»   » ನಿರ್ಮಾಪಕ ನವೀನ್ ಜೊತೆ 'ಜಾಕಿ' ಭಾವನಾ ಮದುವೆ ಯಾವಾಗ.? ಎಲ್ಲಿ.?

ನಿರ್ಮಾಪಕ ನವೀನ್ ಜೊತೆ 'ಜಾಕಿ' ಭಾವನಾ ಮದುವೆ ಯಾವಾಗ.? ಎಲ್ಲಿ.?

Posted by:
Subscribe to Filmibeat Kannada

''ಬಹುಭಾಷಾ ನಟಿ ಭಾವನಾ ಇನ್ನೇನು ಮದುವೆ ಆಗಲಿದ್ದಾರೆ'' ಅಂತ ಮಾಲಿವುಡ್ ಅಂಗಳದಿಂದ ಆಗಾಗ ಗಾಳಿಸುದ್ದಿ ಹಬ್ಬುತ್ತಲೇ ಇತ್ತು. ಅದಕ್ಕೆಲ್ಲ, ''ಸದ್ಯಕ್ಕೆ ಮದುವೆಯ ಯೋಚನೆ ಇಲ್ಲ'' ಅಂತ ಸ್ಪಷ್ಟನೆ ನೀಡುತ್ತಲೇ ಬರುತ್ತಿದ್ದ ನಟಿ ಭಾವನಾ ನಿನ್ನೆ (ಮಾರ್ಚ್ 9) ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡುಬಿಟ್ಟರು.

ಅಲ್ಲದೇ, ಇಷ್ಟು ದಿನ ತಮ್ಮ 'ರಾಜಕುಮಾರ' ಯಾರು ಎಂಬ ಗುಟ್ಟನ್ನು ಬಿಟ್ಟುಕೊಡದ ನಟಿ ಭಾವನಾ ನಿನ್ನೆ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಇನಿಯ ಕನ್ನಡ ಚಿತ್ರ ನಿರ್ಮಾಪಕ ನವೀನ್ ಅಂತ ಇಡೀ ಜಗತ್ತಿಗೆ ಸಾರಿದ್ದಾರೆ.

ನಟಿ ಭಾವನಾ-ನವೀನ್ ಮದುವೆ ಯಾವಾಗ.?

ಮಲಯಾಳಂ ಮಾಧ್ಯಮಗಳ ಪ್ರಕಾರ, ನಟಿ ಭಾವನ ಹಾಗೂ ನಿರ್ಮಾಪಕ ನವೀನ್ ರವರ ಮದುವೆ ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ.

ಮದುವೆ ಎಲ್ಲಿ.?

ಮೂಲಗಳ ಪ್ರಕಾರ, ನಟಿ ಭಾವನಾ-ನವೀನ್ ರವರ ಮದುವೆ ಬೆಂಗಳೂರಿನಲ್ಲಿ ನಡೆಯಲಿದೆ.

ಸರಳವಾಗಿ ನಡೆದ ನಿಶ್ಚಿತಾರ್ಥ

ನಿನ್ನೆ (ಮಾರ್ಚ್ 9) ನಟಿ ಭಾವನಾ-ನವೀನ್ ರವರ ನಿಶ್ಚಿತಾರ್ಥ ಕೊಚ್ಚಿಯ ತ್ರಿಶೂರ್ ನಲ್ಲಿರುವ ಭಾವನಾ ಸ್ವಗೃಹದಲ್ಲಿ ಸರಳವಾಗಿ ನೆರವೇರಿತು.

ಆಪ್ತರಿಗಷ್ಟೇ ಆಹ್ವಾನ

ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ ನಟಿ ಭಾವನಾ ಉಭಯ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದರು.

ನಿಶ್ಚಿತಾರ್ಥದಲ್ಲಿ ಯಾರ್ಯಾರು ಭಾಗಿ.?

ಮಲಯಾಳಂ ಚಿತ್ರರಂಗದ ಮಂಜು ವಾರಿಯರ್, ಸಂಯುಕ್ತಾ ವರ್ಮಾ ಸೇರಿದಂತೆ 16 ಮಂದಿ ಮಾತ್ರ ಭಾವನಾ-ನವೀನ್ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.

ಭಾವನ ವರಿಸಲಿರುವ ನವೀನ್ ಕುರಿತು...

ಭಾವನಾ ವರಿಸಲಿರುವ ಕುವರ ನವೀನ್ ಕುರಿತು ಸಂಪೂರ್ಣ ವಿವರ ಇಲ್ಲಿದೆ ಓದಿರಿ....[ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ್ರು ನಟಿ 'ಜಾಕಿ' ಭಾವನಾ.!]

English summary
Kannada Actress Bhavana got engaged to Kannada Producer Naveen at a private function in Kochi. According to the latest reports, Bhavana to get married in August 2017.
Please Wait while comments are loading...

Kannada Photos

Go to : More Photos