» 

ಮುಳಬಾಗಿಲಿನಲ್ಲಿ ಮೈಮರೆಸಿದ ನಮಿತಾ ಡಾನ್ಸ್

Posted by:
 
Share this on your social network:
   Facebook Twitter Google+    Comments Mail

ಹೊಸ ವರುಷವನ್ನು ರಾಜ್ಯದ ಸಮಸ್ತ ಜನತೆ ಆದರದಿಂದ ಬರ ಮಾಡಿಕೊಂಡಿದ್ದಾರೆ. ಅದರಲ್ಲೂ ಕೋಲಾರದ ಹೈಕ್ಳು ಮದ್ಯ,ಮಾನಿನಿಗಳ ಕುಣಿತದೊಂದಿಗೆ ನಶೆಯೇರಿಸಿ 2013ಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

ಕೋಲಾರದ ಮುಳಬಾಗಿಲಿನಲ್ಲಿ ಜಿಎಂಎಸ್ ಗ್ರೂಪ್ ಹೊಸವರ್ಷಾಚರಣೆಯ ಪ್ರಯುಕ್ತ ರಸಸಂಜೆ ಕಾರ್ಯಕ್ರಮ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಹೆಸರಾಂತ ನಟಿ ಸೆಕ್ಸಿ ನಮಿತಾ ಬಂದು ಹೆಜ್ಜೆ ಹಾಕಿದ್ದು ವಿಶೇಷ.

ದುಂಡು ದುಂಡಾಗಿ ಉಬ್ಬಿ ಹೋಗಿರುವ ನಮಿತ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಪೋಷಾಕಿನಲ್ಲಿ ಗಿಟಾರ್ ಹಿಡಿದುಕೊಂಡು ವೇದಿಕೆಗೆ ಹೆಜ್ಜೆ ಹಾಕಲು ಬರುತ್ತಿದ್ದಂತೆ ನೆರೆದಿದ್ದ ಜನಸ್ತೋಮಕ್ಕೆ ಮಿಂಚಿನ ಸಂಚಾರ. ಪಟಾಕಿ ಹೊಡೆದು, ಶಿಳ್ಳೆ, ಚಪ್ಪಾಳೆ ಮೂಲಕ ನಮಿತಾಳನ್ನು ಸ್ವಾಗತಿಸಿದರು.

ಮೊದಲಿಗೆ ತೆಲುಗು ಹಾಡಿಗೆ ಹೆಜ್ಜೆ ಹಾಕಿದ ನಮಿತ ನಂತರ 'ಊರಿಗೊಬ್ಳೆ ಪದ್ಮಾವತಿ' ಹಾಡಿಗೆ ಸಂಗಡಿಗರೊಂದಿಗೆ ಡ್ಯಾನ್ಸ್ ಮಾಡಿದರು. ನಂತರ ಮತ್ತೊಂದು ತೆಲುಗು ಹಾಡಿಗೆ ಡ್ಯಾನ್ಸ್ ಮಾಡಿ ರಸಸಂಜೆ ಕಾರ್ಯಕ್ರಮಕ್ಕೆ ಬಂದವರ ಮನ ತಣಿಸಿದರು.

ವೇದಿಕೆ ಮುಂದೆ ಬಂದು ಎಲ್ಲಾ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಫೋಟೋ ತೆಗೆದು, ವಿಡಿಯೋ ರೆಕಾರ್ಡ್ ಮಾಡಿದ ಪಡ್ಡೆಗಳು ಧನ್ಯತಾ ಭಾವದಿಂದ 2012ಕ್ಕೆ ಮಂಗಳ ಹಾಡಿದರು. ಕಾರ್ಯಕ್ರಮದ ನಿರೂಪಣೆ ಕನ್ನಡದಲ್ಲಿ ಇತ್ತಾದರೂ ಹಾಡುಗಳು ಮಾತ್ರ ತೆಲುಗು ಮಯವಾಗಿದ್ದವು. ನೀವು ನಮಿತಾ ಜೊತೆ ಹೆಜ್ಜೆ ಹಾಕಿ. (ಕೃಪೆ: ಪಬ್ಲಿಕ್ ಟಿವಿ)

Topics: ನಮಿತಾ, ಕೋಲಾರ, ಮುಳಬಾಗಿಲು, ಡಾನ್ಸ್, namitha, kolar, mulbagal, dance
English summary
Actress Namithas latest hot dance in New Year Party ( 2013) Mulabagal, Kolara. The year end party was organized by Ananta International Spa.

Kannada Photos

Go to : More Photos