»   » ಪಲ್ಲವಿ ಟಾಕೀಸ್ ಗೆ ಬಂದ ಹೀರೊ ತಿಲಕ್

ಪಲ್ಲವಿ ಟಾಕೀಸ್ ಗೆ ಬಂದ ಹೀರೊ ತಿಲಕ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನೆಗಟಿವ್ ಶೇಡ್ ಇರುವ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಉಳಿದಿರುವ ತಿಲಕ್ ಅವರು ಉಗ್ರಂ ಚಿತ್ರದ ನಂತರ ಪೊಲೀಸ್ ಗೆಟ್ ಅಪ್ ನಲ್ಲಿ ಪಲ್ಲವಿ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಪಲ್ಲವಿ ಟಾಕೀಸ್ ಮತ್ತೆ ಆರಂಭಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ. ತಿಲಕ್ ಅವರ ವೃತ್ತಿ ಬದುಕಿನಲ್ಲಿ ಪಲ್ಲವಿ ಟಾಕೀಸ್ ಹೊಸ ಮುನ್ನುಡಿ ಬರೆದಿದೆ.

ಸಂಜನಾ ಜತೆ ನಡೆಸಿದ 'ಗಂಡ ಹೆಂಡತಿ' ಚಿತ್ರದ ನಂತರ ಕನ್ನಡದ ಇಮ್ರಾನ್ ಹಶ್ಮಿ ಕಿಸ್ಸಿಂಗ್ ಸ್ಟಾರ್ ಎಂದೇ ತಿಲಕ್ ಕೀರ್ತಿ ಬೆಳೆಯತೊಡಗಿತು. ಟಿ.ಎನ್ ಸೀತಾರಾಮ್ ಅವರ ಮೀರಾ ಮಾಧವ ರಾಘವ ಚಿತ್ರದಲ್ಲಿ ರಮ್ಯಾ ಅವರಿಗೆ ಸಾಲ ಕೊಡುವ ಪಾತ್ರದಲ್ಲಿ ನಟಿಸಿದ್ದ ತಿಲಕ್ ಮಹಿಳಾ ಪ್ರೇಕ್ಷಕರಿಗೂ ಇಷ್ಟವಾದರು. ನಂತರ ಬಿಗ್ ಬಾಸ್ ನಲ್ಲಿ ತಿಲಕ್ ಮತ್ತೆ ಜನರಿಗೆ ಹತ್ತಿರವಾದರು. ಒಂದಿಷ್ಟು ಕಾಲ ಗಾಸಿಪ್ ಕಲಂಗಳಲ್ಲೂ ತಿಲಕ್ ಹೆಸರು ಉಳಿದುಕೊಂಡಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಆದರೆ, ಇತ್ತೀಚೆಗೆ ಬಂದ ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದಲ್ಲಿನ ತಿಲಕ್ ನಟನೆ ಮತ್ತೆ ಜನರ ಗಮನ ಸೆಳೆದಿದೆ. ಆಕರ್ಷಕ ಮೈಕಟ್ಟು ಹೊಂದಿರುವ ತಿಲಕ್ ಈಗ ನಾಯಕರಾಗಿ ಬಡ್ತಿ ಹೊಂದಿದ್ದಾರೆ. ತಿಲಕ್ ಅವರ H/34 ಪಲ್ಲವಿ ಟಾಕೀಸ್ ಚಿತ್ರ ಜಯನಗರದ ಗಣಪತಿ ದೇಗುಲದಲ್ಲಿ ಮುಹೂರ್ತ ಮುಗಿಸಿಕೊಂಡು ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದೆ.

ತಿಲಕ್ ಹೀರೋ, ಹೊಸ ನಿರ್ದೇಶಕ ಸೀನಿ
  

ತಿಲಕ್ ಹೀರೋ, ಹೊಸ ನಿರ್ದೇಶಕ ಸೀನಿ

ಹೊಸ ನಿರ್ದೇಶಕ ಸೀನಿ ಅವರು ಸ್ಕ್ರಿಪ್ಟ್ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಿಲಕ್ ಅವರು ಚಿತ್ರದ ನಾಯಕನಾಗಿ ಅದರಲ್ಲೂ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಅಜನೀಶ್ ಸಂಗೀತ, ಮನೋಹರ್ ಕೆಮೆರಾ
  

ಅಜನೀಶ್ ಸಂಗೀತ, ಮನೋಹರ್ ಕೆಮೆರಾ

ಉಳಿದವರು ಕಂಡಂತೆ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸಿಂಪಲ್ಲಾಗೊಂದು ಲವ್ ಸ್ಟೋರಿ ಖ್ಯಾತಿಯ ಛಾಯಾಗ್ರಹಕ ಮನೋಹರ್ ಜೋಶಿ ತಾಂತ್ರಿಕ ವರ್ಗದಲ್ಲಿದ್ದಾರೆ.

ಪಲ್ಲವಿ ಟಾಕೀಸ್ ಚಿತ್ರದ ಕೆಮೆರಾ ತಂಡ
  

ಪಲ್ಲವಿ ಟಾಕೀಸ್ ಚಿತ್ರದ ಕೆಮೆರಾ ತಂಡ

ಪಲ್ಲವಿ ಟಾಕೀಸ್ ಚಿತ್ರದ ಕೆಮೆರಾ ತಂಡ ಮನೋಹರ್ ಜೋಶಿ ನೇತೃತ್ವದಲ್ಲಿ ಮೊದಲ ದಿನದ ಚಿತ್ರೀಕರಣಕ್ಕೆ ಸಿದ್ಧವಾಗಿದ್ದಾರೆ.

ಆಕರ್ಷಕ ಪೋಸ್ಟರ್ ಗಳು ಗಮನ ಸೆಳೆದಿವೆ
  

ಆಕರ್ಷಕ ಪೋಸ್ಟರ್ ಗಳು ಗಮನ ಸೆಳೆದಿವೆ

ಈ ಚಿತ್ರದ ಆಕರ್ಷಕ ಪೋಸ್ಟರ್ ಗಳು ಗಮನ ಸೆಳೆದಿವೆ. H/34-Pallavi Talkies ಶೀರ್ಷಿಕೆ ಪ್ರಕಾರ ಹೇಳುವುದಾದರೆ ಪಲ್ಲವಿ ಚಿತ್ರಮಂದಿರದ ಎಚ್ ಶ್ರೇಣಿಯ 34ನೇ ಸೀಟಿನ ಸಂಖ್ಯೆ ಎಂದಷ್ಟೇ ತಿಳಿದು ಬರುತ್ತದೆ.

ಹೊಸಬರಿಗೆ ಶುಭ ಹಾರೈಸಿದ ಶಿವಣ್ಣ
  

ಹೊಸಬರಿಗೆ ಶುಭ ಹಾರೈಸಿದ ಶಿವಣ್ಣ

ಹೊಸಬರ ಚಿತ್ರಕ್ಕೆ ಶಿವರಾಜ್ ಕುಮಾರ್, ಶ್ರೀನಗರ ಕಿಟ್ಟಿ ಶುಭ ಹಾರೈಸಿದ್ದಾರೆ. ಶಿವರಾಜ್ ಆರಂಭ ಫಲಕ ತೋರಿದರೆ, ಕಿಟ್ಟಿ ಅವರು ಕೆಮರಾ ಚಾಲನೆ ಮಾಡಿದ್ದಾರೆ.

ವಿಜಯ ರಾಘವೇಂದ್ರ, ಎನ್. ಆರ್ ರಮೇಶ್, ಎನ್. ಲಕ್ಷ್ಮಿಕಾಂತ್ ಅವರು ಜ್ಯೋತಿ ಬೆಳಗಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

 

ಚಿತ್ರ ತಂಡ, ತಾರಾಗಣ ವಿವರ
  

ಚಿತ್ರ ತಂಡ, ತಾರಾಗಣ ವಿವರ

ತಿಲಕ್, ಯಜ್ಞಾ ಶೆಟ್ಟಿ, ಪದ್ಮಜಾ ರಾವ್, ಅಚ್ಯುತರಾವ್, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್, ಅಮೃತಾ, ಅಜಯ್ ರಾವ್, ತರಂಗ ವಿಶ್ವ, ಚಿಕ್ಕಣ್ಣ, ಸಂದೀಪ್, ನಿಹಾಲ್ ಮುಂತಾದವರು ತಾರಾಗಣದಲ್ಲಿದ್ದಾರೆ.

English summary
Actor Tilak who is known for his negative roles turns a hero with a new film called 'Pallavi Talkies'. The film is being directed by debutante Seeni. Seeni himself has scripted the film apart from directing the film.
Please Wait while comments are loading...

Kannada Photos

Go to : More Photos