»   » ಆಗ 'ಅರ್ಜುನ್', ಈಗ 'ಸೂರಜ್': ಜಗ್ಗೇಶ್ ಗೆ ಮತ್ತೊಂದು ಆಘಾತ

ಆಗ 'ಅರ್ಜುನ್', ಈಗ 'ಸೂರಜ್': ಜಗ್ಗೇಶ್ ಗೆ ಮತ್ತೊಂದು ಆಘಾತ

'''ಅರಿಯದೆ ಪಡೆದ ಪ್ರೀತಿ.. ಅರಿಯುವಂತೆ ಕಣ್ಮರೆಯಾದಾಗ..ಆಗುವಸಂಕಟ ಘೋರ..ಇನ್ನೊಂದು ಆತ್ಮನನ್ನಿಂದ ದೂರವಾಯಿತು''.ಅರ್ಜುನ್' ನಾಯಿಯನ್ನ ಕಳೆದುಕೊಂಡ ಬೆನ್ನಲ್ಲೆ ಈಗ 'ಸೂರಜ್'ನಾಯಿ ಕೂಡ ಜಗ್ಗೇಶ್ ಅವರನ್ನ ಬಿಟ್ಟು ಹೋಗಿದೆ.

Posted by:
Subscribe to Filmibeat Kannada

ಸದಾ ತಮ್ಮ ಚಿತ್ರಗಳಲ್ಲಿ ಪ್ರೇಕ್ಷಕರನ್ನ ನಕ್ಕು ನಲಿಸುವ ನವರಸನಾಯಕ ಜಗ್ಗೇಶ್ ಈಗ ಮತ್ತೆ ದುಃಖದಲ್ಲಿದ್ದಾರೆ. ತಮ್ಮ ಜೀವನದ ಜೊತೆಗಿದ್ದ ಆತ್ಮವೊಂದನ್ನ ಕಳೆದುಕೊಂಡು ಬೇಸರಗೊಂಡಿದ್ದಾರೆ. ಹೌದು, ಈ ಬೇಸರಕ್ಕೆ ಕಾರಣ ಜಗ್ಗೇಶ್ ಅವರ ಪ್ರೀತಿಯ 'ಸೂರಜ್'.

ಸೂರಜ್...ಇದು ಜಗ್ಗೇಶ್ ಅವರು ಸಾಕಿರುವಂತಹ ಪ್ರೀತಿಯ ಸಾಕು ನಾಯಿ. ಎಲ್ಲರಿಗೂ ಗೊತ್ತಿರುವ ಹಾಗೇ ಜಗ್ಗೇಶ್ ಅವರಿಗೆ 'ಶ್ವಾನ' ಅಂದ್ರೆ ತುಂಬಾ ಇಷ್ಟ. ಅದು ಎಷ್ಟರ ಮಟ್ಟಿಗೆ ಅಂದ್ರೆ, ತನ್ನ ಮೊಮ್ಮಕ್ಕಳಿಗೆ ನಾಯಿಯ ಹೆಸರಿಡುವಷ್ಟು ಬಾಂಧವ್ಯ ಆ 'ಶ್ವಾನ'ದ ಜೊತೆಗೆ ಹೊಂದಿದ್ದರು.

ಕಳೆದ ವರ್ಷವಷ್ಟೇ ಜಗ್ಗೇಶ್ ಅವರ ಜೊತೆ 14 ವರ್ಷಗಳಿಂದ ಇದ್ದ 'ಅರ್ಜುನ್' ಸಾಕು ನಾಯಿ ಅಸುನೀಗಿತ್ತು. ಆಗ ಜಗ್ಗೇಶ್ ಕಣ್ಣೀರಿಟ್ಟಿದ್ದರು. ಇನ್ನೂ 'ಅರ್ಜುನ್' ನಾಯಿಯ ನೆನಪು ಮಾಸದ ಮುಂಚೆಯೇ ಮತ್ತೊಂದು ಶ್ವಾನ 'ಸೂರಜ್' ಕೂಡ ಜಗ್ಗೇಶ್ ಅವರನ್ನ ಬಿಟ್ಟು ಹೋಗಿದೆ.[ಪ್ರೀತಿಯ ಅರ್ಜುನ್ ವಿಧಿವಶ; ದು:ಖತಪ್ತ ಜಗ್ಗೇಶ್]

ಅದೇಷ್ಟೋ ಜನರು ತಮ್ಮ ದಿನವನ್ನ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಕಳೆಯುವ ಬದಲು ನಾಯಿಗಾಗಿ ದಿನವನ್ನ ಮೀಸಲಿಡುತ್ತಾರೆ. ಈ ವಿಚಾರದಲ್ಲಿ ಜಗ್ಗೇಶ್ ಅವರು ಕೂಡ ಅಷ್ಟೇ ತಮ್ಮ ಅರ್ಜುನ್ ಹಾಗೂ ಸೂರಜ್ ನನ್ನ ತುಂಬಾ ಇಷ್ಟು ಪಟ್ಟು ನೋಡಿಕೊಳ್ಳುತ್ತಿದ್ದರು. ಮುಂದೆ ಓದಿ...

ಜಗ್ಗೇಶ್ ಅವರನ್ನ ಅಗಲಿದ 'ಸೂರಜ್'

ಜಗ್ಗೇಶ್ ಅವರನ್ನ ಅಗಲಿದ 'ಸೂರಜ್'

ನವರಸ ನಾಯಕ ಜಗ್ಗೇಶ್ ಅವರ ಬಳಿಯಿದ್ದ ಮತ್ತೊಂದು ಶ್ವಾನ 'ಸೂರಜ್' ಅಸುನೀಗಿದ್ದಾನೆ. ಕಳೆದ ವರ್ಷ 'ಅರ್ಜುನ್' ಎಂಬ ನಾಯಿ ತೀರಿಕೊಂಡಿತ್ತು. ಈಗ 'ಸೂರಜ್' ಸಾವುಗೀಡಾಗಿದ್ದು, ಜಗ್ಗೇಶ್ ಅವರಿಗೆ ನೋವು ಉಂಟು ಮಾಡಿದೆ.

ಟ್ವಿಟ್ಟರ್ ನಲ್ಲಿ ನೋವು ಹಂಚಿಕೊಂಡ ನಟ

ಟ್ವಿಟ್ಟರ್ ನಲ್ಲಿ ನೋವು ಹಂಚಿಕೊಂಡ ನಟ

ಈ ವಿಷ್ಯವನ್ನ ಖುದ್ದು ಜಗ್ಗೇಶ್ ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 'ಸೂರಜ್' ಶ್ವಾನದ ಜೊತೆ ಜಗ್ಗೇಶ್ ಅವರು ಆತ್ಮಿಯವಾಗಿರುವ ಇರುವ ಫೋಟೋ ಹಾಗೂ, ಸೂರಜ್ ನಾಯಿಯನ್ನ ಅಂತ್ಯ ಸಂಸ್ಕಾರ ಮಾಡುತ್ತಿರುವ ಕೆಲ ಫೋಟೋಗಳನ್ನ ಶೇರ್ ಮಾಡಿದ್ದಾರೆ.

'ಸೂರಜ್' ಅಂದ್ರೆ ತುಂಬಾ ಇಷ್ಟ

'ಸೂರಜ್' ಅಂದ್ರೆ ತುಂಬಾ ಇಷ್ಟ

ಬಹುಶಃ 'ಅರ್ಜುನ್ ನಾಯಿ' ದೂರವಾದ ಮೇಲೆ ಜಗ್ಗೇಶ್ ಅವರು 'ಸೂರಜ್ ಶ್ವಾನ'ವನ್ನ ತುಂಬಾ ಹಚ್ಚಿಕೊಂಡಿದ್ದರು ಅನ್ಸುತ್ತೆ. ಯಾಕಂದ್ರೆ, ಜಗ್ಗೇಶ್ ಅವರಿಗೆ ಮೂಕ ಪ್ರಾಣಿಗಳು ಮೇಲೆ ತುಂಬಾ ಒಲವು. ಅದರಲ್ಲೂ 'ಸೂರಜ್ ಜೊತೆಗಿನ ಸಂಬಂಧದ ಹೇಗಿತ್ತು ಎನ್ನುವುದಕ್ಕೆ ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಾಲುಗಳೇ ಸಾಕ್ಷಿ.['ನೀರ್ ದೋಸೆ' ಬಿಡಿ ಇನ್ಮುಂದೆ 'ಮಸಾಲೆ ದೋಸೆ' ತಿನ್ನೋ ಕಾಲನೂ ಬರುತ್ತೆ]

ಜಗ್ಗೇಶ್ ಟ್ವೀಟ್

ಜಗ್ಗೇಶ್ ಟ್ವೀಟ್

''ಅರಿಯದೆ ಪಡೆದ ಪ್ರೀತಿ.. ಅರಿಯುವಂತೆ ಕಣ್ಮರೆಯಾದಾಗ..ಆಗುವಸಂಕಟ ಘೋರ..ಇನ್ನೊಂದು ಆತ್ಮನನ್ನಿಂದ ದೂರವಾಯಿತು''. ಎಂದು ಜಗ್ಗೇಶ್ ಮನದಾಳದ ನೋವನ್ನ ಬರೆದುಕೊಂಡಿದ್ದಾರೆ.

ಮನೆಯಲ್ಲೇ ಅಂತ್ಯ ಸಂಸ್ಕಾರ

ಮನೆಯಲ್ಲೇ ಅಂತ್ಯ ಸಂಸ್ಕಾರ

ಸೂರಜ್ ನಾಯಿಯನ್ನ ತಮ್ಮ ಮನೆಯ ಅವರಣದಲ್ಲೇ ಹುಂಡಿ ತೆಗೆದು ಮಣ್ಣು ಮುಚ್ಚಲಾಗಿದೆ. ಈ ವೇಳೆ ಜಗ್ಗೇಶ್ ಅವರ ಮಗ ಗುರುರಾಜ್ ಕೂಡ ಇದ್ದರು.

ಜಗ್ಗೇಶ್ ಅವರ ಶ್ವಾನ ಪ್ರೀತಿ

ಜಗ್ಗೇಶ್ ಅವರ ಶ್ವಾನ ಪ್ರೀತಿ

ಜಗ್ಗೇಶ್ ಅವರು ಮೂಕಪ್ರಾಣಿಗಳನ್ನ ಹೆಚ್ಚು ಇಷ್ಟು ಪಡುತ್ತಾರೆ ಎನ್ನುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಒಂದು ಶ್ವಾನವನ್ನ 14 ವರ್ಷಗಳ ಕಾಲ ತಮ್ಮ ಜೊತೆಯಲ್ಲೇ ಇಟ್ಟುಕೊಳ್ಳುವುದು ಎಂದರೆ ಅದು ಸುಲಭದ ಕೆಲಸವಲ್ಲ. ಹೀಗೆ 14 ವರ್ಷದಿಂದ ಜಗ್ಗೇಶ್ ಜೊತೆಯಲ್ಲಿದ್ದ ಸಾಕು ನಾಯಿಯೇ ಅರ್ಜುನ್.

ಮೊಮ್ಮಗನಿಗೆ ನಾಯಿಯ ಹೆಸರು

ಮೊಮ್ಮಗನಿಗೆ ನಾಯಿಯ ಹೆಸರು

ಜಗ್ಗೇಶ್ ಅವರು ಅರ್ಜುನ್ ನಾಯಿಯನ್ನ ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಮತ್ತೊಂದು ಸಾಕ್ಷಿ, ಜಗ್ಗೇಶ್ ಅವರ ಮೊಮ್ಮಗನಿಗೆ ತಮ್ಮ 'ಅರ್ಜುನ್' ಅಂತಾನೇ ಹೆಸರಿಟ್ಟಿರುವುದು.['ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು?]

ಅರ್ಜುನ್-ಸೂರಜ್ ಬರಿ ನೆನಪು ಮಾತ್ರ

ಅರ್ಜುನ್-ಸೂರಜ್ ಬರಿ ನೆನಪು ಮಾತ್ರ

ಅರ್ಜುನ್ ಶ್ವಾನತೀರಿಕೊಂಡು, ಇನ್ನೂ 1 ವರ್ಷವಷ್ಟೇ ಆಗಿತ್ತು. ಅಷ್ಟರಲ್ಲಾಗಲೇ ಸೂರಜ್ ನಾಯಿಯೂ ಕೂಡ ಸಾವಿಗೀಡಾಗಿದೆ. ಹೀಗೆ, ತಾವು ಇಷ್ಟ ಪಟ್ಟು ಜೊತೆಯಾಗಿಟ್ಟುಕೊಂಡಿದ್ದ ಎರಡು ಜೀವಗಳು ದೂರವಾಗಿದೆ ಎಂಬ ದುಃಖ ಜಗ್ಗೇಶ್ ಅವರನ್ನ ಕಾಡುತ್ತಿದೆ. ಈಗ ಅರ್ಜುನ್ ಹಾಗೂ ಸೂರಜ್ ಬರಿ ನೆನಪು ಮಾತ್ರ.

English summary
Kannada Actor Jaggesh mourns the death of his pet dog 'suraj'. The Actor took his Twitter Account to reveal his attachment towards his pet.
Please Wait while comments are loading...

Kannada Photos

Go to : More Photos