»   » ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ್ರು ನಟಿ 'ಜಾಕಿ' ಭಾವನಾ.!

ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ್ರು ನಟಿ 'ಜಾಕಿ' ಭಾವನಾ.!

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಜಾಕಿ', ಕಿಚ್ಚ ಸುದೀಪ್ ಜೊತೆ 'ವಿಷ್ಣುವರ್ಧನ', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ರೋಮಿಯೋ' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ 'ನಾಯಕಿ' ಆಗಿ ಮಿಂಚಿದ್ದ ನಟಿ ಭಾವನಾ ಇಂದು ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದು ಗಾಸಿಪ್ ಇರಬಹುದು ಅಂತ ಮೂಗು ಮುರಿಯಬೇಡಿ. ಈ ಸುದ್ದಿ ಹಂಡ್ರೆಡ್ ಪರ್ಸೆಂಟ್ ನಿಜ. ಬೇಕಾದ್ರೆ ನೀವೇ ಈ ಫೋಟೋ ನೋಡಿ.... [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]

ನಟಿ ಭಾವನಾ ನಿಶ್ಚಿತಾರ್ಥ

ನಟಿ ಭಾವನಾ ನಿಶ್ಚಿತಾರ್ಥ

ನಟಿ ಭಾವನಾ ನಿಶ್ಚಿತಾರ್ಥ ಇಂದು ಕೊಚ್ಚಿಯಲ್ಲಿ ಸರಳವಾಗಿ ನೆರವೇರಿದೆ. ಅದಕ್ಕೆ ಸಾಕ್ಷಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿರುವ ಈ ಫೋಟೋ.

ನಟಿ ಭಾವನಾ ವರಿಸಲಿರುವ ಕುವರ ಯಾರು.?

ನಟಿ ಭಾವನಾ ವರಿಸಲಿರುವ ಕುವರ ಯಾರು.?

ನಟಿ ಭಾವನಾ ರವರ ಮದುವೆ ನಿಶ್ಚಯವಾಗಿರುವುದು ಬೇರೆ ಯಾರ ಜೊತೆಗೋ ಅಲ್ಲ. ಕನ್ನಡದ ಹುಡುಗ ನವೀನ್ ಜೊತೆ.! ['ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?]

ಯಾರೀ ನವೀನ್.?

ಯಾರೀ ನವೀನ್.?

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಜೊತೆಯಾಗಿ ನಟಿಸಿದ 'ರೋಮಿಯೋ' ಚಿತ್ರ ಗೊತ್ತಲ್ವಾ.? ಆ 'ರೋಮಿಯೋ' ಚಿತ್ರಕ್ಕೆ ಇದೇ ನವೀನ್ ಬಂಡವಾಳ ಹಾಕಿದ್ದರು. ಅರ್ಥಾತ್, ಕನ್ನಡ ಚಿತ್ರಗಳ ನಿರ್ಮಾಪಕ ಈ ನವೀನ್. [ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟ ಜಾಕಿ ಭಾವನಾ!]

'ಹೀರೋ' ಆಗಿದ್ದ ನವೀನ್

'ಹೀರೋ' ಆಗಿದ್ದ ನವೀನ್

ನಿರ್ಮಾಪಕ ಆಗುವ ಮೊದಲು ನವೀನ್ ಅವರು ನಟಿ ರಾಗಿಣಿ ದ್ವಿವೇದಿ ಅವರ ಜೊತೆ 'ನಾಯಕ' ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಅದೊಂದೇ ಸಿನಿಮಾದಲ್ಲಿ ನವೀನ್ ನಟಿಸಿದ್ದು ಬಿಟ್ಟರೆ, ಬೇರೆ ಯಾವ ಸಿನಿಮಾಗಾಗಿಯೂ ನವೀನ್ ಬಣ್ಣ ಹಚ್ಚಲಿಲ್ಲ.

ನಾಲ್ಕು ವರ್ಷಗಳ ಪ್ರೀತಿ

ನಾಲ್ಕು ವರ್ಷಗಳ ಪ್ರೀತಿ

ಅಂದ್ಹಾಗೆ, ನಟಿ ಭಾವನಾ ಹಾಗೂ ನವೀನ್ ರವರ ಪ್ರೇಮಕ್ಕೆ ನಾಲ್ಕು ವರ್ಷಗಳ ಇತಿಹಾಸವಿದೆ. ಮೊದಮೊದಲು ಆಪ್ತ ಸ್ನೇಹಿತರಾಗಿದ್ದವರು, ನಂತರ ಪ್ರೇಮಿಗಳಾದರು.

ನವೀನ್ ಹಿನ್ನಲೆ...

ನವೀನ್ ಹಿನ್ನಲೆ...

'ರೋಮಿಯೋ' ನಿರ್ಮಾಪಕ ನವೀನ್ ಅವರ ತಂದೆ ಉದ್ಯಮಿ. ಬಿಸಿನೆಸ್ ಬ್ಯಾಕ್ ಗ್ರೌಂಡ್ ಹೊಂದಿದ್ದಾರೆ ನವೀನ್.

2014ರಲ್ಲೇ ಮದುವೆ ಆಗ್ಬೇಕಿತ್ತು.!

2014ರಲ್ಲೇ ಮದುವೆ ಆಗ್ಬೇಕಿತ್ತು.!

ಹಾಗ್ನೋಡಿದ್ರೆ, ನವೀನ್-ಭಾವನಾ 2014ರಲ್ಲೇ ಮದುವೆ ಆಗ್ಬೇಕಿತ್ತು. ಆದ್ರೆ, ಭಾವನಾ ಕೆಲ ಚಿತ್ರಗಳಿಗೆ ಕಮಿಟ್ ಆಗಿದ್ರಿಂದ ಮದುವೆ ದಿನಾಂಕ ಮುಂದೂಡುತ್ತಲೇ ಇತ್ತು.

ಮದುವೆ ಬಗ್ಗೆ ಆಗಾಗ ಗುಲ್ಲು

ಮದುವೆ ಬಗ್ಗೆ ಆಗಾಗ ಗುಲ್ಲು

ನಟಿ ಭಾವನಾ ಇನ್ನೇನು ಮದುವೆ ಆಗಿಬಿಡ್ತಾರೆ ಅಂತ ಆಗಾಗ ಮಾಲಿವುಡ್ ಅಂಗಳದಿಂದ ಗಾಸಿಪ್ ಹಬ್ಬುತ್ತಿತ್ತು. ಆಗೆಲ್ಲ 'ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ' ಅಂತ ಹೇಳುತ್ತಿದ್ದ ಭಾವನಾ ಇಂದು ಯಾವುದೇ ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗದೆ, ದಿಢೀರ್ ಅಂತ ನಿರ್ಮಾಪಕ ನವೀನ್ ರವರ ಜೊತೆ ಭಾವನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮದುವೆ ಯಾವಾಗ.?

ಮದುವೆ ಯಾವಾಗ.?

ಇಂದು ಕೊಚ್ಚಿಯಲ್ಲಿ ಭಾವನಾ-ನಿಶ್ಚಿತಾರ್ಥ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ. ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

ಭಾವನಾ ಕೈಯಲ್ಲಿ ಇನ್ನೂ ಚಿತ್ರಗಳಿವೆ.!

ಭಾವನಾ ಕೈಯಲ್ಲಿ ಇನ್ನೂ ಚಿತ್ರಗಳಿವೆ.!

ಭಾವನಾ ಕೈಯಲ್ಲಿ ಮಲೆಯಾಳಂನ 'ಆಡಮ್', 'ಹನಿ ಬೀ-2' ಚಿತ್ರಗಳಿದ್ದರೆ, ಕನ್ನಡದ 'ಟಗರು' ಚಿತ್ರಕ್ಕೂ ಭಾವನಾ ಸಹಿ ಹಾಕಿದ್ದಾರೆ. ಈ ಎಲ್ಲ ಚಿತ್ರಗಳು ಮುಗಿದ ಮೇಲೆ ಭಾವನಾ ಹಸೆಮಣೆ ಏರುವ ಸಾಧ್ಯತೆ ಇದೆ. ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕನ್ನಡದಲ್ಲಿ ಭಾವನಾ

ಕನ್ನಡದಲ್ಲಿ ಭಾವನಾ

ಮೂಲತಃ ಮಲೆಯಾಳಂ ನಟಿ ಆಗಿದ್ದರೂ, ಕನ್ನಡ ಸಿನಿ ಪ್ರಿಯರಿಗೆ ಭಾವನಾ ಪರಿಚಿತರು. 'ರೋಮಿಯೋ', 'ವಿಷ್ಣುವರ್ಧನ', 'ಬಚ್ಚನ್', 'ಟೋಪಿವಾಲಾ' ದಂತಹ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ನಲ್ಲೂ ಭಾವನಾ ಖ್ಯಾತಿ ಪಡೆದಿದ್ದಾರೆ.

English summary
Kannada Actress Bhavana got engaged today (March 9th) to Kannada Producer Naveen at a private function in Kochi.
Please Wait while comments are loading...

Kannada Photos

Go to : More Photos