»   » ಹಿಂದೂ, ಕ್ರೈಸ್ತ,ಇಸ್ಲಾಂಗೆ ಮತಾಂತರಗೊಂಡ ತಾರೆಗಳು

ಹಿಂದೂ, ಕ್ರೈಸ್ತ,ಇಸ್ಲಾಂಗೆ ಮತಾಂತರಗೊಂಡ ತಾರೆಗಳು

Written by: ಉದಯರವಿ
Subscribe to Filmibeat Kannada

ಒಂದು ಧರ್ಮ, ಜಾತಿಯನ್ನು ಒಪ್ಪಿ ಆಚರಿಸುತ್ತಿದ್ದವರು ಇನ್ನೊಂದು ಧರ್ಮದ ಕಡೆಗೆ ಆಕರ್ಷಿತರಾಗುವುದು ಸಹಜ. ಒಂದು ಧರ್ಮದಿಂದ ಇನ್ನೊಂದು ಧರ್ಮವನ್ನು ಒಪ್ಪುವುದು, ಮತಾಂತರಗೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ.

ಈ ರೀತಿ ಒಂದು ಧರ್ಮದಿಂದ ಇನ್ನೊಂದು ಧರ್ಮವನ್ನು ಸ್ವೀಕರಿಸಲು ಕಾರಣಗಳು ಏನೇ ಇರಬಹುದು. ಅದು ಅವರ ಧಾರ್ಮಿಕ ಸ್ವಾತಂತ್ರ್ಯ. ಇನ್ನೊಂದು ಮತವನ್ನು ಸ್ವೀಕರಿಸುವ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಶ್ರೀಸಾಮಾನ್ಯರು ಮತಾಂತರಗೊಂಡರೆ ಅದು ಅಷ್ಟಾಗಿ ಸುದ್ದಿಯಾಗಲ್ಲ.

ಅದೇ ಸಿನಿಮಾ ತಾರೆಗಳು ಮತಾಂತರಗೊಂಡರೆ ದೊಡ್ಡ ಸುದ್ದಿಯಾಗುತ್ತದೆ. ಹಾಲಿವುಡ್, ಬಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಸಿನಿಮಾ ಕ್ಷೇತ್ರಗಳಲ್ಲೂ ಮತಾಂತರಗೊಳ್ಳುತ್ತಿರುವ ತಾರೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಲಿವುಡ್ ವರೆಗೂ ಹೋಗುವುದು ಬೇಡ. ಇಲ್ಲೇ ನಮ್ಮ ದಕ್ಷಿಣದಲ್ಲಿ ಮತಾಂತರಗೊಂಡ ತಾರೆಗಳ ಮೇಲೊಂದು ಇಣುಕು ನೋಟ ಇಲ್ಲಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಗ್ಮಾ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಗ್ಮಾ

ಮುಸ್ಲಿಂ ತಾಯಿ, ಹಿಂದೂ ತಂದೆಗೆ ಜನ್ಮಿಸಿದ ನಗ್ಮಾ...ಪೋಷಕರ ಧರ್ಮಗಳಿಗೆ ಬದಲಾಗಿ ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾದರು. 2007ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಬಳಿಕ ಹಿಂದೂ ಧರ್ಮದ ಕಡೆಗೆ ಆಕರ್ಷಿತರಾದರು.

ಇಸ್ಲಾಂ ಸ್ವೀಕರಿಸಿದ ಎ ಆರ್ ರೆಹಮಾನ್

ಇಸ್ಲಾಂ ಸ್ವೀಕರಿಸಿದ ಎ ಆರ್ ರೆಹಮಾನ್

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ರೆಹಮಾನ್ ಮೂಲ ಹೆಸರು ಎ.ಎಸ್.ದಿಲೀಪ್ ಕುಮಾರ್. ಬಹಳ ಚಿಕ್ಕ ವಯಸ್ಸಿನಲ್ಲೇ (1989) ಮತಾಂತಗೊಂಡರು. ಬಳಿಕ ತನ್ನ ಹೆಸರನ್ನು ಅಲ್ಲಾ ರಖಾ ರೆಹಮಾನ್ ಎಂದು ಬದಲಾಯಿಸಿಕೊಂಡರು.

ಹಿಂದೂ ಧರ್ಮ ಸ್ವೀಕರಿಸಿದ ನಯನತಾರಾ

ಹಿಂದೂ ಧರ್ಮ ಸ್ವೀಕರಿಸಿದ ನಯನತಾರಾ

ಕ್ರೈಸ್ತವ ಧರ್ಮಕ್ಕೆ ಸೇರಿದ ದಂಪತಿಗಳಿಗೆ ಜನ್ಮಿಸಿದ ನಯನತಾರಾ ಮೂಲ ಹೆಸರು ಡಯಾನಾ ಮರಿಯಂ ಕುರಿಯನ್. ಬಣ್ಣ ಹಚ್ಚಿದ ಮೇಲೆ ತಮ್ಮ ಹೆಸರನ್ನು ನಯನತಾರಾ ಎಂದು ಬದಲಾಯಿಸಿಕೊಂಡರು. ಡಾನ್ಸ್ ಮಾಸ್ಟರ್ ಪ್ರಭುದೇವ ಅವರನ್ನು ಪ್ರೇಮಿಸಿದ ನಯನಿ ಅವರನ್ನು ವರಿಸಲು ಹಿಂದೂ ಧರ್ಮ ಸ್ವೀಕರಿಸಿದರು. ಆದರೆ ಅವರಿಬ್ಬರಿಗೂ ವಿವಾಹ ಭಾಗ್ಯ ಲಭಿಸಲಿಲ್ಲ.

 ಇಸ್ಲಾಂಗೆ ಯುವನ್ ಶಂಕರ್ ರಾಜಾ

ಇಸ್ಲಾಂಗೆ ಯುವನ್ ಶಂಕರ್ ರಾಜಾ

ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಇತ್ತೀಚೆಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು.

ಇಸ್ಲಾಂಗೆ ಶರಣಾದ ತಾರೆ ಮೋನಿಕಾ

ಇಸ್ಲಾಂಗೆ ಶರಣಾದ ತಾರೆ ಮೋನಿಕಾ

ಕನ್ನಡ, ತಮಿಳು ತಾರೆ ಮೋನಿಕಾ ಇತ್ತೀಚೆಗೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತಗೊಂಡರು. ಮತಾಂತಗೊಂಡ ಬಳಿಕ ತನ್ನ ಹೆಸರನ್ನು ಎಂ.ಜಿ.ರಹೀಮಾ ಎಂದು ಬದಲಾಯಿಸಿಕೊಂಡರು.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖುಷ್ಬೂ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖುಷ್ಬೂ

ಮುಸ್ಲಿಂ ಕುಟುಂಬದಲ್ಲಿ ಜನ್ಮಿಸಿದ 'ರಣಧೀರ'ನ ರಾಣಿ ಖುಷ್ಬೂ ತಮಿಳು ನಟ ಸುಂದರ್ ಅವರನ್ನು ವರಿಸಿದರು. ಯಾರೊಬ್ಬರ ಬಲವಂತಕ್ಕೆ ಮಣಿಯದೆ ತನ್ನಿಚ್ಛೆಯಂತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

English summary
Over the centuries, people across the world have changed their religions and found faith in other than their mother religions. When it comes to film fraternity, we have seen many examples of it mainly in Hollywood and Bollywood.
Please Wait while comments are loading...

Kannada Photos

Go to : More Photos