»   » ಮಂಡ್ಯದಲ್ಲಿ ರಮ್ಯಾ ಪರ ಪ್ರಚಾರಕ್ಕೆ ಜೈ ಎಂದ ರಾಗಿಣಿ

ಮಂಡ್ಯದಲ್ಲಿ ರಮ್ಯಾ ಪರ ಪ್ರಚಾರಕ್ಕೆ ಜೈ ಎಂದ ರಾಗಿಣಿ

Written by: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗದ ಎರಡು ಧ್ರುವಗಳು ಒಂದಾಗುವ ಸಮಯ ಬಂದಿದೆ. ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವದಂತಿದ್ದ ರಮ್ಯಾ ಮತ್ತು ರಾಗಿಣಿ ಇಬ್ಬರೂ ಕೈಕೈ ಹಿಡಿದು ಓಡಾಡುವ ಸಮಯ ಹತ್ತಿರವಾಗಿದೆ. ಆದರೆ ಇದಕ್ಕೆ ರಮ್ಯಾ ಗ್ರೀನ್ ಸಿಗ್ನಲ್ ಒಂದೇ ಬಾಕಿ ಉಳಿದಿರುವುದು.

ಈ ಬಾರಿಯ ಚುನಾವಣೆಗೆ ಯಾರ ಪರ ಪ್ರಚಾರ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ರಾಗಿಣಿ ಅವರು ಮಾತನಾಡುತ್ತಾ, ಶಿವಣ್ಣ ಹಾಗೂ ಗೀತಕ್ಕ ನನಗೆ ಇಬ್ಬರೂ ಬಹಳ ಆತ್ಮೀಯರು. ಅವರು ಕರೆದರೆ ಶಿವಮೊಗ್ಗದಲ್ಲಿ ಗೀತಕ್ಕನ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಅಲ್ಲಿಗೆ ಮಂಡ್ಯ ಬೆಣ್ಣೆ ಗೆಲುವಿಗೆ ಬಿಸಿಬಿಸಿ ತುಪ್ಪದ ಪ್ರಚಾರ ಎಂದಾಯಿತು. [ನಟಿ ರಾಗಿಣಿ ದ್ವಿವೇದಿಗೆ ಕೂಡಿಬಂತು ಕಂಕಣ ಭಾಗ್ಯ!]

Actress Ragini Dwivedi ready to Campaign for Ramya

ರಮ್ಯಾ ಅವರು ಕರೆದರೆ ಪ್ರಚಾರಕ್ಕೆ ಹೋಗುತ್ತೀರಿ ಎಂದು ಕೇಳಿದ್ದಕ್ಕೆ, ಒಂದು ವೇಳೆ ರಮ್ಯಾ ಅವರು ಕರೆದರೆ ಖಂಡಿತ ಮಂಡ್ಯದಲ್ಲಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ರಾಗಿಣಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಇನ್ನೇನಿದ್ದರೂ ರಮ್ಯಾ ಕರೆಯುವುದೊಂದು ಬಾಕಿ ಇದೆ ಅಷ್ಟೇ.

ಇದೆಲ್ಲಾ ಸರಿ ತಾವೂ ರಾಜಕೀಯಕ್ಕೆ ಯಾಕೆ ಇಳಿಯಬಾರದು? ಎಂದರೆ, ಸಿನಿಮಾ ತಾರೆಗಳಿಗೆ ರಾಜಕೀಯ ಎಂಬುದು ಪ್ರಬಲ ಮಾಧ್ಯಮ. ಮುಂದೊಂದು ದಿನ ತಾವು ರಾಜಕೀಯಕ್ಕೆ ಧುಮುಕುತ್ತೇನೆ. ಜನಕ್ಕೆ ತಾನು ಚಿತ್ರರಂಗದಲ್ಲಿ ಮಾಡಲು ಸಾಧ್ಯವಾಗದ್ದದ್ದು ರಾಜಕಾರಣಿಯಾಗಿ ಮಾಡಬೇಕೆಂದಿದ್ದೇನೆ. ಯಾವ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿರುತ್ತದೋ ಅದಕ್ಕೆ ಸೇರುತ್ತೇನೆ ಎಂದಿದ್ದಾರೆ.

ಊರಿಗೊಬ್ಬಳೆ ಪದ್ಮಾವತಿ ವಿಡಿಯೋ

ತಾವು ಸೇರಲಿರುವ ಪಕ್ಷ ಜನಪರವಾಗಿರಬೇಕು. ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಿರಬೇಕು. ಆ ರೀತಿಯ ಪಕ್ಷಕ್ಕೆ ಸೇರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ತಾವು ಚಿತ್ರರಂಗದಲ್ಲಿ ಬಿಜಿಯಾಗಿರುವ ಕಾರಣ ಯಾವುದೇ ಪಕ್ಷದ ಪರ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದೂ ತಿಳಿಸಿದ್ದಾರೆ.

ತುಪ್ಪ ಬೇಕಾ ತುಪ್ಪ ಹಾಡಿನ ವಿಡಿಯೋ

English summary
Actress Ragini Dwivedi ready to campaign for Ramya in Mandya, she sought votes for Ramya. The actress also to campaign Geetha Shivrajkumar in Shimoga. It is because of Shivanna, I have come here to campaign. I don't belong to any political party.
Please Wait while comments are loading...

Kannada Photos

Go to : More Photos