twitter
    For Quick Alerts
    ALLOW NOTIFICATIONS  
    For Daily Alerts

    ಪ್ರಧಾನಿ 'ಮೋದಿ' ಮತ್ತು ನಟ ಉಪೇಂದ್ರ ನಡುವೆ ಏನೋ ಐತೆ !

    By Suneetha
    |

    ಸಿನಿಮಾಗಳ ಆಯ್ಕೆ ಮತ್ತು ಸಿನಿಮಾ ಮಾಡುವ ವಿಚಾರಕ್ಕೆ ಬಂದಾಗ ರಿಯಲ್ ಸ್ಟಾರ್ ಉಪೇಂದ್ರ ಅವರು, ಬೇರೆಯವರಿಗಿಂತ ಕೊಂಚ ವಿಭಿನ್ನವಾಗಿ ಕಾಣುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ಅಂದ್ರೆ, 'ಎ', 'ಸೂಪರ್' ಮತ್ತು 'ಉಪ್ಪಿ 2' ಸಿನಿಮಾಗಳು.

    ಇವರ ಈ ವಿಭಿನ್ನ ಶೈಲಿಯೇ ಎಲ್ಲಾ ಅಭಿಮಾನಿಗಳಿಗೆ ಮತ್ತು ಸಿನಿ ಪ್ರಿಯರಿಗೆ ಇಷ್ಟವಾಗುತ್ತದೆ. ಇದೀಗ ಮತ್ತೆ ಉಪೇಂದ್ರ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಉಪೇಂದ್ರ ಅವರು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ.[ರಿಯಲ್ ಸ್ಟಾರ್ ಉಪೇಂದ್ರ ಎತ್ತರಕ್ಕೇರಿದ ಗುಟ್ಟು]

    ಅಂದಹಾಗೆ ಉಪ್ಪಿ ಅವರು ಮೋದಿ ಅವರ ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತಾರೆ ಅಂತಾದಾಗ ಹಲವಾರು ಅಪಸ್ವರಗಳು ಬಂದವು. ಅಲ್ಲದೇ ಈ ಮೊದಲು ಹಲವರು ಮೋದಿ ಬಗ್ಗೆ ಸಿನಿಮಾ ಮಾಡಲು ಮುಂದಾದಾಗ, ಯಾರೂ ಕೂಡ ಸಿನಿಮಾ ಮಾಡೋದು ಬೇಡ ಅಂತ ಖುದ್ದು ಮೋದಿ ಅವರೇ ಮನವಿ ಮಾಡಿಕೊಂಡಿದ್ದರಂತೆ. ಮುಂದೆ ಓದಿ....

    'ಮೋದಿ' ಆಗ್ತಾರೆ ಉಪೇಂದ್ರ

    'ಮೋದಿ' ಆಗ್ತಾರೆ ಉಪೇಂದ್ರ

    'ಮೋದಿ' ಶೀರ್ಷಿಕೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಅಂದಾಗ ಹಲವು ಸಮಸ್ಯೆಗಳು ಎದುರಾಗುವ ಮುನ್ಸೂಚನೆ ಸಿಕ್ಕಿತು. ಆದರೆ ಇದೀಗ ಉಪೇಂದ್ರ ಅವರೇ 'ಮೋದಿ' ಚಿತ್ರವನ್ನು ಮಾಡೋದು ಪಕ್ಕಾ ಆಗಿದೆ. ಜೊತೆಗೆ ಇದಕ್ಕೆ ಚಲನಚಿತ್ರ ಮಂಡಳಿ ಕೂಡ ಅನುಮೋದನೆ ನೀಡಿದೆ.[ಉಪೇಂದ್ರ ಮತ್ತು ನಟಿ ಪ್ರೇಮ ಕುರಿತ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!]

    ಮೋದಿ ಜೀವನ ಚರಿತ್ರೆ.?

    ಮೋದಿ ಜೀವನ ಚರಿತ್ರೆ.?

    ಅಂದಹಾಗೆ ಈ ಸಿನಿಮಾ ಪ್ರಧಾನಿ ಮೋದಿ ಅವರ ಜೀವನ ಚರಿತ್ರೆಯನ್ನಾಧರಿಸಿಲ್ಲ. ಹಾಗಂತ ಅವರ ಹೊರತಾದ ಸಿನಿಮಾ ಕೂಡ ಅಲ್ಲ, ಇಲ್ಲಿಯವರೆಗೆ ಅವರು ಮಾಡಿರುವ ಕೆಲಸಗಳು ಮತ್ತು ಆದರ್ಶಗಳನ್ನು ಈ ಸಿನಿಮಾದಲ್ಲಿ ರಸವತ್ತಾಗಿ ಬಣ್ಣಿಸಲಿದ್ದಾರೆ.[ಉಪ್ಪಿ ಹುಟ್ಟುಹಬ್ಬಕ್ಕೆ 'ಮುಕುಂದ ಮುರಾರಿ' ರಿಲೀಸ್.?]

    ರಾಜಕಾರಣದ ಗಂಧಗಾಳಿ ಇಲ್ಲ

    ರಾಜಕಾರಣದ ಗಂಧಗಾಳಿ ಇಲ್ಲ

    'ಮೋದಿ' ಶೀರ್ಷಿಕೆಯ ಜೊತೆ 'ಒನ್ ಮ್ಯಾನ್ ಶೋ, ನೋ ಪಾಲಿಟಿಕ್ಸ್ ಪ್ಲೀಸ್' ಎಂಬ ಅಡಿಬರಹವಿದೆ. ಆದ್ದರಿಂದ ರಾಜಕಾರಣವನ್ನು ಈ ಸಿನಿಮಾದಲ್ಲಿ ಹೇಳುತ್ತಿಲ್ಲವಂತೆ.

    ಉಪೇಂದ್ರ ಪಾತ್ರ ಏನು.?

    ಉಪೇಂದ್ರ ಪಾತ್ರ ಏನು.?

    ಚಿತ್ರದ ನಾಯಕ ಉಪೇಂದ್ರ ಸಾಮಾಜಿಕ ಕಾರ್ಯಕರ್ತನಾಗಿರುತ್ತಾರೆ. ಮೋದಿ ಅವರ ಪಾಸಿಟಿವ್ ಆಲೋಚನೆಗಳು ಏನೆಲ್ಲಾ ಇರುತ್ತವೆಯೋ, ಅವೆಲ್ಲವೂ ಚಿತ್ರಕಥೆಯಲ್ಲಿ ಇರುತ್ತದೆ. ಇಡೀ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರು ಕನೆಕ್ಟ್ ಆಗುತ್ತಲೇ ಇರುತ್ತಾರಂತೆ.

    ನಿರ್ದೇಶಕ ಯಾರು.?

    ನಿರ್ದೇಶಕ ಯಾರು.?

    'ಕಳ್ಳ ಮಳ್ಳ ಸುಳ್ಳ' ಮತ್ತು 'ಆಟೋ ರಾಜ' ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದ ಉದಯ್ ಪ್ರಕಾಶ್ ಅವರು 'ಮೋದಿ' ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.

    ಉಪ್ಪಿಗಾಗಿ ತಯಾರು ಮಾಡಿದ ಕಥೆ

    ಉಪ್ಪಿಗಾಗಿ ತಯಾರು ಮಾಡಿದ ಕಥೆ

    ನಿರ್ದೇಶಕ ಉದಯ್ ಪ್ರಕಾಶ್ ಅವರು ಈ ಕಥೆಯನ್ನು ನಟ ಉಪೇಂದ್ರ ಅವರಿಗಾಗಿಯೇ ಮಾಡಿದ್ದು, ಅವರೇನಾದ್ರೂ ಬೇಡ ಎಂದಿದ್ರೆ ಈ ಸ್ಕ್ರಿಪ್ಟ್ ಕಸದ ಬುಟ್ಟಿ ಸೇರುತ್ತಿತ್ತಂತೆ. ಬರೋಬ್ಬರಿ 1 ವರ್ಷ ಕುಳಿತು ಉದಯ್ ಪ್ರಕಾಶ್ ಅವರು ಸ್ಕ್ರಿಪ್ಟ್ ಬರೆದಿದ್ದು, ಉಪ್ಪಿ ಅವರ ಒಪ್ಪಿಗೆ ಸಿಗುವಷ್ಟು ಹೊತ್ತಿಗೆ 8 ಬಾರಿ ತಿದ್ದಲಾಗಿದೆ.

    ಯಾವಾಗ ಶೂಟಿಂಗ್

    ಯಾವಾಗ ಶೂಟಿಂಗ್

    ಸೆಪ್ಟೆಂಬರ್ 18, ಉಪೇಂದ್ರ ಅವರ ಹುಟ್ಟುಹಬ್ಬದಂದು 'ಮೋದಿ' ಸಿನಿಮಾ ಸೆಟ್ಟೇರಿ, ಅಕ್ಟೋಬರ್ ನಿಂದ ಶೂಟಿಂಗ್ ಆರಂಭಿಸಲಿದೆ. ಅಂದು ಉಪ್ಪಿ ಅವರು ಇನ್ನೂ ಕೆಲವು ಹೊಸ ಸಿನಿಮಾಗಳು ಘೋಷಣೆಯಾಗಲಿವೆ. ಸದ್ಯಕ್ಕೆ ಉಪೇಂದ್ರ ಅವರು 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

    English summary
    Kannada Actor Upendra has his own choices when it comes to film making. When it comes to acting too actor Upendra has tried to be little different from the league. His latest movie is named as Modi. But this one is not a film made on PM Narendra Modi’s life story. The movie is directed by Uday Prakash.
    Wednesday, September 7, 2016, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X