ ದರ್ಶನ್ ಮತ್ತು ಬಳಗ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಸದ್ಯಕ್ಕೆ ಗೋವಾದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದರ್ಶನ್ ಅವರ ಮುಂಬರುವ ಸಿನಿಮಾ 'ಜಗ್ಗುದಾದ' ಶೂಟಿಂಗ್ ಗಾಗಿ ಪ್ರವಾಸಿ ಸ್ಥಳ ಗೋವಾದಲ್ಲಿ ಇಡೀ ಚಿತ್ರತಂಡ ಠಿಕಾಣಿ ಹೂಡಿದೆ.

ಅಂದಹಾಗೆ ಬಿಡುವಿಲ್ಲದ ಶೂಟಿಂಗ್ ನಡುವೆಯೇ ಒಂದಿಷ್ಟು ರಿಲ್ಯಾಕ್ಸ್ ಮಾಡಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪ್ರೀತಿಯ ಸಹೋದರ ದಿನಕರ್ ತೂಗುದೀಪ್ ಅವರೊಂದಿಗೆ ಮತ್ತು ಗೆಳಯರ ಜೊತೆ ಕಾಲ ಕಳೆಯುತ್ತಿದ್ದಾರೆ.[ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್]

ದರ್ಶನ್ ಮತ್ತು ದಕ್ಷಿಣ ಭಾರತದ ನಟಿ ದೀಕ್ಷಾ ಸೇಠ್ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವ 'ಜಗ್ಗುದಾದ' ಸಿನಿಮಾ ಪಕ್ಕಾ ಕಾಮಿಡಿ ಮತ್ತು ಫ್ಯಾಮಿಲಿ ಎಂರ್ಟಟೈನಿಂಗ್ ಆಗಿದ್ದು, ದರ್ಶನ್ ಅವರು ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ಮಿಂಚಲಿದ್ದಾರೆ.

ಸದಾ ಆಕ್ಷನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟ ದರ್ಶನ್ ಅವರು ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ 'ಜಗ್ಗುದಾದ' ಮೂಲಕ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.[ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ಇನ್ನು ದರ್ಶನ್ ಅವರ ಜೊತೆ ನಟ ಕಮ್ ನಿರೂಪಕ ಸೃಜನ್ ಲೋಕೇಶ್ ಅವರು ಮಿಂಚಿದ್ದು, ಗಾಯತ್ರಿ ಅಯ್ಯರ್, ವಿಶಾಲ್ ಹೆಗ್ಡೆ ಮುಂತಾದವರು ಸಾಥ್ ನೀಡಿದ್ದಾರೆ.

English summary
Challenging Star Darshan's upcoming movie 'Jaggu Dada' Shoot in Goa. The movie is directed by Raghvendra Hegde.
Please Wait while comments are loading...

Kannada Photos

Go to : More Photos