»   » ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಪುನೀತ್

ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಪುನೀತ್

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರಕ್ಕೆ ಡಾ.ರಾಜ್ ಕುಮಾರ್ ಹೆಸರು ಉಳಿಸಿದ ಸಿನಿಮಾ ಎಂಬ ಹೊಗಳಿಕೆಯು ರಾಜ್ಯದ ಮೂಲೆ ಮೂಲೆಯಿಂದಲೂ ಸಿಗುತ್ತಿದೆ.[ಮೊದಲ ದಿನ 'ರಾಜಕುಮಾರ'ನ ಕಲೆಕ್ಷನ್ ಎಷ್ಟು?]

ಭಾವನಾತ್ಮಕ ಸಂಬಂಧಗಳು ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ಅಭಿನಯಿಸಿರುವ ಪುನೀತ್ ರಾಜ್ ಕುಮಾರ್, ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೇ ಸಂತೋಷದಲ್ಲಿ ಪವರ್ ಸ್ಟಾರ್ ಬಿರುಬೇಸಿಗೆಯಲ್ಲಿ ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದಿದ್ದಾರೆ.

ಚಾಮುಂಡಿ ದರ್ಶನ ಪಡೆದ ಪುನೀತ್

ಚಾಮುಂಡಿ ದರ್ಶನ ಪಡೆದ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿರು ಬೇಸಿಗೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬರಿಗಾಲಲ್ಲಿ ನಡೆಯುವ ಮೂಲಕ ಚಾಮುಂಡಿ ದೇವತೆಯ ದರ್ಶನ ಪಡೆದಿದ್ದಾರೆ.['ರಾಜಕುಮಾರ' ಚಿತ್ರತಂಡದಿಂದ ಹೊಸ ಅಭಿಯಾನ!]

ಕಾಲ್ನಡಿಗೆಯಲ್ಲಿ ಪವರ್ ಸ್ಟಾರ್

ಕಾಲ್ನಡಿಗೆಯಲ್ಲಿ ಪವರ್ ಸ್ಟಾರ್

ಚಾಮುಂಡಿ ದೇವತೆ ದರ್ಶನಕ್ಕಾಗಿ ಪುನೀತ್ ರಾಜ್ ಕುಮಾರ್ ಯಾವುದೇ ವಾಹನದಲ್ಲಿ ಬೆಟ್ಟಕ್ಕೆ ಹೋಗದೇ, ತಮ್ಮ ಸಹಚರರೊಂದಿಗೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದರು.[ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?]

'ಅಂಜನಿಪುತ್ರ' ಚಿತ್ರೀಕರಣದಲ್ಲಿ ಬಿಜಿ

'ಅಂಜನಿಪುತ್ರ' ಚಿತ್ರೀಕರಣದಲ್ಲಿ ಬಿಜಿ

ಸದ್ಯದಲ್ಲಿ ಪುನೀತ್ ರಾಜ್ ಕುಮಾರ್, ಎ ಹರ್ಷ ನಿರ್ದೇಶನದ 'ಅಂಜನಿಪುತ್ರ' ಚಿತ್ರೀಕರಣದಲ್ಲಿ ಬಿಜಿ ಆಗಿದ್ದಾರೆ. ಈ ನಡುವೆಯೇ ಪುನೀತ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೇವರ ದರ್ಶನಕ್ಕಾಗಿ ತೆರಳಿದ್ದರು.

'ರಾಜಕುಮಾರ' ಯಶಸ್ಸಿನಲ್ಲಿ ಪುನೀತ್

'ರಾಜಕುಮಾರ' ಯಶಸ್ಸಿನಲ್ಲಿ ಪುನೀತ್

ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರ ರಾಜ್ಯಾದ್ಯಂತ 400 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಯಶಸ್ಸಿನ ಸಂತೋಷದಲ್ಲಿದ್ದಾರೆ.

English summary
Kannada Actor Power Star Puneeth Rajkumar stepped Up Mysore Chamundi Hills for God's Darshan.
Please Wait while comments are loading...

Kannada Photos

Go to : More Photos