twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ'ಯಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ: ಜಗ್ಗೇಶ್ ಮೌನವಾಗಿದ್ದೇಕೆ?

    By Bharath Kumar
    |

    ನಟ ಮಿತ್ರ ಹಾಗೂ ಭಾಮಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ರಾಗ' ಚಿತ್ರವನ್ನ ರಾಜ್ಯಾದ್ಯಂತ ಎತ್ತಂಗಡಿ ಮಾಡಲಾಗಿತ್ತು. ತೆಲುಗಿನ ಬಹುನಿರೀಕ್ಷಿತ ಚಿತ್ರ 'ಬಾಹುಬಲಿ'ಗೆ ಚಿತ್ರಮಂದಿರ ನೀಡಲು 'ರಾಗ' ಸೇರಿದಂತೆ ಹಲವು ಕನ್ನಡ ಚಿತ್ರಗಳನ್ನ ಥಿಯೇಟರ್ ನಿಂದ ಕಿಕ್ ಔಟ್ ಮಾಡಲಾಗಿದೆ.

    ಹೀಗೆ, ಒಂದು ತೆಲುಗು ಚಿತ್ರಕ್ಕಾಗಿ ಕರ್ನಾಟಕದಲ್ಲಿ ಕನ್ನಡದ ಸಿನಿಮಾಗಳನ್ನೇ ಎತ್ತಂಗಡಿ ಮಾಡ್ತಿದ್ದಾರೆ ಅಂದ್ರೆ ಕೆಲವು ಕನ್ನಡ ನಟರು ಅದರ ವಿರುದ್ಧ ದನಿ ಎತ್ತಬೇಕಿತ್ತು. ದನಿ ಎತ್ತುತ್ತಾರೆ ಎಂಬ ನಿರೀಕ್ಷೆ ಕೂಡ ಇತ್ತು. ಅಂತವರಲ್ಲಿ ನವರಸ ನಾಯಕ ಜಗ್ಗೇಶ್ ಪ್ರಮುಖರು. ಇದುವರೆಗೂ ಜಗ್ಗೇಶ್ ಸೇರಿದಂತೆ ಯಾರು ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿದ್ದರು. ಆದ್ರೆ, ಜಗ್ಗೇಶ್ ಅವರು ಮೌನವಾಗಿ ಯಾಕಿದ್ದರು ಎಂಬುದನ್ನ ಟ್ವಿಟ್ಟರ್ ನಲ್ಲಿ ಸ್ವಷ್ಟಪಡಿಸಿದ್ದಾರೆ. ಮುಂದೆ ಓದಿ.....

    ಕನ್ನಡ ಚಿತ್ರಕ್ಕೆ ಅನ್ಯಾಯವಾದ್ರು ಜಗ್ಗೇಶ್ ಸುಮ್ಮನಿದ್ದರು ಯಾಕೆ?

    ಕನ್ನಡ ಚಿತ್ರಕ್ಕೆ ಅನ್ಯಾಯವಾದ್ರು ಜಗ್ಗೇಶ್ ಸುಮ್ಮನಿದ್ದರು ಯಾಕೆ?

    ಕನ್ನಡ ನಾಡು-ನುಡಿ ಎಂಬ ವಿಚಾರಕ್ಕೆ ಬಂದ್ರೆ ನವರಸ ನಾಯಕ ಜಗ್ಗೇಶ್ ಅವರು ಎಲ್ಲರಿಗಿಂತ ಮುಂದೆ ಇರುತ್ತಾರೆ. ಅದು ಪ್ರತಿಯೊಂದು ಸಲವೂ ಸಾಬೀತಾಗಿದೆ. ಆದ್ರೆ, 'ಬಾಹುಬಲಿ' ಚಿತ್ರದಿಂದ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿರುವಾಗ ಯಾಕೆ ಸುಮ್ಮನಿದ್ದರು ಎಂಬುದು ಹಲವು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಈ ಬಗ್ಗೆ ಜಗ್ಗೇಶ್ ಅವರು ಮಾತನಾಡಿದ್ದಾರೆ. ಏನು ಅಂತ ಮುಂದೆ ಓದಿ...

    ''ಇದು ನಮಗೆ ಹಳೇ ನೋವು'' ಎಂದ ಜಗ್ಗೇಶ್

    ''ಇದು ನಮಗೆ ಹಳೇ ನೋವು'' ಎಂದ ಜಗ್ಗೇಶ್

    ಕನ್ನಡ ಸುದ್ದಿ ವಾಹಿನಿಗಳಲ್ಲಿ 'ಬಾಬುಬಲಿ'ಯನ್ನ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಮಾನಿಯೊಬ್ಬರು ಜಗ್ಗೇಶ್ ಅವರನ್ನ ಕೇಳಿದಕ್ಕೆ ''ಇದು ನಿಮಗೆ ಹೊಸ ನೋವು, ನನಗೆ ಇದು 34 ವರ್ಷಗಳ ಹಳೇ ನೋವು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೌನಯಾಕೆ ಎಂದ್ದಿದಕ್ಕೆ ಜಗ್ಗೇಶ್ ಏನಂದ್ರು!

    ಮೌನಯಾಕೆ ಎಂದ್ದಿದಕ್ಕೆ ಜಗ್ಗೇಶ್ ಏನಂದ್ರು!

    ಮತ್ತೊಬ್ಬ ಅಭಿಮಾನಿ ಈ ಬಗ್ಗೆ ಜಗ್ಗೇಶ್ ಅವರು ಯಾಕೆ ಮೌನವಾಗಿದ್ದೀರಾ ಎಂದು ಕೇಳಿದ್ದಕ್ಕೆ ''ಮೌನ ಹರಿತವಾದ ಆಯುಧ....ಕಾದುನೋಡಿ'' ಎಂದು ಕುತೂಹಲ ಮೂಡಿಸಿದ್ದಾರೆ.

    ಜಗ್ಗೇಶ್ ಮಾತಿನ ಅರ್ಥವೇನು?

    ಜಗ್ಗೇಶ್ ಮಾತಿನ ಅರ್ಥವೇನು?

    ಹಾಗಾದ್ರೆ, ಜಗ್ಗೇಶ್ ಅವರ ಮಾತಿನ ಅರ್ಥವೇನು ಎಂಬುದು ಕುತೂಹಲ ಹುಟ್ಟುಹಾಕಿದೆ. ಈ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಏನಾದರೂ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜಗ್ಗೇಶ್ ಹಾಗೂ ಕನ್ನಡ ಚಿತ್ರರಂಗ ಕಾರ್ಯತಂತ್ರಗಳನ್ನ ರೂಪಿಸುತ್ತಿರಬಹುದಾ? ಕಾದುನೋಡಣ....

    English summary
    Kannada Actor Jaggesh Tweet About 'Bahubali 2' Craze in Karnataka and Kannada News Channels are How Promoting Baahubali.
    Friday, April 28, 2017, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X