»   » ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?

ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?

Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ 'ಜಾಗ್ವಾರ್'ನ ಶೂಟಿಂಗ್ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನವರಿ 6 ರಿಂದ ಅಧಿಕೃತವಾಗಿ ಶೂಟಿಂಗ್ ಪ್ರಾರಂಭಗೊಳ್ಳಲಿದೆ.

ಅಂದಹಾಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಸಿನಿಮಾಕ್ಕೆ ನಾಯಕಿ ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅದಕ್ಕೂ ತೆರೆ ಬೀಳುವ ಸಮಯ ಹತ್ತಿರವಾಗಿದೆ.[ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಯಾರು?]

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಶಿಷ್ಯ ನಿರ್ದೇಶಕ ಮಹದೇವ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಜಾಗ್ವಾರ್' ಸಿನಿಮಾದಲ್ಲಿ ದೀಪ್ತಿ ಸತಿ ಎಂಬ ಚೆಲುವೆ ನಟ ನಿಖಿಲ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಎಂದು ಮಾಹಿತಿಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.

ನಿಖಿಲ್ ಕುಮಾರ್ ಅವರ ಚೊಚ್ಚಲ ಸಿನಿಮಾದಲ್ಲಿ ಹೊಸ ಪ್ರತಿಭೆಯ ಅನಾವರಣ ಆಗಲಿದೆ. ಜೊತೆಗೆ ಮಾಡೆಲಿಂಗ್ ಹಿನ್ನಲೆ ಇರುವ ಮುಂಬೈ ಬೆಡಗಿ ನಿಖಿಲ್ ಅವರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಸಿನಿಮಾ ಸೆಟ್ಟೇರಿದಾಗ ಸುದ್ದಿಯಾಗಿತ್ತು.[ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!]

ಈಗಾಗಲೇ ನಾಯಕಿಯ ಫೋಟೋ ಶೂಟ್ ನಡೆದಿದ್ದು, ಬಹುತೇಕ ನಾಯಕಿ ದೀಪ್ತಿ ಸತಿ ಎಂದು ಅಂತಿಮಗೊಳಿಸಲಾಗಿದೆ. ಚಿತ್ರದ ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಘೋಷಿಸುವುದು ಬಾಕಿ ಇದೆ. ಈ ನಟಿಯ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮಾಡೆಲ್ ದೀಪ್ತಿ ಸತಿ

ಮಾಡೆಲ್ ದೀಪ್ತಿ ಸತಿ

ಮಾಡೆಲ್ ಆಗಿ ಬಣ್ಣದ ವೃತ್ತಿ ಬದುಕಿಗೆ ಕಾಲಿಟ್ಟ ಬೆಡಗಿ ನಟಿ ದೀಪ್ತಿ ಸತಿ ಅವರು ಮುಂಬೈ ಮೂಲದವರು. ದೀಪ್ತಿ ಅವರ ತಾಯಿ ಮಾಧುರಿ ಸಾತಿ ಅವರು ಮೂಲತಃ ಕೊಚ್ಚಿ ಕೇರಳದವರಾಗಿರುವುದರಿಂದ ಮಲಯಾಳಂ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಮಿಂಚಿದರು.[ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು]

ಮಲಯಾಳಂ 'ನೀನಾ' ಚೊಚ್ಚಲ ಸಿನಿಮಾ

ಮಲಯಾಳಂ 'ನೀನಾ' ಚೊಚ್ಚಲ ಸಿನಿಮಾ

ಕಳೆದ ವರ್ಷ ಮೇ ತಿಂಗಳಿನಲ್ಲಿ ತೆರೆ ಕಂಡ, ನಿರ್ದೇಶಕ ಲಾಲ್ ಜೋಸ್ ಆಕ್ಷನ್-ಕಟ್ ಹೇಳಿರುವ ಮಲಯಾಳಂನ 'ನೀನಾ' ಎಂಬ ಸಿನಿಮಾದಲ್ಲಿ ದೀಪ್ತಿ ಸತಿ ಅವರು ಕಾಣಿಸಿಕೊಳ್ಳುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಚಿತ್ರದಲ್ಲಿ ಇವರು ಗಂಡು ಬೀರಿ ಪಾತ್ರದಲ್ಲಿ ರಾಯಲ್ ಎನ್ ಫೀಲ್ಡ್ ರೈಡ್ ಮಾಡಿ ಜನಮನ ಗೆದ್ದಿದ್ದರು.

ಮಿಸ್ ಕೇರಳ 2012

ಮಿಸ್ ಕೇರಳ 2012

ಅಂದಹಾಗೆ ಮಾಡೆಲ್ ಆಗಿರುವ ದೀಪ್ತಿ ಅವರು 2012 ರಲ್ಲಿ ಮಿಸ್ ಕೇರಳ ಪಟ್ಟವನ್ನು ಹೊತ್ತುಕೊಂಡಿದ್ದರು. ಜೊತೆಗೆ ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಕೂಡ ಬಾಚಿಕೊಂಡಿದ್ದಾರೆ.

ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವೀಧರೆ

ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವೀಧರೆ

ಪ್ರಸ್ತುತ ಮಾಡೆಲ್ ಆಗಿ ನಟಿಯಾದ ದೀಪ್ತಿ ಅವರು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಕಥಕ್ ಮತ್ತು ಭರತನಾಟ್ಯವನ್ನು ಲೀಲಾಜಾಲವಾಗಿ ಮಾಡುತ್ತಾರೆ. ಇದೀಗ ಸದ್ಯಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.

ವಿಜೇಂದ್ರ ಪ್ರಸಾದ್ ಅವರ ಕಥೆ

ವಿಜೇಂದ್ರ ಪ್ರಸಾದ್ ಅವರ ಕಥೆ

'ಚೆನ್ನಾಂಬಿಕ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ಜಾಗ್ವಾರ್' ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದಾರೆ. 'ಜಾಗ್ವಾರ್' ಚಿತ್ರಕ್ಕೆ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ತೆಲುಗು ನಟ ಜಗಪತಿ ಬಾಬು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ನಟಿ ಕತ್ರಿನಾ ಕೈಫ್ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಸಂಭವವಿದೆ.

WHAT OTHERS ARE READING
English summary
As Nikhil Kumar’s Kannada Movie 'Jaguar' directed by Mahadev will officially go on floors from January 6 in Mysuru, it seems, the makers have finalised their heroine. They have zeroed in on a fresh talent Deepti Sati, who will foray into Kannada with this film. She will be seen opposite hero Nikhil.
Please Wait while comments are loading...

Kannada Photos

Go to : More Photos