twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಶತಮಾನೋತ್ಸವಕ್ಕೆ ಹೋಗಲ್ಲ ಅಂದ್ರು ಜಗ್ಗೇಶ್

    By Rajendra
    |

    ನವರಸನಾಯಕ ಜಗ್ಗೇಶ್ ಬೇಸರಗೊಂಡಿದ್ದಾರೆ. ಏನ್ರಿ ನಮಗೆ ಬೆಲೆನೇ ಇಲ್ವಾ? ಹಿರಿಯ ಕಲಾವಿದರು, ತಂತ್ರಜ್ಞರಿಗೆ ಕನಿಷ್ಠ ಗೌರವ ಕೊಡವ ಸೌಜನ್ಯವೂ ಇವರಿಗಿಲ್ಲ. ಅಲ್ಲಿ ನಮಗೆ ಬೆಲೆ ಇಲ್ಲಾ ಅಂದ್ರೆ ನಾವ್ಯಾಕೆ ಹೋಗಬೇಕು. ತಾವು ಚೆನ್ನೈನಲ್ಲಿ ನಡೆಯಲಿರುವ ಸಿನಿಮಾ ಶತಮಾನೋತ್ಸವ ಸಂಭ್ರಮಕ್ಕೆ ಹೋಗುತ್ತಿಲ್ಲ ಎಂದು ಜಗ್ಗೇಶ್ ಕಿಡಿಕಿಡಿಯಾಗಿದ್ದಾರೆ.

    ಈ ಮೂಲಕ ಕನ್ನಡ ಚಿತ್ರರಂಗದ ಮನೆಯ ಜಗಳ ಬೀದಿಗೆ ಬಿದ್ದಂತಾಗಿದೆ. ಕರ್ನಾಟಕದ ಜನತೆ ತಮ್ಮ ಬಗ್ಗೆ ತೋರುತ್ತಿರುವ ಅಭಿಮಾನ ನಮಗೆ ಸಾಕು. ಚೆನ್ನೈನ ವೇದಿಕೆ ಮೇಲೆ ಹಾಕುವ ಹಾರ, ತುರಾಯಿ ತಮಗೆ ಬೇಕಾಗಿಲ್ಲ ಎಂದಿದ್ದಾರೆ. ಅವರು ನಿಜಕ್ಕೂ ಕನಲಿದ್ದರು.

    ಆದರೆ ಜಗ್ಗೇಶ್ ಅವರು ಸ್ಪಷ್ಟವಾಗಿ ಹೇಳದಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿದೆ. ಅವರಿಗೆ ಬೇಸರಕ್ಕೆ ಕಾರಣವಾದ ಇನ್ನಷ್ಟು ಅಂಶಗಳನ್ನೂ ತಿಳಿಸಿದ್ದರೆ ಚೆನ್ನಾಗಿತ್ತು. ಆದರೆ ಅವರು ಏನೊಂದನ್ನೂ ಹೇಳದೆ ಇನ್ನಷ್ಟು ಗೊಂದಲಕ್ಕೆ ಕಾರಣರಾಗಿದ್ದಾರೆ.

    ಚೆನ್ನೈನಲ್ಲಿ ನಡೆಯುತ್ತಿರುವ ಸಿನಿಮಾ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕೇವಲ ಮೂವರು ಸಚಿವರ ಹೆಸರನ್ನು ಮಾತ್ರ ಹಾಕಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಬಿ ವಿಜಯ್ ಕುಮಾರ್ ಅವರ ಹೆಸರನ್ನು ಕೆವಿ ವಿಜಯ್ ಕುಮಾರ್ ಎಂದು ತಪ್ಪಾಗಿ ಮುದ್ರಿಸಲಾಗಿದೆ.

    ಕನ್ನಡ ಚಿತ್ರರಂಗದ ಹಿರಿಯರಾದ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಂಬರೀಶ್ ಹೆಸರುಗಳು ಇಲ್ಲದಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಆಮಂತ್ರಣ ಪತ್ರಿಕೆಯ ಬಹುತೇಕ ಭಾಗವನ್ನು ಪುರುಚ್ಚಿ ತಲೈವಿ (ಕ್ರಾಂತಿ ನಾಯಕಿ) ಜೆ ಜಯಲಲಿತಾ ಆಕ್ರಮಿಸಿಕೊಂಡಿರುವುದು ಕನ್ನಡ ಚಿತ್ರೋದ್ಯಮವನ್ನು ಇನ್ನಷ್ಟು ಕೆರಳಿಸಿದೆ.

    ಇಷ್ಟಕ್ಕೂ ನವರಸ ಜಗ್ಗೇಶ್ ಬೇಸರ ವ್ಯಕ್ತಪಡಿಸಿರುವುದು ನಮ್ಮ ನಿಮ್ಮಲ್ಲೆರ ಟುವ್ವಿ ಟುವ್ವಿ ಹಕ್ಕಿ ಟ್ವಿಟ್ಟರ್ ನಲ್ಲಿ, ಅವರ ಟ್ವೀಟ್ ಹೀಗಿದೆ, No one know hw 2 respect senior actors& tecnition , my state people love is enough then chenni stage, am not attending 100 yrs program. (ಏಜೆನ್ಸೀಸ್)

    <blockquote class="twitter-tweet blockquote"><p>No one know hw 2 respect senior actors& tecnition , my state people love is enough then chenni stage, am not attending 100 yrs program</p>— jaggesh (@jaggesh2) <a href="https://twitter.com/jaggesh2/statuses/381110677672177665">September 20, 2013</a></blockquote> <script async src="//platform.twitter.com/widgets.js" charset="utf-8"></script>

    English summary
    Kannada actor Jaggesh not attending The Centenary Celebrations of Indian Cinema in Chennai. The actor tweets, " No one know hw 2 respect senior actors& tecnition , my state people love is enough then chenni stage, am not attending 100 yrs program." &#13;
    Saturday, September 21, 2013, 10:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X