ಏಳು ವರ್ಷಗಳ ಬಳಿಕ ಶಿವಣ್ಣನ ಜೊತೆ ಜಯಸುಧಾ

Posted by:

ದಕ್ಷಿಣ ಚಿತ್ರರಂಗದ ಮೋಹಕ ತಾರೆ ಜಯಸುಧಾ (55) ಅವರು ಏಳು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಭಜರಂಗಿ ಚಿತ್ರದ ಬಳಿ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ ವಜ್ರಕಾಯ ಚಿತ್ರದಲ್ಲಿ ಜಯಸುಧಾ ಅವರು ಪ್ರಮುಖ ಪಾತ್ರವನ್ನು ಪೋಷಿಸಲಿದ್ದಾರೆ.

ಈ ಹಿಂದೆ ಶಿವಣ್ಣ ಜೊತೆ ಜಯಸುಧಾ ಅವರು 'ತಾಯಿಯ ಮಡಿಲು' ಚಿತ್ರದಲ್ಲಿ ಅಭಿನಯಿಸಿದ್ದರು. ಕಲಾ ಸಾಮ್ರಾಟ್ ಎಸ್ ನಾರಾಯಣ ಆಕ್ಷನ್ ಕಟ್ ಹೇಳಿದ್ದ ಚಿತ್ರ ಅದು. ಇದೀಗ ಪುನಃ ಜಯಸುಧಾ ಅವರು ಶಿವಣ್ಣನ ಜೊತೆ ಅಭಿನಯಿಸುತ್ತಿದ್ದಾರೆ. ಆದರೆ ಅವರ ಪಾತ್ರ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕು. [ಹ್ಯಾಟ್ರಿಕ್ ಹೀರೋ, ಹರ್ಷ ಹೊಸ ಚಿತ್ರ 'ವಜ್ರಕಾಯ']


ಜಯಸುಧಾ ಅವರು ತೆಲುಗು ಚಿತ್ರಗಳಲ್ಲಿ ತಾಯಿ ಪಾತ್ರಗಳಿಗೆ ಜೀವತುಂಬುತ್ತಿದ್ದಾರೆ. ಶಿವಣ್ಣ ಹಾಗೂ ಜಯಸುಧಾ ಅವರ ವಯಸ್ಸಿನಲ್ಲಿ ಅಂತಹ ಅಂತರ ಇಲ್ಲದಿದ್ದರೂ ಇವರಿಬ್ಬರೂ ತಾಯಿ ಮಗನಾಗಿ ತೆರೆಯ ಮೇಲೆ ನೋಡುವುದೇ ಒಂದು ಆನಂದ.

ಈ ಬಾರಿಯೂ ಹರ್ಷ ಅವರು ಫ್ಯಾಂಟಸಿ ಚಿತ್ರ ಮಾಡ್ತಾರಾ? ಇಲ್ಲವೆ ಎಂಬುದನ್ನು ಕಾದುನೋಡಬೇಕು. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ? ಎಂಬುದು ಇನ್ನಷ್ಟೇ ಗೊತ್ತಾಗಬೇಕು.

2013ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ 'ಭಜರಂಗಿ' ಚಿತ್ರ ದಾಖಲೆಗೆ ಕಾರಣವಾಗಿತ್ತು. ಬಾಕ್ಸ್ ಆಫೀಸಲ್ಲಿ ಮೊದಲ ವಾರದಲ್ಲೇ ಸರಿಸುಮಾರು ರು.9 ಕೋಟಿ ಕಲೆಕ್ಷನ್ ಮಾಡಿ ಜೈಕಾರ ಹಾಕಿತ್ತು. ಹಾಗಾಗಿ ಹರ್ಷ ಮುಂದಿನ ಚಿತ್ರದ ಬಗ್ಗೆಯೂ ಇದೇ ರೀತಿಯ ನಿರೀಕ್ಷೆಗಳಿವೆ. (ಏಜೆನ್ಸೀಸ್)

Read more about: shiva rajkumar, a harsha, jayasudha, ಶಿವರಾಜ್ ಕುಮಾರ್, ಎ ಹರ್ಷ, ಜಯಸುಧಾ

English summary
South Indian actress Jayasudha back to Sandalwood after seven years. She will act with Hat Trick Hero Shivrajkumar in Vajrakaya to be directed by A Harsha.
Please Wait while comments are loading...

Kannada Photos

Go to : More Photos