»   » ಉದಯ್ ಸಾವಿನ ಕಾರಣ, ಕೊನೆ ಮಾತು

ಉದಯ್ ಸಾವಿನ ಕಾರಣ, ಕೊನೆ ಮಾತು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆಲುಗು ಚಿತ್ರರಂಗದ ಯುವತಾರೆ ಉದಯ್ ಕಿರಣ್ ಸಾವಿನ ಸುದ್ದಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಆಪ್ತ ಗೆಳೆಯರು ಸಾವಿನ ನೈಜ ಕಾರಣ ಜಗತ್ತಿಗೆ ತಿಳಿಯಬೇಕು ಉದಯ್ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾದರೆ ಅವನಿಗೆ ಮಾನಸಿಕ ಒತ್ತಡ ಉಂಟು ಮಾಡಿದ್ದು ಯಾರು ಎಂಬುದು ಪ್ರಪಂಚಕ್ಕೆ ತಿಳಿಯಲಿ ಎಂದು ದುಃಖ ಆಕ್ರೋಶದಿಂದ ಹೇಳಿದ್ದಾರೆ.

ಮೂಲಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಉದಯ್ ಅವರು ಗೆಳೆಯರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ತಮ್ಮ ನೋವು ತೋಡಿಕೊಂಡಿದ್ದಾರೆ. 'Nakinka Okka Roju Kuda Bratakalani Ledu.' ( I don't want to live anymore) ಎಂದಿದ್ದಾರೆ ತಕ್ಷಣವೇ ಗೆಳೆಯರು ಪ್ರತಿಕ್ರಿಯೆ ನೀಡಿ ಕರೆ ಮಾಡಿದರೆ ಉದಯ್ ಫೋನ್ ಸೈಲಂಟ್ ಮೋಡ್ ಗೆ ಹೋಗಿ ಬಿಟ್ಟಿದ್ದೆ.

ನಂತರ ಉದಯ್ ಅವರು ಪತ್ನಿ ವಿಶಿತಾಗೆ 'ಲವ್ ಯೂ' ಎಂದು ಸಂದೇಶ ಕಳಿಸಿದ್ದಾರೆ. ಮನೆಯಿಂದ ಹೊರಗಿದ್ದ ವಿಶಿತಾ ಅವರು 'ಲವ್ ಯೂ ಟೂ' ಎಂದು ಕಳಿಸಿದ್ದಾರೆ.

ಪೊಲೀಸರ ಹೇಳಿಕೆ : ಉದಯ್ ಅವರು ಕೊನೆ ಫೋನ್ ಕಾಲ್ ಚೆನ್ನೈನಲ್ಲಿರುವ ಭೂಪಾಲ್ ಎಂಬುವವರಿಗೆ ಮಾಡಿದ್ದಾರೆ. ಸದ್ಯಕ್ಕೆ ಉದಯ್ ಅವರ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದ್ದು ತನಿಖೆ ಮುಂದುವರೆದಿದ್ದಾರೆ. ಸಿನಿಮಾ ರಂಗದಲ್ಲಿ ಇತ್ತೀಚೆಗೆ ಸಿಗದ ಯಶಸ್ಸು, ಕುಟುಂಬದಲ್ಲಿನ ವಾತಾವರಣ, ಮಾನಸಿಕ ಒತ್ತಡದ ಕಾರಣ ಉದಯ್ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉದಯ್ ಅವರ ಕುಟುಂಬದ ದುರಂತ, ಸಾವಿನ ಸಂಭಾವ್ಯ ಕಾರಣಗಳ ಬಗ್ಗೆ ಮುಂದೆ ಓದಿ...

ಕುಟುಂಬದ ದುರಂತಗಳು
  

ಕುಟುಂಬದ ದುರಂತಗಳು

ಉದಯ್ ಅವರಿಗೆ ತಮ್ಮ ತಾಯಿಗೆ ಅಗಲಿಕೆ ತೀವ್ರವಾಗಿ ಬಾಧಿಸುತ್ತಿತ್ತು ಎನ್ನಲಾಗಿದೆ. ತಂದೆ ಎರಡನೇ ಮದುವೆಯಾದ ಮೇಲೆ ಅಪ್ಪನ ಜತೆ ಮಾತನಾಡದೆ ಉದಯ್ ದೂರವುಳಿದಿದ್ದರು. ಹಿರಿಯ ಅಣ್ಣನೊಬ್ಬ 21 ವರ್ಷ ಇದ್ದಾಗ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಸೋದರಿಯೊಬ್ಬರು ಮಸ್ಕತ್ ನಲ್ಲಿದ್ದಾರೆ. ಪತ್ನಿ ವಿಶಿತಾ ಹಾಗೂ ಗೆಳೆಯರು ಮಾತ್ರ ಉದಯ್ ಪ್ರಪಂಚವಾಗಿತ್ತು.

ತನಿಖೆ ಹೇಗೆ ಸಾಗಿದೆ
  

ತನಿಖೆ ಹೇಗೆ ಸಾಗಿದೆ

ಉದಯ್ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದಿರುವ ಡಿಸಿಪಿ ಸತ್ಯನಾರಾಯಣ ಅವರು ಹೆಚ್ಚಿನ ವಿವರ ಬಹಿರಂಗಗೊಳಿಸಿಲ್ಲ. ಅಸ್ವಾಭಾವಿಕ ಸಾವು ಎಂದು ಐಪಿಸಿ ಸೆಕ್ಷನ್ 174(ಸಿ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಶಿತಾ ಅವರು ನೀಡಿರುವ ಮಾಹಿತಿ, ಫೋನ್ ಕರೆಗಳ ವಿವರ ಆಧಾರಿಸಿ ತನಿಖೆ ಮುಂದುವರೆಸಲಾಗುತ್ತಿದೆ.

ಮಾನಸಿಕ ಒತ್ತಡ ಏನಿತ್ತು?
  

ಮಾನಸಿಕ ಒತ್ತಡ ಏನಿತ್ತು?

ತಾಯಿ ಸಾವಿನ ನಂತರ ಕಳೆದ ನಾಲ್ಕೈದು ವರ್ಷಗಳಿಂದ ಉದಯ್ ಹೆಚ್ಚಾಗಿ ಒಂಟಿಯಾಗಿರುತ್ತಿದ್ದರು. ಅಪ್ಪನ ಜತೆ ಕೂಡಾ ಸಂಪರ್ಕ ಹೊಂದಿರಲಿಲ್ಲ. ಅಣ್ಣನ ಅಕಾಲಿಕ ಸಾವು ಕೂಡಾ ಉದಯ್ ರನ್ನು ಕಾಡುತ್ತಿತ್ತು. ಸಾವಿಗೆ ಮುನ್ನ ಕೂಡಾ ಬದುಕಲು ಇಷ್ಟವಿಲ್ಲ. ಎಂದು ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಇದ್ದಕ್ಕಿದ್ದಂತೆ ತೆಗೆದುಕೊಂಡ ನಿರ್ಧಾರವಲ್ಲ ಎಂಬುದು ಮಾತ್ರ ಸ್ಪಷ್ಟ ಎಂದು ಬಲ್ಲವರು ಹೇಳುತ್ತಾರೆ.

Autopsy ವರದಿ
  

Autopsy ವರದಿ

ಅಟಾಪ್ಸಿ ವರದಿ ಬಂದ ಮೇಲೆ ಸಾವಿನ ಕಾರಣದ ಬಗ್ಗೆ ನಿಖರವಾದ ಮಾಹಿತಿ ಕಲೆ ಹಾಕಲು ಸಾಧ್ಯ. ಉಸ್ಮಾನಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇಡೀ ಪರೀಕ್ಷೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. 12.15ಕ್ಕೆ ನೇಣು ಬಿಗಿದು ಕೊಂಡಿದ್ದಾರೆ. 1.16ಕ್ಕೆ ಅಪೋಲೋ ಆಸ್ಪತ್ರೆ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಾವಿನ ಕಾರಣಗಳು ತನಿಖೆ ನಂತರ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ತನಿಖೆಗೆ ಆಗ್ರಹ
  

ತನಿಖೆಗೆ ಆಗ್ರಹ

ನಟ ಶ್ರೀಕಾಂತ್ ಸೇರಿದಂತೆ ಹಲವಾರು ತೆಲುಗು ಚಿತ್ರರಂಗದ ಗಣ್ಯರು ಉದಯ್ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಚಿರನಿದ್ರೆಗೆ ಜಾರಿದ ಹೀರೋ
  

ಚಿರನಿದ್ರೆಗೆ ಜಾರಿದ ಹೀರೋ

ಚಿರನಿದ್ರೆಗೆ ಜಾರಿದ ಚಿತ್ರಂ ನಾಯಕ ಉದಯ್ ಕಿರಣ್

English summary
Telugu film industry is shocked by the death of actor Uday Kiran, who committed suicide by hanging himself in his apartment at Srinagar colony in Punjagutta, Hyderabad on Sunday night. Here are the Uday Kiran's dead body pictures, reportedly his last words and reason behind his death
Please Wait while comments are loading...

Kannada Photos

Go to : More Photos