»   » ತ್ರಿವರ್ಣ ಧ್ವಜವನ್ನೇ ಬಿಕಿನಿ ಮಾಡಿಕೊಂಡ ತಾರೆ ಅರೆಸ್ಟ್

ತ್ರಿವರ್ಣ ಧ್ವಜವನ್ನೇ ಬಿಕಿನಿ ಮಾಡಿಕೊಂಡ ತಾರೆ ಅರೆಸ್ಟ್

Posted by:
Subscribe to Filmibeat Kannada

Actress Gehna Vashist
ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ...ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು...ಎಂದು ಪುಟಾಣಿಗಳು ಕೂಡ ಹಾಡಿ ಹೊಗಳುವ ನಮ್ಮ ರಾಷ್ಟ್ರಧ್ವಜವನ್ನೇ ಕಿರುತೆರೆ ತಾರೆಯೊಬ್ಬಳು ಬಿಕಿನಿಯಾಗಿ ಧರಿಸಿ ಅವಮಾನಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ತಾರೆ, ರೂಪದರ್ಶಿ ಗೆಹನಾ ವಶಿಷ್ಠ್ ಅವರನ್ನು ಪುಣೆ ಪೊಲೀಸರು ಭಾನುವಾರ (ಆ.19) ಬಂಧಿಸಿದ್ದಾರೆ. ಲೋಕ ಜನಶಕ್ತಿ ಪಕ್ಷದ ನ್ಯಾಶನಲ್ ಸೆಕ್ರೆಟರಿ ವಿ.ರವೀಂದ್ರ ಬ್ರಹ್ಮೋ ಅವರು ಪೊಲೀಸರಿಗೆ ಕೊಟ್ಟ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ.

ಈ ರೀತಿ ರಾಷ್ಟ್ರಧ್ವಜವನ್ನು ಬಿಕಿನಿಯಾಗಿ ತೊಟ್ಟು ಅಪಮಾನಿಸಿದ ಈಕೆಗೆ ಈ ಹಿಂದೆಯೇ ಗೂಸಾ ಬಿದ್ದಿತ್ತು. ಪ್ರಚಾರಕ್ಕಾಗಿ ಹಪಹಪಿಸಿ ಈ ರೀತಿ ಮಾಡುತ್ತಿರುವುದು ನಿಜಕ್ಕೂ ಖಂಡನೀಯ.

ಭಾರತದ ಅಥ್ಲೇಟ್ ಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದರೆ ತಾವು ಬೆತ್ತಲೆ ಓಡುವುದಾಗಿ ಇತ್ತೀಚೆಗೆ ಈಕೆ ಪ್ರಕಟಿಸಿದ್ದರು. ಅಷ್ಟರಲ್ಲೇ ಈ ರೀತಿಯ ಫೋಟೋಗಳ ಮೂಲಕ ದರ್ಶನ ನೀಡಿ ಎಲ್ಲರ ಗಮನವನ್ನೂ ಸೆಳೆಯುವ ಪ್ರಯತ್ನ ಮಾಡಿದ್ದರು.

ಕೆಲ ವರ್ಷಗಳ ಹಿಂದೆ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ತಾರೆ ಮಂದಿರಾ ಬೇಡಿ ಸೀರೆ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಧ್ವಜವನ್ನೇ ಸೀರೆ ತರಹ ಉಟ್ಟುಕೊಂಡು ಬಂದಿದ್ದರು ಮಂದಿರಾ. ಆದರೆ ಆಕೆಯ ಸೀರೆಯ ಮೇಲೆ ಕ್ರಿಕೆಟ್ ಆಡುತ್ತಿದ್ದ ಎಲ್ಲ ರಾಷ್ಟ್ರಗಳ ಧ್ವಜಗಳು ಪ್ರಿಂಟ್ ಆಗಿದ್ದವು.

ಮಂದಿರಾ ಸೀರೆ ಮೇಲೆ ಹಲವು ದೇಶಗಳ ರಾಷ್ಟ್ರಧ್ವಜಗಳು ಮೂಡಿಬಂದಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಮಂದಿರಾ ಬೇಡಿ ಬಗ್ಗೆಯೂ ಅಸಹನೆಯ ಕಟ್ಟೆ ಒಡೆದಿತ್ತು. ಆದರೆ ಆಕೆಯ ಮೇಲೆ ದಾಳಿ ನಡೆದಿರಲಿಲ್ಲ ಎಂಬುದು ಸಮಾಧಾನದ ಸಂಗತಿ. (ಏಜೆನ್ಸೀಸ್)

English summary
The Pune police have arrested a small time actress and Mumbai model Vandana Ravindra Tiwari alias Gehna Vashist from her residence for wearing bikini made by national flag during a photo –shoot on a beach recently.
Please Wait while comments are loading...

Kannada Photos

Go to : More Photos