twitter
    For Quick Alerts
    ALLOW NOTIFICATIONS  
    For Daily Alerts

    ರಾಘವೇಂದ್ರ ರಾಜ್ ಈಗ ಹೇಗಿದ್ದಾರೆ ನೀವೇ ನೋಡಿ!

    By ಪೂರ್ಣಚಂದ್ರ ಮಾಗಡಿ
    |

    ರಾಮನಗರ, ಫೆ.17: ಸುಖ ದುಃಖ ಎರಡನ್ನ ಸಮಾನವಾಗಿ ಸ್ವೀಕರಿಸಿ ಒಂದೆಜ್ಜೆ ಹಿಂದೆ ಇಟ್ಟರೆ ಎರಡು ಹೆಜ್ಜೆ ಮುಂದೆ ಇಡಬೇಕೆಂಬುದು ರಾಜಣ್ಣನವರ ನಿಯಮವಾಗಿತ್ತು. ಅದರಂತೆ ನಾನು ಅಧೀರನಾಗದೇ ಧೈರ್ಯವಾಗಿ ಆರೋಗ್ಯಸ್ಥಿತಿಯನ್ನ ಎದುರಿಸಿದೆ. ಆದ್ದರಿಂದ ನಾನು ಬೇಗನೇ ಗುಣಮುಖನಾಗಿದ್ದೇನೆ...

    ಎಂದಿನಂತೆ ನಾನು ಸ್ವಲ್ಪ ಮಟ್ಟಿಗೆ ಜಿಮ್ ನಲ್ಲಿ ವ್ಯಾಯಾಮವನ್ನ ಮಾಡುತ್ತಿದ್ದೇನೆ. ಪಾರ್ಶ್ವವಾಯುವಿನಿಂದ ತೀವ್ರ ಅಸ್ವಸ್ಥರಾಗಿ ವಿದೇಶೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿರುವ ರಾಘವೇಂದ್ರ ರಾಜ್ ಕುಮಾರ್ (48) ವಿಶ್ವಾಸದ ಮಾತುಗಳನ್ನಾಡಿದರು.

    ರಾಮನಗರ ಜಿಲ್ಲೆಯ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಬಂದು ಬುಡಕಟ್ಟು ಸಂಗ್ರಹಾಲಯವನ್ನ ಉದ್ಘಾಟಿಸಿದ ರಾಘಣ್ಣ ಅನಾರೋಗ್ಯದ ನಂತರ ಸಾರ್ವಜನಿಕ ಕಾರ್ಯಕ್ರಮವದಲ್ಲಿ ಭಾಗವಹಿಸಿ ಆರೋಗ್ಯವಾಗಿದ್ದೇನೆಂಬ ಸಂದೇಶ ರವಾನಿಸಿದರು. [ರಾಘಣ್ಣನಿಗೆ ನಿಜವಾಗಿ ಆಗಿರೋದೇನು ಗೊತ್ತಾ?]

    ಡಾ.ರಾಜ್ ಕುಟುಂಬದ ಡಿಸಿಷನ್ ಮೇಕರ್ ಅರ್ಥಾತ್ ಆಧಾರಸ್ತಂಭವಾಗಿರುವ ರಾಘಣ್ಣ ಕೆಲವು ತಿಂಗಳ ಹಿಂದಷ್ಟೇ ತೀವ್ರ ಅನಾರೋಗ್ಯ ಒಳಗಾಗಿದ್ದರು. ರಾಜಣ್ಣನವರ ಕುಟುಂಬಕ್ಕೂ ಬರಸಿಡಿಲಿನಂತ ಆಘಾತ, ಕನ್ನಡ ಚಿತ್ರಾಭಿಮಾನಿಗಳಿಗೂ ಆಘಾತ, ಏನೇನೋ ಗಾಳಿ ಸುದ್ದಿಗಳು ಹಬ್ಬಿದ್ದವು. ರಾಘಣ್ಣನ ಆರೋಗ್ಯ ಸ್ಥಿತಿಯ ಬಗ್ಗೆ ಕುಟುಂಬದ ಸದಸ್ಯರಿಂದ ತಿಳಿಯಬೇಕಾಗಿತ್ತು. ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ತೆರಳಿದ್ದರು.

    ಕನ್ನಡ ಕುಲಕೋಟಿಗೆ ಧನ್ಯವಾದ ತಿಳಿಸಿದ ರಾಘಣ್ಣ

    ಕನ್ನಡ ಕುಲಕೋಟಿಗೆ ಧನ್ಯವಾದ ತಿಳಿಸಿದ ರಾಘಣ್ಣ

    ಪಾರ್ಶ್ವವಾಯುವಿನಿಂದ ಸುಧಾರಿಸಿಕೊಂಡಿರುವ ರಾಘಣ್ಣ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಆರೋಗ್ಯವಾಗಿದ್ದೇನೆಂಬ ಸಂದೇಶ ರವಾನಿಸಿದ್ದಾರೆ. ದುಃಖ ಸುಖಗಳೆರಡರ ಆಯಾಮವನ್ನ ಅಧೀರನಾಗದೇ ಬದುಕನ್ನ ಸ್ವೀಕರಿಸಿದ್ದಕ್ಕೆ ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆಂದು ರಾಘಣ್ಣ ಕನ್ನಡ ಕುಲಕೋಟಿಗೆ ಧನ್ಯವಾದ ತಿಳಿಸಿದ್ದಾರೆ.

    ಪಾರ್ಶ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು

    ಪಾರ್ಶ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು

    ಡಾ.ರಾಜ್ ಮನೆಯಲ್ಲಿ ರಾಘಣ್ಣ ಎಂದರೆ ಎಲ್ಲರಿಗೂ ಗೌರವ. ಆ ವಿನಯ ವಿಧೇಯತೆಯೇ ಅವರ ಮೇಲಿನ ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು. ಅಪ್ಪು ಪುನೀತ್ ರ ಯಾವುದೇ ಸಿನಿಮಾವಿರಲಿ ಮನೆಯಲ್ಲಿ ಯಾವುದೇ ನಿರ್ಧಾರವಾಗಬೇಕಾಗಿದ್ದರು ರಾಘಣ್ಣನ ತೀರ್ಮಾನವೇ ಅಂತಿಮ. ಲವಲವಿಕೆಯಿಂದಲೇ ಇರುತ್ತಿದ್ದ ರಾಘಣ್ಣನಿಗೆ ಇದ್ದಕ್ಕಿದ್ದಂತೆ ಕೆಲವು ತಿಂಗಳ ಹಿಂದಷ್ಟೇ ಪಾರ್ಶ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು.

    ಸಿಂಗಾಪುರದಿಂದ ಬಂದ ರಾಘಣ್ಣ

    ಸಿಂಗಾಪುರದಿಂದ ಬಂದ ರಾಘಣ್ಣ

    ಇಡೀ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ರಾಘಣ್ಣನ ಬಗ್ಗೆ ಊಹಾಪೋಹದ ಸುದ್ದಿ ಕೇಳಿ ಕಂಗಾಲಾಗಿ ಹೋಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ರಾಘಣ್ಣರನ್ನ ಸಿಂಗಾಪುರಕ್ಕೆ ಕರೆದೊಯ್ಯಲಾಯಿತು. ಅಂದಿನಿಂದಲೂ ರಾಘಣ್ಣನ ಆರೋಗ್ಯ ಸ್ಥಿತಿಯ ಬಗ್ಗೆ ಕನ್ನಡಾಭಿಮಾನಿಗಳಿಗೆ ಆತಂಕ ಕುತೂಹಲ ಎಲ್ಲವು ಇತ್ತು.

    ಜನತೆಯ ಪ್ರೀತಿ ವಿಶ್ವಾಸ ಆಶೀರ್ವಾದದಿಂದ ಚೆನ್ನಾಗಿದ್ದೇನೆ

    ಜನತೆಯ ಪ್ರೀತಿ ವಿಶ್ವಾಸ ಆಶೀರ್ವಾದದಿಂದ ಚೆನ್ನಾಗಿದ್ದೇನೆ

    ಆದರೆ ಇಂದು ಜನತೆಯ ಪ್ರೀತಿ ವಿಶ್ವಾಸ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ರಾಘಣ್ಣನ ಪುತ್ರನ ಚಿತ್ರದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಷ್ಟರಲ್ಲಿ ನಾನು ಸಹಜ ಸ್ಥಿತಿಗೆ ಬರುತ್ತೇನೆಂದು ವಿಶ್ವಾಸದ ಮಾತುಗಳನ್ನಾಡಿದರು. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳವಾಗಿ ಇನ್ನೋವೇಟಿವ್ ಫಿಲ್ಮ್ ಸಿಟಿ ಪರಿವರ್ತನೆಯಾಗಲಿದೆ ಎಂದರು.

    ಡಬ್ಬಿಂಗ್ ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಿಲ್ಲ?

    ಡಬ್ಬಿಂಗ್ ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಿಲ್ಲ?

    ಅನಾರೋಗ್ಯದ ಕಾರಣ ನಾನು ಡಬ್ಬಿಂಗ್ ಸಂಬಂಧದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಇಡೀ ಚಿತ್ರರಂಗದ ಕುಟುಂಬವೇ ಭಾಗವಹಿಸಿದ್ದ ಮೇಲೆ ನಾನು ಭಾಗವಹಿಸಿದಂತೆ ಎಂದು ರಾಘಣ್ಣ ಹೇಳಿದರು.

    ಲವಲವಿಕೆಯಿಂದ ಮಾತನಾಡಿದ ರಾಘಣ್ಣ

    ಲವಲವಿಕೆಯಿಂದ ಮಾತನಾಡಿದ ರಾಘಣ್ಣ

    ರಾಘಣ್ಣರಿಗೆ ಪಾಶ್ರ್ವವಾಯು ತಗುಲಿದಾಗಿನಿಂದ ಸಾರ್ವಜನಿಕವಾಗಿ ರಾಘಣ್ಣ ಕಾಣಿಸಿಕೊಂಡಿರಲೇ ಇಲ್ಲ. ಫಿಲ್ಮ್ ಸಿಟಿಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ದೇಹದ ಎಡಭಾಗಕ್ಕೆ ಬೆಲ್ಟ್ ಹಾಕಿಕೊಂಡೇ ಕಾರ್ಯಕ್ರಮಕ್ಕೆ ಬಂದಿದ್ದ ರಾಘಣ್ಣ ಲವಲವಿಕೆಯಿಂದಲೇ ಎಲ್ಲರ ಬಳಿ ಮಾತನಾಡಿಕೊಂಡು ಹೆಚ್ಚಿನ ಆತ್ಮವಿಶ್ವಾಸದಿಂದ ಬೀಗುತ್ತಿದ್ದರು.

    English summary
    Kannada actor and producer Raghavendra Rajkumar, 48, recently visits Innovative Film city in Ramanagar. The actor is completely fit and fine now. He is enjoying life without any tension, said in Ramanagar.
    Tuesday, February 18, 2014, 11:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X