»   » ರಮ್ಯಾ ಮಗಳಿಗಾಗಿ ನಾಗಶೇಖರ್ ಹುಡುಕಾಟ ಜಾರಿ

ರಮ್ಯಾ ಮಗಳಿಗಾಗಿ ನಾಗಶೇಖರ್ ಹುಡುಕಾಟ ಜಾರಿ

Posted by:
Subscribe to Filmibeat Kannada

ಸಂಜು ವೆಡ್ಸ್ ಗೀತಾ ಚಿತ್ರ ಗೊತ್ತಲ್ಲ. ಸೆಂಟಿಮೆಂಟ್ ನಿರ್ದೇಶಕ ನಾಗಶೇಖರ್ ಮತ್ತೆ ನಾಯಕಿ ಹುಡುಕಾಟದಲ್ಲಿ ತೊಡಗಿದ್ದಾರೆ. ಲಕ್ಕಿ ಸ್ಟಾರ್ ರಮ್ಯಾ ಅವರು ದೊಡ್ಡಮನೆ ಹುಡುಗ ಚಿತ್ರದಿಂದ ಹೊರ ನಡೆದ ಮೇಲೆ,ಚಂದನವನದ ಚೆಂದದ ಗೊಂಬೆ ಕೃತಿ ಖರಬಂದ ಅವರು ಸಂಜು ವೆಡ್ಸ್ ಗೀತಾ ಎರಡನೇ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇಷ್ಟಕ್ಕೂ ಕೃತಿ ಅವರು ತಾನು ಸಂಜು ವೆಡ್ಸ್ ಗೀತಾ ಎರಡನೇ ಭಾಗದಲ್ಲಿ ನಟಿಸುತ್ತಿರುವ ಬಗ್ಗೆ ಹೆಚ್ಚೇನೂ ಹೇಳಿರಲಿಲ್ಲ. ನಿರ್ದೇಶಕ ನಾಗಶೇಖರ್ ಅವರೇ ಆತುರಾತುರವಾಗಿ ಕೃತಿ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂದು ಘೋಷಿಸಿ ಬಿಟ್ಟಿದ್ದರು.[ದೊಡ್ಮನೆ ಹುಡುಗನಿಗೆ ಕೈ ಕೊಟ್ಟ ಲಕ್ಕಿ ಸ್ಟಾರ್ ]

ಸಂಜು ವೆಡ್ಸ್ ಗೀತಾ ಚಿತ್ರದ ದೃಶ್ಯ ನಿಮಗೆ ನೆನಪಿದ್ದರೆ, ರಮ್ಯಾ ಪಾತ್ರಧಾರಿ ಮಗುವಿಗೆ ಜನ್ಮ ನೀಡಿ ಮರೆಯಾದ ದೃಶ್ಯದಿಂದ ಎರಡನೇ ಭಾಗದ ಕಥೆ ಆರಂಭವಾಗುತ್ತದೆಯಂತೆ. ಅಂದರೆ, ಎರಡನೇ ಭಾಗದಲ್ಲಿ ರಮ್ಯಾ ಪುತ್ರಿ ನಾಯಕಿಯಾಗಿರುತ್ತಾಳೆ ಎಂದು ನಾಗಶೇಖರ್ ಹೇಳಿದ್ದರು.

ಇದಲ್ಲದೆ, ನಾಯಕಿ ಪಾತ್ರಧಾರಿ ಅಂಧೆಯಾಗಿದ್ದು, ಒಂದು ಸುಂದರ ಪ್ರಣಯ ಕಥೆ ಇದಾಗಲಿದೆ ಎಂದು ನಾಗ್ ಹೇಳಿಕೊಂಡಿದ್ದರು. ಚಿತ್ರದ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದ ಡೈರೆಕ್ಟರ್ ನಾಗ್, ಇಡೀ ಚಿತ್ರ ಸೀಳ್ತುಟಿಯಲ್ಲಿ ಕಾಣಿಸಿಕೊಳ್ತಿದ್ದೀನಿ. ಎಂದಿದ್ದರು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗ್ಲಿ ಹುಡ್ಗಿ ಕೃತಿ, ನಾನು ಚಿತ್ರದ ಕಥೆ ಕೇಳಿ ಮೆಚ್ಚಿದ್ದೆ ಅಷ್ಟೇ. ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಯಾರು ಬೇಕಾದರೂ ಆ ಪಾತ್ರವನ್ನು ಒಪ್ಪಬಹುದು ಅಂಥ ಉತ್ತಮ ರೋಲ್ ಅದಾಗಿದೆ. ಆದರೆ, ನಾನು ಅನಿವಾರ್ಯ ಕಾರಣಗಳಿಂದ ಚಿತ್ರದಲ್ಲಿ ನಟಿಸಲಾಗುತ್ತಿಲ್ಲ ಎಂದಿದ್ದಾರೆ.

ಸ್ಪಷ್ಟನೆ ನೀಡಿರುವ ಗೂಗ್ಲಿ ಹುಡ್ಗಿ ಕೃತಿ
  

ಸ್ಪಷ್ಟನೆ ನೀಡಿರುವ ಗೂಗ್ಲಿ ಹುಡ್ಗಿ ಕೃತಿ

ನಾನು ಚಿತ್ರದ ಕಥೆ ಕೇಳಿ ಮೆಚ್ಚಿದ್ದೆ ಅಷ್ಟೇ. ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಯಾರು ಬೇಕಾದರೂ ಆ ಪಾತ್ರವನ್ನು ಒಪ್ಪಬಹುದು ಅಂಥ ಉತ್ತಮ ರೋಲ್ ಅದಾಗಿದೆ. ಆದರೆ, ನಾನು ಅನಿವಾರ್ಯ ಕಾರಣಗಳಿಂದ ಚಿತ್ರದಲ್ಲಿ ನಟಿಸಲಾಗುತ್ತಿಲ್ಲ ಎಂದು ಕೃತಿ ಹೇಳಿರುವುದರಿಂದ ಸೆಂಟಿಮೆಂಟ್ ನಿರ್ದೇಶಕ ನಾಗಶೇಖರ್ ಮತ್ತೆ ನಾಯಕಿ ಹುಡುಕಾಟದಲ್ಲಿ ತೊಡಗಿದ್ದಾರೆ.

  

ಸಂಜು ವೆಡ್ಸ್ ಗೀತಾ 2 ಒಳ್ಳೆ ಸ್ಕ್ರಿಪ್ಟ್

ಸಂಜು ವೆಡ್ಸ್ ಗೀತಾ 2 ಒಳ್ಳೆ ಸ್ಕ್ರಿಪ್ಟ್ ನನ್ನ ದುರದೃಷ್ಟ ನಾನು ನಟಿಸಲಾಗುತ್ತಿಲ್ಲ ಎಂದಿದ್ದಾರೆ.

  

ನಾನು ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ

ನಾನು ಬೇರೆ ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ. ಅದರಲ್ಲೂ ಸಂಜು ವೆಡ್ಸ್ ಗೀತಾ 2 ಕ್ಕೆ ಸಹಿ ಹಾಕೇ ಇಲ್ಲ

  

ಮಿಂಚಾಗಿ ನೀನು ಬರಲು ಚಿತ್ರ

ಮಿಂಚಾಗಿ ನೀನು ಬರಲು ಚಿತ್ರದಲ್ಲಿ ದೂಧ್ ಪೇಡ ದಿಗಂತ್ ಗೆ ಜೋಡಿಯಾಗಿ ಕೃತಿ ನಟಿಸುತ್ತಿದ್ದಾರೆ.

  

ಸೆಂಚುರಿ ಸ್ಟಾರ್ ಜತೆ ಕೃತಿ ಖರಬಂದ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜತೆ ಕೃತಿ ಖರಬಂದ ಬೆಳ್ಳಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  

ತಿರುಪತಿ ಎಕ್ಸ್ ಪ್ರೆಸ್ ಏರಿದ ಕೃತಿ

ಬೆಳ್ಳಿ, ಮಿಂಚಾಗಿ ನೀನು ಬರಲು ಅಲ್ಲದೆ ತಿರುಪತಿ ಎಕ್ಸ್ ಪ್ರೆಸ್ ಚಿತ್ರಕ್ಕೂ ಕೃತಿ ನಾಯಕಿ. ಇದಲ್ಲದೆ ತೆಲುಗುವಿನಲ್ಲಿ ಒಂದು ಚಿತ್ರದಲ್ಲೂ ಕೃತಿ ನಾಯಕಿಯಾಗಿದ್ದಾರೆ.

ನಾಗಶೇಖರ್ ಕನಸಿನ ಪಾತ್ರ ಹಾಗೂ ಚಿತ್ರ
  

ನಾಗಶೇಖರ್ ಕನಸಿನ ಪಾತ್ರ ಹಾಗೂ ಚಿತ್ರ

ನಾಗಶೇಖರ್ ಕನಸಿನ ಪಾತ್ರ ಹಾಗೂ ಚಿತ್ರ ಇದಾಗಿದ್ದು, ಮೊದಲ ಆವೃತ್ತಿ ಯಶಸ್ವಿಯಾಗಿದ್ದರಿಂದ ಎರಡನೇ ಆವೃತ್ತಿಯಲ್ಲಿ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದರು. ಸ್ವತಃ ತಾವೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು, ಸಾಧು ಕೋಕಿಲ ಮಗ ಸುರಾಗ್ ಅವರಿಗೆ ಸಂಗೀತ ಸಂಯೋಜನೆ ಹೊಣೆ ನೀಡುವುದು, ನಿರ್ದೇಶಕನಾಗಿ ನಾಗ್ ತಮ್ಮ ಚಿರಂಜೀವಿ ಕಾಣಿಸಿಕೊಳ್ಳುವುದು, ನಾಗ್ ಕಥೆ, ಚಿತ್ರಕಥೆ ಬರೆಯುವುದು ಎಂಬುದು ಸದ್ಯದ ಯೋಜನೆಯ ಡೀಟೈಲ್ಸ್.

English summary
After actress Ramya shocked everyone with her decision to back out of Dodmane Huduga, we hear that actress Kriti Kharbanda has also rejected the offer to act in the sequel of Sanju Weds Geetha.
Please Wait while comments are loading...

Kannada Photos

Go to : More Photos