»   » ಕಾಮೋತ್ತೇಜಕ ಗುಳಿಗೆ ಮಾರುತ್ತಿರುವ ಸಿನಿಮಾ ತಾರೆ!

ಕಾಮೋತ್ತೇಜಕ ಗುಳಿಗೆ ಮಾರುತ್ತಿರುವ ಸಿನಿಮಾ ತಾರೆ!

Written by: ಅನಂತರಾಮು, ಹೈದರಾಬಾದ್
Subscribe to Filmibeat Kannada

ಈಕೆ ನೋಡಲು ಒಂದು ಕೋನದಿಂದ ನಮ್ಮ ಸುದೀಪ್ ಅವರ 'ನಲ್ಲ' ಚಿತ್ರದ ನಾಯಕಿ ಸಂಗೀತಾಳಂತೆಯೇ ಕಾಣುತ್ತಾರೆ. ಇನ್ನೊಂದು ಕೋನದಿಂದ ನೋಡಿದರೆ ಖುಷ್ಬು ತರಹ ಕಾಣಿಸಿದರೂ ಅಚ್ಚರಿಯಿಲ್ಲ! ಈಕೆಯನ್ನು ನಾನಾ ಕೋನಗಳಿಂದ ನೋಡಿದರೆ ನಾನಾ ತಾರೆಗಳು ನೆನಪಾಗಲೂಬಹುದು. ಆದರೆ ಅಸಲಿ ವಿಷಯ ಇದಲ್ಲ ಬಿಡಿ.

ಈಗ ಈಕೆ ಕಾಮೋತ್ತೇಜಕ ಗುಳಿಗೆಗಳನ್ನು ಮಾರುತ್ತಿದ್ದಾರೆ! ಈ ಹಿಂದೆ ಈಕೆ ವೇಶ್ಯಾವಾಟಿಕೆ ಜಾಲದಲ್ಲಿ ಆಂಧ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ತಾರೆಯ ಹೆಸರು ಜ್ಯೋತಿ. ಪಕ್ಕದ ಆಂಧ್ರಪ್ರದೇಶದ ತಾರಾಮಣಿ. ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಬಳಿಕ ನಾನೇನೂ ಮಾಡಿಲ್ಲ, ನನ್ನದೇನು ತಪ್ಪಿಲ್ಲ ಎಂದು ಮಾಧ್ಯಮಗಳ ಮುಂದೆ ಕಣ್ಣೀರ ಕೋಡಿ ಹರಿಸಿದ್ದಳು.

ಅದಾದ ಬಳಿಕ ಕ್ರಮೇಣ ಈಕೆಗೆ ಸಿನೆಮಾಗಳಲ್ಲಿ ಅವಕಾಶಗಳೂ ಗಗನಕುಸುಮವಾದವು. ಕೊಂಚ ಕಾಲ ಈಕೆ ತೆರೆಮರೆಗೂ ಸರಿದಿದ್ದರು. ಈಗ ಕಾಮೋತ್ತೇಜಕ ಗುಳಿಗೆಯೊಂದರ ಪ್ರಚಾರಕರ್ತೆಯಾಗಿ ಮತ್ತೆ ವೀಕ್ಷಕರ ಮುಂದೆ ಬಂದಿದ್ದಾರೆ. ಆ ಕಾಮೋತ್ತೇಜಕ ಗುಳಿಗೆ ಹೆಸರು 'ಶಕ್ತಿ ಪ್ರಕಾಶ್'.

ಕಿರುತೆರೆಯಲ್ಲಿ ಮೂಡಿಬರುವ ಟೆಲಿ ಶಾಪಿಂಗ್ ಜಾಹೀರಾತುಗಳಲ್ಲಿ ಈಕೆ ಕಾಣಿಸಿಕೊಳ್ಳುತ್ತಿದ್ದು, ಈ ಮಾತ್ರೆಗಳನ್ನು ಬಳಸಿದರೆ ನಿಮ್ಮಲ್ಲಿ ಲೈಂಗಿಕ ಬಯಕೆಗಳು ಪುಟಿದು ನಿಮ್ಮ ಸಂಗಾತಿಯ ಜೊತೆ ರತಿಕ್ರೀಡೆಯನ್ನು ಎಂಜಾಯ್ ಮಾಡಬಹುದು ಎಂದು ಪ್ರಚಾರ ಮಾಡುತ್ತಿದ್ದಾರೆ.

ಈ ಕಾಮೋತ್ತೇಕ ಮಾತ್ರೆಗಳ ಜಾಹೀರಾತಿಗೆ ಈಕೆ ಸಹಿ ಹಾಕಿದ್ದೇ ತಡ ಬಹಳಷ್ಟು ಇದೇ ರೀತಿಯ ಕಂಪನಿಗಳು ಈಕೆಯ ಮನೆ ಮುಂದೆ ಕ್ಯೂ ನಿಂತಿವೆಯಂತೆ. ಕಾಂಡೋಮ್ ಕಂಪನಿಗಳು, ಕಾಮೋತ್ತೇಜಕ ಔಷಧಿ ಕಂಪನಿಗಳು ಈಕೆಯ ಕಾಲ್ ಶೀಟ್ ಗಾಗಿ ಮುಗಿಬಿದ್ದಿವೆ. ಸಿನೆಮಾಗಳಿಗಿಂತಲೂ ಈಕೆಗೆ ಜಾಹೀರಾತುಗಳಿಂದಲೇ ಅಧಿಕ ಹಣ ಹರಿದುಬರುತ್ತಿದೆ ಎಂಬುದು ಟಾಲಿವುಡ್ ಸಮಾಚಾರ.

English summary
Telugu Actress Jyothi turned into Viagra sellers, she became a brand ambassador for those pills, she has been chosen to endorse ‘Shakti Prakash’, a brand that produces desi Viagra pills.
Please Wait while comments are loading...

Kannada Photos

Go to : More Photos