»   » ಕನ್ನಡ ತಾರೆ ಮೇಘನಾ ರಾಜ್ ತಂಗಿ ಹನಿ ವಿಧಿವಶ

ಕನ್ನಡ ತಾರೆ ಮೇಘನಾ ರಾಜ್ ತಂಗಿ ಹನಿ ವಿಧಿವಶ

Written by: ಉದಯರವಿ
Subscribe to Filmibeat Kannada

ಈಗ ಏನು ಬರೆದರೂ ಓದುಗರು ಇದು ಏಪ್ರಿಲ್ ಫೂಲ್ ಸುದ್ದಿ ಇರಬೇಕು ಎಂಬ ಗುಮಾನಿಯಲ್ಲೇ ಓದುವಂತಾಗಿದೆ. ಹಾಗಾಗಿ ಮೊದಲೇ ಸ್ಪಷ್ಟಪಡಿಸುತ್ತಿದ್ದೇವೆ ಇದು ಏಪ್ರಿಲ್ ಫೂಲ್ ಸುದ್ದಿಯಂತೂ ಖಂಡಿತ ಅಲ್ಲವೇ ಅಲ್ಲ. ಕನ್ನಡ ಚಿತ್ರರಂಗದ ಸರಳ ಸುಂದರಿ ಮೇಘನಾ ರಾಜ್ ಅವರ ತಂಗಿ ವಿಧಿವಶರಾಗಿದ್ದಾರೆ.

ಅವರಿಗೆ ತಂಗಿ ಬೇರೆ ಇದ್ದರೆ ಎಂಬ ಡೌಟು ಎಲ್ಲರಿಗೂ ಬಂದೇ ಬರುತ್ತದೆ. ಇಲ್ಲಿ ತಂಗಿ ಅಂದರೆ ಅವರ ಒಡಹುಟ್ಟಿದವರಲ್ಲ. ಅವರ ಪ್ರೀತಿಪಾತ್ರದ ಮುದ್ದಿನ ನಾಯಿಮರಿ. ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಸುದ್ದಿ ಪ್ರಕಟಿಸಿದ್ದು, "ಅವಳು ಚಿತ್ರನಿದ್ರೆಗೆ ಜಾರಿದ್ದಾಳೆ...ಹನಿ...ನನ್ನ ಮೊಟ್ಟ ಮೊದಲ ಸಾಕುನಾಯಿ...ನಿನ್ನಂತಹ ತಂಗಿ ಸದಾ ನನ್ನ ಜೊತೆಗಿರಬೇಕೆಂದು ಬಯಸುತ್ತೇನೆ" ಎಂದು ದುಃಖದಿಂದ ಹೇಳಿಕೊಂಡಿದ್ದಾರೆ. [ಮೇಘನಾ, ಚಿರಂಜೀವಿ ಸರ್ಜಾ ಮದುವೆ ನಿಜವೇ?]


ಈ ಸಾಕು ನಾಯಿಯನ್ನು ಮೇಘನಾ ತಂಗಿಯಂತೆ ನೋಡಿಕೊಂಡಿದ್ದರು. ಈಗ ಅದು ವಿಧಿವಶವಾಗಿರುವುದು ಸಹಜವಾಗಿಯೇ ಅವರಿಗೆ ಬಹಳಷ್ಟು ನೋವಿಗೆ ಕಾರಣವಾಗಿದೆ. ಒಂದು ಸಾಕುನಾಯಿಯನ್ನು ತಂಗಿಯಂತೆ ಭಾವಿಸುವ ಎಷ್ಟು ಮಂದಿ ತಾರೆಗಳು ಸಿಗುತ್ತಾರೆ ನೀವೇ ಹೇಳಿ?[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕೆಲದಿನಗಳ ಹಿಂದೆ ಮೇಘನಾ ರಾಜ್ ಭಾರಿ ಗಾಸಿಪ್ ಸುದ್ದಿಗೆ ಸಿಲುಕಿದ್ದರು. ಈ ಗಾಸಿಪ್ ಸುದ್ದಿಗಳಿಗೆ ತಲೆಬುಡ ಎರಡೂ ಇರಲ್ಲ ಬಿಡಿ. ಕೆಲವೊಮ್ಮೆ ನಿಜವೂ ಆಗಿಬಿಡುತ್ತದೆ. ಕೆಲವು ಸಲ ಭಾರಿ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತವೆ. ಅಂತಹದ್ದೇ ಪರಿಸ್ಥಿತಿ ನಟ ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್-ಪ್ರಮೀಳಾ ಜೋಶಾಯ್ ಪುತ್ರಿ ಮೇಘನಾ ರಾಜ್ ಗೆ ಎದುರಾಗಿತ್ತು.

English summary
Kannada actress Meghana Raj adopted pet Honey died. The actress treated the dog as her sister. She tweets (meghanasraj), She now sleeps forever... Honey... My very first pet.. You were the little sister I always wanted."
Please Wait while comments are loading...

Kannada Photos

Go to : More Photos