»   » ವಿಷ್ಣು ಹುಟ್ಟುಹಬ್ಬಕ್ಕೆ ಯಶ್ ಕೊಡ್ತಾರೆ ಸರ್‌ಪ್ರೈಸ್

ವಿಷ್ಣು ಹುಟ್ಟುಹಬ್ಬಕ್ಕೆ ಯಶ್ ಕೊಡ್ತಾರೆ ಸರ್‌ಪ್ರೈಸ್

Written by: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರತಂಡ ಸದ್ದಿಲ್ಲದೆ ಒಂದು ಪ್ಲಾನ್ ಮಾಡಿಕೊಂಡಿದೆ. ಸ್ಯಾಂಡಲ್ ವುಡ್ ರಾಮಚಾರಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 64ನೇ ಹುಟ್ಟುಹಬ್ಬಕ್ಕೆ ಸಿನಿಪ್ರೇಮಿಗಳು ಅದರಲ್ಲೂ ವಿಷ್ಣು ಅಭಿಮಾನಿಗಳು ಥ್ರಿಲ್ಲಾಗುವಂತಹಾ ಒಂದು ಸರ್ಪ್ರೈಸ್ ಕೊಡಲಿದೆ.

'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ'ಯ ರಾಧಿಕಾ-ಯಶ್ ಜೋಡಿಯ ಹ್ಯಾಟ್ರಿಕ್ ಯಶಸ್ವಿ ಚಿತ್ರವಾಗೋ ಲಕ್ಷಣಗಳಿದ್ದು ಚಿತ್ರದ ಟೀಸರ್ ಒಂದನ್ನ ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಹೊರ ತರೋಕೆ ತಯಾರಿ ಮಾಡಿಕೊಳ್ತಿದೆ. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

Raja Huli movie still

ಇನ್ನು ರಾಮಚಾರಿಯಂತಹ ರಂಗು ರಂಗಾದ ಪಾತ್ರವನ್ನ ಬಹುಶಃ ಸ್ಯಾಂಡಲ್ ವುಡ್ ನಲ್ಲಿ ಯಶ್ ಅಲ್ಲದೇ ಬೇರ್ಯಾರು ಮಾಡಿದ್ರೂ ಸೂಪರ್ ಅನ್ನಿಸಲ್ಲ. ಆದರೆ ಗಜಕೇಸರಿಯ ಘರ್ಜನೆಯ ನಂತರ ಯಶ್ ಮತ್ತೊಮ್ಮೆ ತುಂಟ ತರಲೆ ಹೈದನಾಗಿ ಹಠಮಾರಿಯಾಗಿ ದುರ್ಗದ ರಾಮಚಾರಿಯಾಗಿ ಹೇಗಿರ್ತಾರೆ ಅನ್ನೋ ಕುತೂಹಲ ಯಶ್ ಅಭಿಮಾನಿಗಳಿಗಿದೆ.

ನಾಲ್ಕೈದು ಗೆಲುವಿನಿಂದ ರಿಯಲ್ 'ಗಜಕೇಸರಿ'ಯಾಗಿ ಮುನ್ನುಗ್ಗುತ್ತಿರೋ ಯಶ್ ಮಿಸ್ಟರ್ ರಾಮಚಾರಿಯಾಗಿ ರಾಧಿಕಾ ಮಿಸಸ್ ಆಗಿ ಮಾಡೋ ಮೋಡಿಯನ್ನ ನೋಡೋ ದಿನಗಳು ದೂರವಿಲ್ಲ.

English summary
Rocking Star Yash all set to give a surprise on Sahasasimha Dr.Vishnuvardhan's 64th birth anniversary. Yash and Radhika Pandit lead 'Mr & Mrs Ramachari' teaser should release on that day.
Please Wait while comments are loading...

Kannada Photos

Go to : More Photos