»   » ಅಮೂಲ್ ಬೇಬಿ ಅಮೂಲ್ಯಾ ನಟ ದರ್ಶನ್ ತರಹ?

ಅಮೂಲ್ ಬೇಬಿ ಅಮೂಲ್ಯಾ ನಟ ದರ್ಶನ್ ತರಹ?

Written by: ಜೀವನರಸಿಕ
Subscribe to Filmibeat Kannada

ಕನ್ನಡದ ಅಮೂಲ್ಯ ಐಸೂ ವೆರಿ ವೆರಿ ಸಿಂಪಲ್. ಅಮೂಲ್ಯ ಅಮೂಲ್ ಬೇಬಿ ತರಹ ಪಟಪಟನೆ ಮಾತನಾಡೋ ಹುಡುಗಿ. ಆದರೆ ಇತ್ತೀಚೆಗೆ ಯಾಕೋ ಈಗ ಮಾತು ಕಡಿಮೆ ಮಾಡಿದ್ದಾರೆ. ನಿರ್ದೇಶಕ ರತ್ನಜರ ಕಿಸ್ಸಿಂಗ್ ಕಾಂಟ್ರವರ್ಸಿ ಆದಮೇಲೆ ಮತ್ತೊಂದು ತಮಿಳು ನಿರ್ದೇಶಕರ ಜೊತೆ ವಿವಾದ ಮಾಡ್ಕೊಂಡು ಸಿನಿಮಾವನ್ನೇ ಬಿಟ್ಟು ಬಿಡ್ತೀನಿ ಅಂದಿದ್ರು.

ಆದರೆ ಒಮ್ಮೆ ಹಚ್ಚಿದ ಬಣ್ಣದ ಗೀಳು ಬಿಡಬೇಕಲ್ಲ ಮತ್ತೆ ತಗ್ಲಾಕ್ಕೊಳ್ತು. ಸ್ಯಾಂಡಲ್ ವುಡ್ ಗೂ ಈ ಬೆಣ್ಣೆದೋಸೇನಾ ಕಳ್ಕೊಳ್ಳೋಕೆ ಇಷ್ಟ ಇರಲ್ಲಿಲ್ಲ ಅನ್ನಿ. ಅಷ್ಟರಲ್ಲಿ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಶ್ರಾವಣಿ ಸುಬ್ರಹ್ಮಣ್ಯ' ಶುರುವಾಯ್ತು. ಸಿನಿಮಾ ಈಗ ರಿಲೀಸ್ಗೂ ರೆಡಿಯಾಗಿದೆ. [ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಅಮೂಲ್ಯ]


ಸಿನಿಮಾ ಮಾಡ್ತಿರೋದೇ ಸ್ಟಡೀ ನಡುವೆ ಟೈಮ್ ಮಾಡ್ಕೊಂಡು. ಹಾಗಾಗಿ ಮಾತು ಕಡಿಮೇನಾ? ಇಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ತರಹ ಮಾತು ಕಡಿಮೆ ಹೆಚ್ಚು ದುಡಿಮೆ ಅಂತಿದ್ದಾರಾ ಗೊತ್ತಿಲ್ಲ.

ತನ್ನ ಮಗುವಿನಂತಹ ಮಾತು ಮುಖ ಮತ್ತು ಮುಗ್ಧತೆಯಿಂದಾನೇ ಇಷ್ಟವಾದ ನಟಿ ಈ ಅಮೂಲ್ಯಾ. ಏನೇ ಆಗ್ಲಿ ಮಾತು ಕಡಿಮೆ ಆದ್ರೂ ಪರ್ವಾಗಿಲ್ಲ. ಸಿನಿಮಾ ಮಾಡ್ಲಿ ಅಂತಾರೆ ಅಮೂಲ್ ಬೇಬಿ ಅಭಿಮಾನಿಗಳು.

English summary
Kannada actress Amoolya follows in footsteps of Challenging Star Darshan. The actress believes in Speech is silver, silence is golden. Now the actress is busy in promotions of Shravani Subramanya with Golden Star Ganesh.
Please Wait while comments are loading...

Kannada Photos

Go to : More Photos