»   » ಚಂದನವನದಲ್ಲಿ ಮತ್ತೆ ಕಮಾಲ್ ಮಾಡಲಿರುವ 'ಕಿಲ್ಲಿಂಗ್' ಜೋಡಿ

ಚಂದನವನದಲ್ಲಿ ಮತ್ತೆ ಕಮಾಲ್ ಮಾಡಲಿರುವ 'ಕಿಲ್ಲಿಂಗ್' ಜೋಡಿ

Posted by:
Subscribe to Filmibeat Kannada

ಬಹುನಿರೀಕ್ಷಿತ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ತಯಾರಾಗಿ ನಿಂತಿರುವಾಗಲೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

ಹೌದು ವರ್ಮಾ ಅವರ ಜೊತೆ 'ಸೌಥ್' ಎಂಬ ಮತ್ತೊಂದು ಹೊಸ ಸಿನಿಮಾ ಮಾಡುತ್ತೇನೆ ಎಂದು ಸ್ವತಃ ಶಿವಣ್ಣ ಅವರೇ ತಿಳಿಸಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಶಿವಣ್ಣ ಅವರಿಗಾಗಿ ಇನ್ನೊಂದು ಸಿನಿಮಾ ಮಾಡಲು ರೆಡಿಯಾಗಿ ನಿಂತಿದ್ದಾರೆ.[ವಿಘ್ನ ನಿವಾರಣೆ ಆಯ್ತು, ಜ.1ಕ್ಕೆ ವೀರಪ್ಪನ್ ಬೇಟೆ ಪಕ್ಕಾ]

'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಂತರ ನಿರ್ದೇಶಕ ಆರ್.ಜಿ.ವಿ ಅವರು ಮತ್ತೆ ಬಾಲಿವುಡ್ ದಾರಿ ಹಿಡಿಯುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಅಲ್ಲಲ್ಲಿ ಹರಡಿತ್ತು. ಆದರೆ ವರ್ಮಾ ಅವರು ಶಿವಣ್ಣ ಅವರಿಗೆ ಆಕ್ಷನ್-ಕಟ್ ಹೇಳಲಿರುವುದರಿಂದ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲಿದ್ದಾರೆ.

ಅಂದಹಾಗೆ 'ಸೌಥ್' ಚಿತ್ರ ಯಾವಾಗ ಆರಂಭ ಆಗುತ್ತೆ, ಚಿತ್ರದ ನಿರ್ಮಾಪಕರು ಯಾರು?, ಕಥೆ ಏನು, ಎಂಬ ಯಾವ ವಿಚಾರವು ತಿಳಿದುಬಂದಿಲ್ಲವಾದರೂ, ಇಬ್ಬರೂ 'ಸೌಥ್' ಎಂಬ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುತ್ತಿರುವುದು ಮಾತ್ರ ಪಕ್ಕಾ.[ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ]

ಇನ್ನು ಶಿವಣ್ಣ, ಯಜ್ಞಾ ಶೆಟ್ಟಿ, ಪಾರುಲ್ ಯಾದವ್, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ಮುಂತಾದವರು ಕಾಣಿಸಿಕೊಂಡಿರುವ ಕಾಡುಗಳ್ಳ ವೀರಪ್ಪನ್ ಕಥೆಯಾಧರಿತ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ವರ್ಷ ಆರಂಭವಾಗುವಾಗಲೇ ಭರ್ಜರಿಯಾಗಿ ಓಪನಿಂಗ್ ಪಡೆದುಕೊಳ್ಳುತ್ತಿದೆ.

English summary
Even before 'Killing Veerappan' is released, kannada actor Shiva Rajakumar and director Ramgopal Verma is all set to do another film called 'South'.
Please Wait while comments are loading...

Kannada Photos

Go to : More Photos