»   » ಸೋಲಿನಿಂದ ಕಂಗೆಟ್ಟಿರುವ ಯೋಗಿಗೆ ಕೈ ಹಿಡಿಯುತ್ತಾನಾ 'ಕಾಲಭೈರವ'?

ಸೋಲಿನಿಂದ ಕಂಗೆಟ್ಟಿರುವ ಯೋಗಿಗೆ ಕೈ ಹಿಡಿಯುತ್ತಾನಾ 'ಕಾಲಭೈರವ'?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲೂಸ್ ಮಾದ ಯೋಗೇಶ್ ಅವರಿಗೆ ಯಾಕೋ ಅದೃಷ್ಟ ಕೈ ಕೊಟ್ಟಿದೆ ಅಂತ ಅನಿಸುತ್ತಿದೆ. ಯಾಕೆಂದರೆ ಅವರು ಅಭಿನಯಿಸಿರುವ ಸಾಲು-ಸಾಲು ಚಿತ್ರಗಳು ಇನ್ನೂ ಬಿಡುಗಡೆ ಭಾಗ್ಯ ಕಾಣದೆ ಡಬ್ಬಾದಲ್ಲೇ ಅವಿತು ಕುಳಿತಿವೆ.

ಇತ್ತೀಚೆಗೆ ಬಿಡುಗಡೆ ಆಗಿರುವ ನಿರ್ದೇಶಕಿ ಸುಮನಾ ಕಿತ್ತೂರು ಅವರ 'ಕಿರಗೂರಿನ ಗಯ್ಯಾಳಿಗಳು' [ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು] ಚಿತ್ರದಲ್ಲಿ ಸೋನ್ಸ್ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಆಮೇಲೆ ಅವರದು ಅಂತ ಯಾವ ಸಿನಿಮಾ ಕೂಡ ತೆರೆಕಂಡಿಲ್ಲ.

ಆದರೆ ಇದೀಗ 2013ರಲ್ಲಿ ಸೆಟ್ಟೇರಿದ್ದ, ಲೂಸ್ ಮಾದ ಯೋಗಿ ಅಭಿನಯದ 'ಕಾಲಭೈರವ' ಎಂಬ ಚಿತ್ರ ಬಿಡುಗಡೆ ಸಜ್ಜಾಗಿದ್ದು, ಇದೇ ಶುಕ್ರವಾರ (ಮಾರ್ಚ್ 25) ರಂದು ತೆರೆ ಕಾಣಲಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಯೋಗೇಶ್ ಅವರು 'ಕಾಲಭೈರವ'ನಾಗಿ ಈ ವಾರ ತೆರೆ ಮೇಲೆ ವಿಜೃಂಭಿಸಲಿದ್ದಾರೆ. ನಿರ್ಮಾಪಕ ತಮ್ಮಯ್ಯ ಕುಮಾರೇಶ್ ಬಂಡವಾಳ ಹೂಡಿರುವ, ಕಳೆದ ಸುಮಾರು 3 ವರ್ಷಗಳಿಂದ ಬಿಡುಗಡೆ ಆಗದೇ ಇದ್ದ 'ಕಾಲಬೈರವ' ಚಿತ್ರಕ್ಕೆ ಈ ವಾರ ಕಾಲ ಕೂಡಿ ಬಂದಂತಿದೆ.[ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?]

ನಿರ್ದೇಶಕ ಶಿವಪ್ರಭು ಆಕ್ಷನ್-ಕಟ್ ಹೇಳಿರುವ ಯೋಗಿ ಅವರ 'ಕಾಲಭೈರವ' ಸಿನಿಮಾ ರಾಜ್ಯಾದ್ಯಂತ ಈ ವಾರ (ಮಾರ್ಚ್ 25) ತೆರೆ ಕಾಣುತ್ತಿದೆ. ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ನಟಿ ಅಖಿಲ ಕಿಶೋರ್ ಅವರು ಯೋಗಿ ಜೊತೆ ಡ್ಯುಯೆಟ್ ಹಾಡಿದ್ದಾರೆ.['ಭಾಗ್ಯರಾಜ್' ಚಿತ್ರಕ್ಕೆ ಮಹೇಶ್ ಹೀರೋ ಆಗಲು ಕಾರಣ ಯಾರು ಗೊತ್ತಾ?]

ಇನ್ನುಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಸಾಧು ಕೋಕಿಲಾ ಮುಂತಾದ ತಾರಾಬಳಗ ಇರುವ ಈ ಸಿನಿಮಾ ಲೂಸ್ ಮಾದ ಯೋಗಿಯ ಕೈ ಹಿಡಿಯುತ್ತಾ? ಅಥವಾ ಕೈ ಕೊಡುತ್ತಾ? ಅಂತ ಕಾದು ನೋಡಬೇಕಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

English summary
Kannada Movie 'Kalabhairava' all set to releases on March 25th. Kannada Actor Yogesh, Actress Akhila Kishore in the lead role. The movie is directed by Shivaprabhu.
Please Wait while comments are loading...

Kannada Photos

Go to : More Photos