»   » 'ಮಮ್ಮಿ...save me' ಚಿತ್ರಕ್ಕೂ 'ಬಾಹುಬಲಿ' ಚಿತ್ರಕ್ಕೂ ದೊಡ್ಡ ಲಿಂಕ್ ಇದೆ.!

'ಮಮ್ಮಿ...save me' ಚಿತ್ರಕ್ಕೂ 'ಬಾಹುಬಲಿ' ಚಿತ್ರಕ್ಕೂ ದೊಡ್ಡ ಲಿಂಕ್ ಇದೆ.!

Written by: Suneel
Subscribe to Filmibeat Kannada

ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾರರ್ - ಥ್ರಿಲ್ಲರ್‌ ಸಿನಿಮಾ 'ಮಮ್ಮಿ...save me' ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸುದ್ದಿಯನ್ನ ನಿಮಗಾಗಿ ಹೊತ್ತು ತಂದಿದ್ದೀವಿ.

ಅದೇನಪ್ಪಾ ಅಂದ್ರೆ, 'ಮಮ್ಮಿ...save me' ಚಿತ್ರಕ್ಕೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ತೆಲುಗಿನ 'ಬಾಹುಬಲಿ' ಚಿತ್ರಕ್ಕೂ ಒಂದು ಲಿಂಕ್ ಇದೆ. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

'ಬಾಹುಬಲಿ-2' ಚಿತ್ರದಲ್ಲಿ ನಟಿಸಿರುವ ಒಬ್ಬರು 'ಮಮ್ಮಿ...save me' ಚಿತ್ರದಲ್ಲೂ ಆಕ್ಟ್ ಮಾಡಿದ್ದಾರೆ. ಅವರು ಯಾರು.? ಅವರ ಹಿನ್ನಲೆ ಏನು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ....

'ಮಮ್ಮಿ...save me' ಹಾಗೂ 'ಬಾಹುಬಲಿ-2' ಚಿತ್ರಕ್ಕಿರುವ ಕೊಂಡಿ..

'ಮಮ್ಮಿ...save me' ಹಾಗೂ 'ಬಾಹುಬಲಿ-2' ಚಿತ್ರಕ್ಕಿರುವ ಕೊಂಡಿ..

ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗಿನ 'ಬಾಹುಬಲಿ 2' ಸಿನಿಮಾದಲ್ಲಿ ಆಕ್ಟ್ ಮಾಡಿರುವ ನಟರೊಬ್ಬರು ಕನ್ನಡದ ಹಾರರ್-ಥ್ರಿಲ್ಲರ್‌ ಸಿನಿಮಾ 'ಮಮ್ಮಿ save me' ಚಿತ್ರದಲ್ಲೂ ಆಕ್ಟ್ ಮಾಡಿದ್ದಾರೆ. ಅಂದ್ಹಾಗೆ, ಇವರು 11 ವರ್ಷಗಳ ಕಾಲ ಭಾರತದ ಮಿಲಿಟರಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದವರು. ಅವರು ಯಾರು ಎಂದು ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಇವರೇ ಅವರು.!

ಇವರೇ ಅವರು.!

'ಮಮ್ಮಿ save me' ಸಿನಿಮಾದಲ್ಲಿ ಆಕ್ಟ್ ಮಾಡಿರುವ ಮಾಜಿ ಸೈನಿಕರ ಹೆಸರು 'ಮಧು'. ಇವರೇ 'ಬಾಹುಬಲಿ - 2' ಸಿನಿಮಾದಲ್ಲಿ ಆಕ್ಟ್ ಮಾಡಿರುವವರು. ['ಮಮ್ಮಿ...save me' ಚಿತ್ರದಲ್ಲಿ ಪ್ರಿಯಾಂಕಾಗೆ ಹೆಲ್ಪ್ ಮಾಡೋರು ಇವರೇ.!]

ಮಧು ಹಿನ್ನಲೆ

ಮಧು ಹಿನ್ನಲೆ

ಮೂಲತಃ ಕರ್ನಾಟಕದವರೇ ಆದ ಮಧು ರವರು ಪಾವಗಡ ಹತ್ತಿರದ ನಾಗೇನಹಳ್ಳಿಯವರು. ಡಿಗ್ರಿ ಮೊದಲನೇ ವರ್ಷ ಡಿಸ್‌ಕಂಟಿನ್ಯೂ ಮಾಡಿ ಭಾರತದ ಮಿಲಿಟರಿ ಸೇವೆಗೆ ಸೇರಿದರು. 11 ವರ್ಷದ ಬಳಿಕ ಸೇನೆಯಿಂದ ಹಿಂದಿರುಗಿ ಬಂದ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಮಾತ್ರ ಆಶ್ಚರ್ಯದ ವಿಷಯ. [ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

ಬಣ್ಣ ಹಚ್ಚಿದ್ದು ಹೇಗೆ..?

ಬಣ್ಣ ಹಚ್ಚಿದ್ದು ಹೇಗೆ..?

ಮಧು ರವರು ಒಮ್ಮೆ ತನ್ನ ಸ್ನೇಹಿತನನ್ನು ಸಿನಿಮಾ ಶೂಟಿಂಗ್ ಸ್ಥಳಕ್ಕೆ ಡ್ರಾಪ್‌ ಮಾಡಲು ಹೋಗಿದ್ದರು. ಅಲ್ಲೇ ಇದ್ದ ನಿರ್ದೇಶಕರೊಬ್ಬರು ಮಧು ರವರ ಹೈಟ್, ಪರ್ಸನಾಲಿಟಿ ನೋಡಿ ತೆಲುಗಿನ ಧಾರಾವಾಹಿಯೊಂದಕ್ಕೆ ಚಾನ್ಸ್ ಕೊಡಿಸಿದರು. ಅಲ್ಲಿಂದ ಮಧು ಆಕ್ಟಿಂಗ್ ಪಯಣ ಶುರು.

 'ಮಮ್ಮಿ save me' ಚಿತ್ರದಲ್ಲಿ ಮಧು ಪಾತ್ರ ಏನು?

'ಮಮ್ಮಿ save me' ಚಿತ್ರದಲ್ಲಿ ಮಧು ಪಾತ್ರ ಏನು?

'ಮಮ್ಮಿ save me' ಸಿನಿಮಾದಲ್ಲಿ ಚರ್ಚ್ ಫಾದರ್ ಆಗಿ ಕಾಣಿಸಿಕೊಂಡಿರುವ ಮಧು ಪ್ರಿಯಾಂಕ ಉಪೇಂದ್ರ ರವರನ್ನು ಕಾಪಾಡುತ್ತಾರೆ.

 'ಮಮ್ಮಿ save me' ನಿರ್ದೇಶಕರ ಬಗ್ಗೆ ಮಧು ಮಾತು

'ಮಮ್ಮಿ save me' ನಿರ್ದೇಶಕರ ಬಗ್ಗೆ ಮಧು ಮಾತು

''ನಿರ್ದೇಶಕ ಲೋಹಿತ್ ವಯಸ್ಸು ಚಿಕ್ಕದಿರಬಹುದು. ಸಿನಿಮಾ ನಿರ್ದೇಶನಕ್ಕೆ ಬೇಕಾದ ಅನುಭವ ಹೆಚ್ಚಾಗಿದೆ. ಅವರಿಗೆ ಬೇಕಾದ ನಟನೆಯನ್ನು ಸರಳವಾಗಿ ಹೇಳಿ ಮಾಡಿಸುತ್ತಾರೆ. ಎಲ್ಲಾ ರೀತಿಯ ಪ್ರಯೋಗಗಳೊಂದಿಗೆ ಸಿನಿಮಾ ನಿರ್ದೇಶನ ಮಾಡುವ ಕಿರಿಯ ನಿರ್ದೇಶಕರವರು. 'ಮಮ್ಮಿ save me' ಸಿನಿಮಾಗೆ ನನ್ನನ್ನು ತೆಲುಗಿನ ಸಿನಿಮಾ, ಧಾರಾವಾಹಿಯಲ್ಲಿನ ಆಕ್ಟಿಂಗ್ ನೋಡಿದ್ದರಿಂದ ಕರೆದಿದ್ದಾರೆ'' ಅಂತ ಲೋಹಿತ್ ಬಗ್ಗೆ ಮಧು ಹೆಮ್ಮೆಯ ಮಾತುಗಳನ್ನಾಡಿದರು.

 ಮಧು ಸಿನಿ ಪಯಣದ ಕುರಿತು....

ಮಧು ಸಿನಿ ಪಯಣದ ಕುರಿತು....

ತೆಲುಗಿನ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಆಕ್ಟಿಂಗ್ ಮಾಡುವುದರ ಮುಖಾಂತರ ತಮಿಳಿನ 'ಗೋಲಿ ಸೋಡಾ' ಸಿನಿಮಾದಲ್ಲಿ ಮಧು ನಟಿಸಿದರು. ಇವರು ಈಗಾಗಲೇ ಕನ್ನಡದಲ್ಲಿ 'ಗೋಲಿ ಸೋಡಾ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ಮಾಸ್ತಿಗುಡಿ' ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

ಸಕಲ ಭಾಷಾ ಪರಿಣಿತ

ಸಕಲ ಭಾಷಾ ಪರಿಣಿತ

ಭೋಜ್ ಪುರಿ ಭಾಷೆಯ 5 ಸಿನಿಮಾಗಳಲ್ಲಿ ವಿಲನ್ ಆಗಿ ಮಧು ನಟಿಸಿದ್ದಾರೆ. ಮಿಲಿಟರಿ ಸೇವೆಯ ಆಸಕ್ತಿಯೊಂದಿಗೆ ಭಾಷೆಗಳನ್ನು ಕಲಿಯುವ ಆಸಕ್ತಿ ಇದ್ದ ಮಧು, ಪಂಜಾಬಿ, ಇಂಗ್ಲೀಷ್‌, ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸರಾಗವಾಗಿ ಮಾತನಾಡುತ್ತಾರೆ.

English summary
Actor Madhu, who is well known in Tollywood (Also acted in 'Baahubali-2') is playing a prominent role in Kannada Actress Priyanka Upendra starrer Kannada Movie 'Mummy Save Me', Directed by Lohith.
Please Wait while comments are loading...

Kannada Photos

Go to : More Photos